ಮತ್ತೆ CSK ಸೋಲಿಸಿದ ಆರ್​ಸಿಬಿ.. ಆಫ್​ ದಿ ಫೀಲ್ಡ್​ನಲ್ಲೂ ಬೆಂಗಳೂರೇ ನಂಬರ್ ಒನ್..!

author-image
Ganesh
Updated On
ಚೆನ್ನೈ ವಿರುದ್ಧ ಬಲಿಷ್ಠ ಆರ್​​ಸಿಬಿ ತಂಡ ಕಣಕ್ಕೆ; ಬೆಂಗಳೂರು ಟೀಮ್​ಗೆ ಸ್ಟಾರ್​ ಆಟಗಾರರ ಎಂಟ್ರಿ
Advertisment
  • ಆಫ್​ ದ ಫೀಲ್ಡ್​ನಲ್ಲೂ ಚೆನ್ನೈಗೆ RCB ಚಮಕ್.​.!
  • 3 ತಂಡಗಳದ್ದೇ ದರ್ಬಾರ್​.. ಉಳಿದವು ಸೈಲೆಂಟ್​..!
  • RCB ಮುಂದೆ 5 ಕಪ್​ ಗೆದ್ದ​ ಮುಂಬೈ ಇಂಡಿಯನ್ಸ್ ಏನಿಲ್ಲ

ಸೀಸನ್​​ 18ರ ಐಪಿಎಲ್​ನಲ್ಲಿ ಆರ್​​​ಸಿಬಿ ಬೊಂಬಾಟ್​ ಆರಂಭ ಪಡೆದುಕೊಂಡಿದೆ. 2 ಪಂದ್ಯ ಗೆದ್ದು ಶುಭಾರಂಭ ಮಾಡಿರೋ ಬೆಂಗಳೂರು ಬಾಯ್ಸ್​​ ಇದೀಗ ಎಲ್ಲರ ಫೇವರಿಟ್​. ಎಷ್ಟರಮಟ್ಟಿಗೆ ಅಂದ್ರೆ ರಾಯಲ್​ ಚಾಲೆಂಜರ್ಸ್​ ಮುಂದೆ 5 ಬಾರಿಯ ಚಾಂಪಿಯನ್​​​ ತಂಡಗಳಾದ​​​ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್​ ಕಿಂಗ್ಸ್​ ಕೂಡ ಏನಿಲ್ಲ. ಕಪ್​​ ಗೆಲ್ಲದಿದ್ರೆ ಏನಂತೆ ಜನಪ್ರಿಯತೆ ವಿಚಾರದಲ್ಲಿ ಆರ್​​ಸಿಬಿಯೇ ಐಪಿಎಲ್​ನ ಕಿಂಗ್​ ಅನ್ನೋದು ಮತ್ತೆ ಪ್ರೂವ್​ ಆಗಿದೆ.

ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​​ 18 ಕ್ರಿಕೆಟ್​ ಅಭಿಮಾನಿಗಳಿಗೆ ಮನರಂಜನೆ ಫುಲ್​​ ಮೀಲ್ಸ್​ ಉಣಬಡಿಸ್ತಿದೆ. ಬೌಂಡರಿ-ಸಿಕ್ಸರ್​​ಗಳ ಸುರಿಮಳೆ, ಬೌಲರ್​ಗಳ ವಿಕೆಟ್​​​ ​ಬೇಟೆ, ಟ್ವಿಸ್ಟ್​ ಅಂಡ್ ಟರ್ನ್​​​ಗಳ ಭರಾಟೆ ಫ್ಯಾನ್ಸ್​ಗೆ ಸಖತ್​ ಕಿಕ್​ ಕೊಡ್ತಿದೆ. ಅದ್ರಲ್ಲೂ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡದ ಲಾಯಲ್​ ಅಭಿಮಾನಿಗಳಿಗಂತೂ ಹಬ್ಬದೂಟವೇ ಸರಿ.

ಇದನ್ನೂ ಓದಿ: ಕರ್ನಾಟಕದಲ್ಲಿ ಮುಂದಿನ 4 ದಿನ ಮಳೆ ಎಚ್ಚರಿಕೆ.. ಎಲ್ಲೆಲ್ಲಿ ಪೂರ್ವ ಮುಂಗಾರು..?

publive-image

ಆರ್​​ಸಿಬಿ ತಂಡದ ಅಸಲಿ ಹೊಸ ಅಧ್ಯಾಯ ಸೀಸನ್​ 18ರಲ್ಲಿ ಶುರುವಾದಂತಿದೆ. ಬೋಲ್ಡ್​​ ಆಟವಾಡ್ತಿರೋ ರಾಯಲ್​​ ಹುಡುಗ್ರು ಅದ್ಧೂರಿ ಆರಂಭ ಮಾಡಿದ್ದಾರೆ. ಕೊಲ್ಕತ್ತಾ ನೈಟ್​​ ರೈಡರ್ಸ್​ ಮೇಲೆ ಅವರದೇ ಹೋಮ್​​ಗ್ರೌಂಡ್​ನಲ್ಲಿ ರೈಡ್​ ಮಾಡಿದ ಬೆಂಗಳೂರು ಬಾಯ್ಸ್​, ಚೆನ್ನೈನ ಚಿಂದಿ ಉಡಾಯಿಸಿದ್ದಾರೆ. ನಿಜ ಹೇಳಬೇಕಂದ್ರೆ ಚೆನ್ನೈ ವಿರುದ್ಧ ಚೆನ್ನೈನಲ್ಲಿ ಗೆದ್ದ ಗೆಲುವಿದ್ಯಲ್ಲ. ಅದು ಕಪ್​​ ಗೆದ್ದಷ್ಟೇ ಖುಷಿಯನ್ನ ನೀಡಿದೆ.

ಚೆನ್ನೈ ‘ಕಿಂಗ್ಸ್’​ ಮೀರಿಸಿದ ರಾಯಲ್​ ಚಾಲೆಂಜರ್ಸ್​

ಆನ್​​ಫೀಲ್ಡ್​ನಲ್ಲಿ ಮಾತ್ರ ಆರ್​​ಸಿಬಿ ಚೆನ್ನೈಗೆ ಚಮಕ್​ ಕೊಟ್ಟಿಲ್ಲ. ಆಫ್​ ದ ಫೀಲ್ಡ್​ ಬ್ಯಾಟಲ್​​​​​​​​ನಲ್ಲೂ ಆರ್​​ಸಿಬಿ ಚೆನ್ನೈನ ಬೀಟ್​ ಮಾಡಿದೆ. ಸತತ 2 ಪಂದ್ಯ ಗೆದ್ದು ಸೀಸನ್​ 18ರಲ್ಲಿ ಶುಭಾರಂಭ ಮಾಡಿದ ಬೆನ್ನಲ್ಲೇ ಆರ್​​ಸಿಬಿ ಪಾಪ್ಯುಲಾರಿಟಿ ನೆಕ್ಸ್ಟ್​ ಲೆವೆಲ್​ಗೆ ಹೋಗಿದೆ. ಚೆನ್ನೈನ ಹಿಂದಿಕ್ಕಿರೋ ಆರ್​​ಸಿಬಿ ಇನ್ಸ್​​​ಸ್ಟಾ ಗ್ರಾಂ ದುನಿಯಾದ ರಿಯಲ್​ ಕಿಂಗ್​ ಆಗಿ ಹೊರಹೊಮ್ಮಿದೆ.

ಇನ್ಸ್​​ಸ್ಟಾಗ್ರಾಂ ದುನಿಯಾಗೆ RCBಯೇ ಕಿಂಗ್​

ಇಷ್ಟು ದಿನ ಇನ್ಸ್​​ಸ್ಟಾಗ್ರಾಂ ದುನಿಯಾದ ಸಿಂಹಾಸನದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​​​​ ತಂಡ ವಿರಾಜಮಾನವಾಗಿತ್ತು. ಇದೀಗ ಚೆನ್ನೈನಲ್ಲಿ ಸಿಎಸ್​ಕೆ ಮಣಿಸಿದ ಆರ್​​ಸಿಬಿ ಸಿಂಹಾಸನ ಕಬ್ಜಾ ಮಾಡಿದೆ. 17.8 ಮಿಲಿಯನ್​ ಫಾಲೋವರ್ಸ್​ಗಳೊಂದಿಗೆ ಇನ್ಸ್​​​ಸ್ಟಾದಲ್ಲಿ ಅತಿ ಹೆಚ್ಚು ಫಾಲೋವರ್ಸ್​ನ ಹೊಂದಿರುವ ಐಪಿಎಲ್​ನ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 17.7 ಮಿಲಿಯನ್​ ಫಾಲೋವರ್ಸ್​ ಹೊಂದಿರೋ ಚೆನ್ನೈ ಸೂಪರ್​ ಕಿಂಗ್ಸ್​ 2ನೇ ಸ್ಥಾನಕ್ಕೆ ಕುಸಿದಿದೆ.

ಇದನ್ನೂ ಓದಿ: ಕ್ಯಾಪ್ಟನ್ ರಜತ್ ಪಾಟೀದಾರ್​ಗೆ ಬಿಗ್ ಶಾಕ್ ಕೊಟ್ಟ ಭುವನೇಶ್ವರ್​ ಕುಮಾರ್..!

RCB ಮುಂದೆ ಮುಂಬೈ ಏನಿಲ್ಲ

ಚೆನ್ನೈ ಬಿಟ್ಟರೆ ಮುಂಬೈ ಇಂಡಿಯನ್ಸ್​ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಸಕ್ಸಸ್​​ಫುಲ್​ ಫ್ರಾಂಚೈಸಿ. 5 ಬಾರಿ ಟ್ರೋಫಿ ಗೆದ್ದ ತಂಡ. ಪಾಪ್ಯುಲಾರಿಟಿ ವಿಚಾರಕ್ಕೆ ಬಂದ್ರೆ ಕಪ್​ ಗೆಲ್ಲದ ಆರ್​​ಸಿಬಿ ಮುಂದೆ ಮುಂಬೈ ಏನಿಲ್ಲ.. ಏನೇನಿಲ್ಲ.. ಚೆನ್ನೈ, ಆರ್​​ಸಿಬಿ ಫಾಲೋವರ್ಸ್​ ಸಂಖ್ಯೆ 17 ಮಿಲಿಯನ್​ ದಾಟಿದ್ರೆ ಮುಂಬೈ ಇಂಡಿಯನ್ಸ್​ ತಂಡ 16.2 ಮಿಲಿಯನ್ ಹಿಂಬಾಲಕರ ಹೊಂದಿದೆ.

3 ತಂಡಗಳದ್ದೇ ದರ್ಬಾರ್​..!

ಚೆನ್ನೈ ಸೂಪರ್​ ಕಿಂಗ್ಸ್​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಮುಂಬೈ ಇಂಡಿಯನ್ಸ್​. ಐಪಿಎಲ್​ನಲ್ಲಿ ಈ ಮೂರು ತಂಡಗಳ ಪಂದ್ಯಕ್ಕಿರೋ ಕ್ರೇಜ್​ ಬೇರೆ ಯಾವ ತಂಡಕ್ಕೂ ಇರಲ್ಲ. ಹಾಗೇ ಸೋಷಿಯಲ್​ ಮೀಡಿಯಾಗಳಲ್ಲೂ ಅಷ್ಟೇ ಈ ಮೂರು ತಂಡಗಳದ್ದೇ ದರ್ಬಾರ್​. ಇವ್ರ ಹೊರತಾಗಿ ಉಳಿದಿರೋ ತಂಡಗಳ ಫಾಲೋವರ್ಸ್​ ಸಂಖ್ಯೆ 10 ಮಿಲಿಯನ್​ ಗಡಿಯನ್ನೂ ದಾಟಿಲ್ಲ. ಕೊಲ್ಕತ್ತಾ ನೈಟ್​​ ರೈಡರ್ಸ್​​​ 7 ಮಿಲಿಯನ್​ ಫಾಲೋವರ್ಸ್​ ಹೊಂದಿರೋದೆ ಹೆಚ್ಚು.

ಇದನ್ನೂ ಓದಿ: 4, 4, 4, 4, 6, 6, 6, 6; ರೋಹಿತ್ ಶರ್ಮಾ ಅದೇ ರಾಗ, ಅದೇ ಹಾಡು.. ಭರ್ಜರಿ ಅರ್ಧಶತಕ ಸಿಡಿಸಿದ ರಯಾನ್

ಸೋಷಿಯಲ್​ ಮೀಡಿಯಾದ ಫಾಲೋವರ್ಸ್​​ ಸಂಖ್ಯೆ ಹೆಚ್ಚಾದ್ರೆ ಏನ್​ ಲಾಭ ಅನ್ಕೋಬೇಡಿ. ಕೋಟಿ-ಕೋಟಿ ಸುರಿಯೋ ಫ್ರಾಂಚೈಸಿಗಳಿಗೆ ಇದೂ ಒಂದು ಆದಾಯದ ಮೂಲವೇ. ಇಲ್ಲಿ ಹಾಕೋ ಪೋಸ್ಟ್​ಗಳಿಂದ ಹಣಗಳಿಸೋದು ಮಾತ್ರವಲ್ಲ. ಸ್ಪಾನ್ಸರ್ಸ್​​ ಕೂಡ ಈ ಪಾಪ್ಯುಲಾರಿಟಿಯನ್ನೂ ಗಮನಿಸಿಯೇ ಫ್ರಾಂಚೈಸಿ ಜೊತೆ ಟೈ ಅಪ್​ ಮಾಡಿಕೊಳ್ಳೋದು. ಐಪಿಎಲ್​ ಅಂದ್ರೆ ಮಿಲಿಯನ್​ ಡಾಲರ್​ ಟೂರ್ನಿ ಅನ್ನೋದು ಸುಮ್ಮನೆ ಅಲ್ಲ. ಇಲ್ಲಿ ಪ್ರತಿಯೊಂದು ವಿಚಾರದಲ್ಲೂ ಝಣ ಝಣ ಕಾಂಚಾಣದ ಸದ್ದು ಇದ್ದೇ ಇರುತ್ತೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment