ಚೆನ್ನೈಗೆ ಮತ್ತೆ ಬಿಗ್ ಶಾಕ್.. ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ಐಪಿಎಲ್ ತಂಡ RCB

author-image
Bheemappa
Updated On
ಚೆನ್ನೈಗೆ ಮತ್ತೆ ಬಿಗ್ ಶಾಕ್.. ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ಐಪಿಎಲ್ ತಂಡ RCB
Advertisment
  • ಒಂದೇ ಒಂದು ಗೆಲುವು RCB ಹಿಂದೆ ಬಿದ್ದ ಅಭಿಮಾನಿಗಳು
  • ಮುಂಬೈ ಇಂಡಿಯನ್ಸ್​ ಫಾಲೋವರ್ಸ್ ಕಡಿಮೆ ಆಗುತ್ತಿದ್ದಾರಾ?
  • ಆರ್​ಸಿಬಿಯನ್ನ ಫಾಲೋ ಮಾಡ್ತಿರುವ ಅಭಿಮಾನಿಗಳ ಸಂಖ್ಯೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಅಂದ್ರೆನೇ ಫ್ಯಾಷನ್, ಸ್ಟೈಲ್, ಕ್ರೇಜ್​, ಲುಕ್​ಗೆ ಹೆಸರುವಾಸಿ. ಸದ್ಯ ಈ ಬಾರಿಯ ಪಾಯಿಂಟ್​ ಪಟ್ಟಿಯಲ್ಲಿ ಟಾಪ್ ಸ್ಥಾನ ಪಡೆದು ಟ್ರೋಫಿ ಗೆಲ್ಲುವ ಕಡೆಗೆ ಮುನ್ನುಗ್ಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ಭರ್ಜರಿ ಅಭಿಮಾನಿಗಳನ್ನ ಸಂಪಾಧಿಸಿರುವ ಆರ್​ಸಿಬಿ, ಚೆನ್ನೈಯನ್ನು ಹಿಂದಿಕ್ಕಿರುವುದು ಫ್ಯಾನ್ಸ್​ಗೆ ಖುಷಿ ಸಂಗತಿ ಆಗಿದೆ.

ತವರಿನ​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು ಸೋಲಿಸಿರುವ ಆರ್​ಸಿಬಿ, ಇನ್​ಸ್ಟಾಗ್ರಾಮ್​ ಫಾಲೋವರ್ಸ್​ನಲ್ಲೂ ಅಗ್ರಸ್ಥಾನ ಪಡೆದುಕೊಂಡಿದೆ. ಇನ್​ಸ್ಟಾದಲ್ಲಿ ಕೇವಲ ಚೆನ್ನೈ ತಂಡವನ್ನು ಮಾತ್ರವಲ್ಲ, ಉಳಿದ 8 ಟೀಮ್​ಗಳನ್ನುನ ಆರ್​ಸಿಬಿ ಹಿಂದಿಕ್ಕಿ ಟಾಪ್​ನಲ್ಲಿದೆ. ಐಪಿಎಲ್​ನ 10 ತಂಡಗಳಿಗಿಂತ ಅತಿ ಹೆಚ್ಚು ಫಾಲೋವರ್ಸ್ ಅನ್ನು ಆರ್​ಸಿಬಿ ಹೊಂದಿದೆ. ಜೊತೆಗೆ ಚೆನ್ನೈಗೆ ಗುನ್ನಾ ಕೊಟ್ಟಿದೆ.

ಇದನ್ನೂ ಓದಿ:ಅವಮಾನ ಮೆಟ್ಟಿ ನಿಲ್ತಾರಾ ಪಾಂಡ್ಯ.. ಹ್ಯಾಟ್ರಿಕ್​ ಸೋಲಿನಿಂದ ತಪ್ಪಿಸಿಕೊಳ್ಳುತ್ತಾ ಮುಂಬೈ ಇಂಡಿಯನ್ಸ್​?

publive-image

ಇನ್​ಸ್ಟಾದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ 1,77,58,030 ಫಾಲೋವರ್ಸ್​ ಅನ್ನು ಹೊಂದಿದ್ರೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ 1,77,62,235 ಫಾಲೋವರ್ಸ್​ ಹೊಂದಿ ಟಾಪ್​ನಲ್ಲಿದೆ. ಉಳಿದ 8 ತಂಡಗಳು ಈ ಎರಡು ತಂಡಗಳಿಗಿಂತ ಕಡಿಮೆ ಫಾಲೋವರ್ಸ್​ ಹೊಂದಿವೆ. ಮುಂಬೈ 16.2 ಮಿಲಿಯನ್, ಕೆಕೆಆರ್ 7 ಮಿಲಿಯನ್, ಗುಜರಾತ್ ಟೈಟನ್ಸ್​ 4.5, ರಾಜಸ್ಥಾನ್ 4.7, ಪಂಜಾಬ್ 3.7 ಮಿಲಿಯನ್, ಹೈದ್ರಾಬಾದ್ 37.8ಕೆ ಫಾಲೋವರ್ಸ್​​ ಹೊಂದಿವೆ.

ಚೆಪಾಕ್ ಸ್ಟೇಡಿಯಂನಲ್ಲಿ ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ 50 ರನ್‌ಗಳಿಂದ ಭರ್ಜರಿ ಜಯ ಗಳಿಸಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 7 ವಿಕೆಟ್​ಗೆ 197 ರನ್​ಗಳ ಟಾರ್ಗೆಟ್ ನೀಡಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ್ದ ಸಿಎಸ್‌ಕೆ ಕೇವಲ 146 ಅಷ್ಟೇ ಗಳಿಸಿ ಹೀನಾಯವಾಗಿ ಸೋಲು ಕಂಡಿತು. ಈ ಪಂದ್ಯದಲ್ಲಿ ಆರ್​ಸಿಬಿ ನಾಯಕ ರಜತ್ ಪಾಟಿದಾರ್ ಅರ್ಧಶತಕ ಸಿಡಿಸಿ ಆರ್‌ಸಿಬಿಗೆ ನೆರವಾಗಿದ್ದರು. ಇದರಿಂದ 17 ವರ್ಷಗಳ ಸೋಲಿನ ಸರಣಿಗೆ ಆರ್​ಸಿಬಿ ಅಂತ್ಯ ಹಾಡಿದೆ. ಈ ಗೆಲುವಿನ ಬಳಿಕವೇ ಆರ್​ಸಿಬಿ ಫಾಲೋವರ್ಸ್ ಮತ್ತೆ ಹೆಚ್ಚಾಗಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment