ಮ್ಯಾಚ್ ಕೈತಪ್ಪಿ ಹೋಗಿತ್ತು.. ಕೊನೇ 2 ಓವರ್​ನಲ್ಲಿ ರೋಚಕ ತಿರುವು.. RCB ಗೆಲ್ಲಿಸಿದ್ದು ಯಾರು?

author-image
Ganesh
Updated On
RCB ಫ್ಯಾನ್ಸ್‌ಗೆ ಡಬಲ್ ಖುಷಿಯ ಸುದ್ದಿ.. ಮುಂದಿನ ವಾರದಿಂದ ಮತ್ತೆ IPL ಪಂದ್ಯಗಳು ಆರಂಭ?
Advertisment
  • 18ನೇ ಓವರ್​ನಲ್ಲಿ 22 ರನ್​ ಬಿಟ್ಟುಕೊಟ್ಟ ಭುವಿ
  • ಕೈತಪ್ಪಿ ಹೋಗಿದ್ದ ಮ್ಯಾಚ್​ಗೆ ತಿರುವು ಕೊಟ್ಟ ಜೋಶ್
  • ರಾಜಸ್ಥಾನ್​​ ತಂಡದ ವಿರುದ್ಧ 11 ರನ್​ಗಳ ಗೆಲುವು

ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್​ಸಿಬಿ 11 ರನ್‌ಗಳ ರೋಚಕ ಜಯ ಸಾಧಿಸಿದೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ಮೊದಲು ಬ್ಯಾಟ್ ಮಾಡಿದ್ದ ಆರ್‌ಸಿಬಿ, 205 ರನ್‌ಗಳ ಬೃಹತ್ ಸ್ಕೋರ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ರಾಜಸ್ಥಾನ 20 ಓವರ್‌ಗಳಲ್ಲಿ 194 ರನ್‌ ಗಳಿಸಿ ಸೋಲಿಗೆ ಶರಣಾಯ್ತು.

206 ರನ್​​ಗಳ ಗುರಿ ಬೆನ್ನು ಹತ್ತಿದ್ದ ಆರ್​ಆರ್​, ಉತ್ತಮ ಆರಂಭ ಪಡೆಯಿತು. ಜೈಸ್ವಾಲ್ ಮತ್ತು ವೈಭವ್ ಉತ್ತಮ ಸ್ಟಾರ್ಟ್​ ನೀಡಿದರು. 52 ರನ್‌ಗಳ ಆರಂಭಿಕ ಪಾಲುದಾರಿಕೆ ನೀಡಿದರು. ಆದರೆ ಸೂರ್ಯವಂಶಿ 16 ರನ್‌ ಗಳಿಸಿ ಔಟಾದರು. ಆದರೂ ಜೈಸ್ವಾಲ್ ಬಿರುಗಾಳಿಯ ರೀತಿಯಲ್ಲಿ ತಮ್ಮ ಆಟ ಮುಂದುವರಿಸಿದರು. ಕೊನೆಗೆ 19 ಎಸೆತಗಳಲ್ಲಿ 49 ರನ್ ಗಳಿಸಿ ಔಟಾದರು.
ಜೈಸ್ವಾಲ್ ನಂತರ ರಾಣಾ ಮತ್ತು ಪರಾಗ್ ಜವಾಬ್ದಾರಿ ತೆಗೆದುಕೊಂಡರು. ಇವರಿಬ್ಬರು ಸೇರಿ 38 ರನ್‌ಗಳ ಪಾರ್ಟ್ನರ್​ಶಿಪ್ ನೀಡಿದರು. ಒಂದು ಹಂತದಲ್ಲಿ ಆರ್​ಆರ್ 2 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿತ್ತು. ಮುಂದಿನ 24 ರನ್‌ಗಳಿಗೆ ಪ್ರಮುಖ ಮತ್ತೆರಡು ವಿಕೆಟ್ ಬಿದ್ದವು. ಪರಾಗ್ ಕೇವಲ 10 ಎಸೆತದಲ್ಲಿ 22 ರನ್ ಗಳಿಸಿ ಔಟಾದರೆ, ರಾಣಾ 28 ರನ್ ಗಳಿಸಿ ಪೆವಿಲಿಯನ್ ಸೇರಿದರು.

ಇದನ್ನೂ ಓದಿ: ಕನ್ನಡಿಗ ಪಡಿಕ್ಕಲ್, ವಿರಾಟ್​ ಕೊಹ್ಲಿ​​​ ಸ್ಫೋಟಕ ಬ್ಯಾಟಿಂಗ್​.. ರಾಯಲ್ಸ್​ಗೆ ರಾಯಲ್​ ಬಿಗ್ ಚಾಲೆಂಜ್​​​

publive-image

ಕೊನೆಯ 2 ಓವರ್​ನಲ್ಲಿ ತಿರುವು

ರಾಜಸ್ಥಾನ್ ರಾಯಲ್ಸ್ ಸುಲಭ ಗೆಲುವಿನತ್ತ ಸಾಗುತ್ತಿತ್ತು. 12ನೇ ಓವರ್ ಮುಗಿದ ನಂತರ ರಾಜಸ್ಥಾನ್ ತಂಡಕ್ಕೆ ಇನ್ನೂ 7 ವಿಕೆಟ್‌ ಹೊಂದಿತ್ತು. ಗೆಲ್ಲಲು 8 ಓವರ್‌ಗಳಲ್ಲಿ 78 ರನ್‌ಗಳನ್ನು ಅಗತ್ಯವಿತ್ತು. ಆದರೆ ಮುಂದಿನ 5 ಓವರ್‌ಗಳಲ್ಲಿ ಆರ್‌ಸಿಬಿ ಬೌಲರ್‌ಗಳು ಪ್ರಾಬಲ್ಯ ಸಾಧಿಸಿದರು. ಇದರ ಮಧ್ಯೆ ಭುವಿ 18ನೇ ಓವರ್‌ನಲ್ಲಿ 22 ರನ್ಸ್ ಬಿಟ್ಟುಕೊಟ್ಟರು. ಇದರಿಂದ ರಾಜಸ್ಥಾನ ಗೇಮ್​ಗೆ ಮತ್ತೆ ಕಂಬ್ಯಾಕ್ ಮಾಡಿತು.

ಇದನ್ನೂ ಓದಿ: ಡ್ರೋನ್​ ಪ್ರತಾಪ್​ ಲವ್ ಮ್ಯಾರೇಜ್ ಆಗ್ಬೇಕಾ? ಅರೇಂಜ್ಡ್ ಆಗ್ಬೇಕಾ? ಅಜ್ಜಿ ಮಾತಿಗೆ ಎಲ್ಲರೂ ಶಾಕ್!

publive-image

ಕೊನೆಯ 2 ಓವರ್‌ಗಳಲ್ಲಿ ರಾಜಸ್ಥಾನ್ ಗೆಲ್ಲಲು 18 ರನ್‌ಗಳ ಅಗತ್ಯ ಇತ್ತು. 19ನೇ ಓವರ್‌ನಲ್ಲಿ ಹೇಜಲ್‌ವುಡ್ 2 ವಿಕೆಟ್‌ ಪಡೆದಿದ್ದಲ್ಲದೆ, ಕೇವಲ ಒಂದು ರನ್ ನೀಡಿದರು. ಇನ್ನು ಕೊನೆಯ ಓವರ್​ನಲ್ಲಿ ದಯಾಳ್, 16 ರನ್ಸ್ ಡಿಪೆಂಟ್ ಮಾಡಿಕೊಳ್ಳಬೇಕಾಗಿತ್ತು. ಅದ್ಭುತವಾಗಿ ಬೌಲಿಂಗ್ ಮಾಡಿದ ದಯಾಳ್ ಐದು ರನ್​ ಮಾತ್ರ ನೀಡಿದರು. ಪರಿಣಾಮ ರಾಜಸ್ಥಾನ್ ರಾಯಲ್ಸ್, 11 ರನ್​ಗಳಿಂದ ಸೋಲನ್ನು ಕಂಡಿತು.

ಇದನ್ನೂ ಓದಿ: ಅಂತೂ, ಇಂತೂ ತವರಿನಲ್ಲಿ ಗೆದ್ದ ಆರ್​ಸಿಬಿ; ಗೆಲುವಿನ ಕ್ರೆಡಿಟ್ ಯಾರಿಗೆ ಕೊಟ್ರು ಪಾಟೀದಾರ್..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment