/newsfirstlive-kannada/media/post_attachments/wp-content/uploads/2024/11/RCB-5.jpg)
2025ರ ಇಂಡಿಯನ್ ಪ್ರೀಮಿಯರ್ ಮೆಗಾ ಹರಾಜು ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೀಮ್ ಇಂಡಿಯಾದ ಸಿಕ್ಸ್ ಹಿಟ್ಟಿಂಗ್ ಮಷಿನ್ ಖರೀದಿ ಮಾಡಿದೆ. ಅಂದರೆ ಆರ್ಸಿಬಿ ತಂಡಕ್ಕೆ ಸ್ಫೋಟಕ ಬ್ಯಾಟರ್ ಎಂಟ್ರಿಯಾಗಿದೆ.
ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಸ್ಟೇಟ್ ಟಿ20 ಲೀಗ್ನಲ್ಲಿ ಲೀಡಿಂಗ್ ಸ್ಕೋರರ್ ಆಗಿರೋ ಯುವ ಆಟಗಾರ ಸ್ವಸ್ತಿಕ್ ಚಿಕಾರ. ಫೋರ್ ಮತ್ತು ಸಿಕ್ಸ್ ಬಾರಿಸೋದರಲ್ಲಿ ಎತ್ತಿದ ಕೈ. ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಭಾರೀ ಹೆಸರು ಮಾಡಿರೋ ಇವರು ಆರ್ಸಿಬಿ ತಂಡ ಸೇರಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 30 ಲಕ್ಷ ಬೇಸ್ ಪ್ರೈಸ್ಗೆ ಖರೀದಿ ಮಾಡಿದೆ. ಇವರು ಆರ್ಸಿಬಿ ತಂಡದ ಬ್ಯಾಟಿಂಗ್ ಬ್ಯಾಲೆನ್ಸ್ ಮಾಡಬಲ್ಲರು. ಎದುರಾಳಿ ತಂಡ ಯಾವುದೇ ಆದ್ರೂ ಕ್ರೀಸ್ನಲ್ಲಿದ್ದರೆ ಸಿಕ್ಸ್ ಮತ್ತು ಫೋರ್ ಬಾರಿಸುತ್ತಾರೆ.
ಇವರ ಜತೆಗೆ ಆರ್ಸಿಬಿ ತಂಡ ವೇಗದ ಬೌಲರ್ ಲುಂಗಿ ಎನ್‌ಗಿಡಿ ಅವರನ್ನು 1 ಕೋಟಿಗೆ ಖರೀದಿ ಮಾಡಿದೆ. ಇಷ್ಟೇ ಅಲ್ಲ ಮೋಹಿತ್ ರಾತಿ ಮತ್ತು ಅಭಿನಂದನ್ ಸಿಂಗ್ ಅನ್ನೋ ಇಬ್ಬರು ಅನ್ಕ್ಯಾಪ್ಡ್ ಇಂಡಿಯನ್ ಪ್ಲೇಯರ್ಸ್ಗೆ ಬೇಸ್ ಪ್ರೈಸ್ 30 ಲಕ್ಷ ನೀಡಿ ಬಿಡ್ ಮಾಡಿದೆ.
ಇದನ್ನೂ ಓದಿ:ಮತ್ತೊಬ್ಬ ಕನ್ನಡಿಗನ ಖರೀದಿಸಿದ ಬೆಂಗಳೂರು.. ದೇವದತ್ ಪಡಿಕ್ಕಲ್ಗೆ RCB ಕೊಟ್ಟ ಹಣ ಎಷ್ಟು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ