ತವರಿನಲ್ಲಿ ಸೋಲು ಹೊರಗೆ ಗೆಲುವು.. ರಾಜಸ್ಥಾನದಲ್ಲಿ RCB ಗೆಲ್ಲೋದು ಪಕ್ಕಾನಾ?

author-image
admin
Updated On
ಚಿನ್ನಸ್ವಾಮಿಯಲ್ಲಿ ಸತತ 2ನೇ ಸೋಲು.. ಪಿಚ್ ಕ್ಯೂರೇಟರ್ ಹೊಣೆ ಮಾಡಿದ ಮ್ಯಾನೇಜ್ಮೆಂಟ್..!
Advertisment
  • ಆರ್​ಸಿಬಿಗೆ ತವರಿನಲ್ಲಿ 2 ಪಂದ್ಯ ಸೋತ ನೋವು ಹೆಚ್ಚು ಕಾಡ್ತಿದೆ
  • ತವರಿನಲ್ಲಿ ಘರ್ಜಿಸೋಕೆ ರಾಜಸ್ಥಾನ್ ರಾಯಲ್ಸ್​ ಕಾತರ
  • ಕ್ಯಾಚಸ್ ವಿನ್ ಮ್ಯಾಚಸ್, ಆರ್​ಸಿಬಿ ಆಟಗಾರರಿಗೆ ಇದು ನೆನಪಿರಲಿ

ಚಿನ್ನಸ್ವಾಮಿಯಲ್ಲಿ ಸತತ ಎರಡು ಪಂದ್ಯಗಳನ್ನ ಸೋತು ತೀವ್ರ ಮುಖಭಂಗ ಅನುಭವಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಇಂದು ಜೈಪುರದಲ್ಲಿ ಘರ್ಜಿಸೋಕೆ ಸಿದ್ಧವಾಗಿದೆ. ಬೆಂಗಳೂರು ಬಿಟ್ಟು ಹೊರಗಿನ ಪಂದ್ಯಗಳಲ್ಲಿ ಒಂದೇ ಒಂದು ಸೋಲು ಕಾಣದ ಆರ್​ಸಿಬಿ, ಇಂದು ರಾಜಸ್ಥಾನ್ ರಾಯಲ್ಸ್​ ತಂಡಕ್ಕೂ, ಸೋಲಿನ ರುಚಿ ತೋರಿಸೋಕೆ ತುದಿಗಾಲಲ್ಲಿ ನಿಂತಿದೆ.

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ, ಮೂರು ಪಂದ್ಯಗಳನ್ನ ಗೆದ್ದಿದೆ. ಆದ್ರೆ ಆ ಗೆಲುವಿಗಿಂತ ಆರ್​ಸಿಬಿಗೆ, ತವರಿನಲ್ಲಿ ಸೋತ ನೋವೇ ಹೆಚ್ಚಾಗಿ ಕಾಡ್ತಿದೆ. ಹಾಗಾಗಿ ಕಳೆದ ಪಂದ್ಯದ ಸೋಲನ್ನ ಮರೆಯಲು ಆರ್​ಸಿಬಿ ಮುಂದಾಗಿದೆ. ಇಂದು ರಾಜಸ್ಥಾನ್ ರಾಯಲ್ಸ್ ತಂಡವನ್ನ ಅವರದ್ದೇ ನೆಲದಲ್ಲಿ ಮಣಿಸಿ, ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಲು ಹೊರಟಿದೆ. ಆದ್ರೆ ಅದಕ್ಕೂ ಮುನ್ನ ಆರ್​ಸಿಬಿ, ಕೆಲ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಬೇಕಿದೆ.

publive-image

ಚಾಲೆಂಜ್ ನಂ.1: ಕೊಹ್ಲಿಗೆ ಕನ್ಸಿಸ್ಟೆನ್ಸಿ ಕಾಟ, ಪಟಿದಾರ್ ಪರದಾಟ!
ಕೆಕೆಆರ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ವಿರಾಟ್ ಕೊಹ್ಲಿ ಅಬ್ಬರಿಸಿದ್ರು. ಆದ್ರೆ ಡೆಲ್ಲಿ, ಗುಜರಾತ್ ಮತ್ತು ಚೆನ್ನೈ ವಿರುದ್ಧ ವಿರಾಟ್ ಸೈಲೆಂಟ್ ಆಗ್ಬಿಟ್ರು. ಕೊಹ್ಲಿ ಕನ್ಸಿಸ್ಟೆಂಟ್ ಬ್ಯಾಟಿಂಗ್ ಮಾಡಿದ್ರೆ, ಆರ್​ಸಿಬಿಗೆ ನೂರಾನೆ ಬಲ. ಆದ್ರೆ ಕೊಹ್ಲಿ ಇನ್​​ಕನ್ಸಿಸ್ಟೆಂಟ್ ಬ್ಯಾಟಿಂಗ್, ಆರ್​ಸಿಬಿಯನ್ನ ಇಕ್ಕಟ್ಟಿಗೆ ಸಿಲುಕಿಸುತ್ತಿದೆ.

ಕ್ಯಾಪ್ಟನ್ ರಜತ್ ಪಟಿದಾರ್ ಅಗ್ರೆಸಿವ್ ಬ್ಯಾಟಿಂಗ್​​​​​​​​​​, ಎದುರಾಳಿಗಳನ್ನ ಬ್ಯಾಕ್​​ಪೂಟ್​​​ಗೆ ತಳ್ತಿದೆ ನಿಜ. ಪಟಿದಾರ್​​​​​, ಬ್ಯಾಟಿಂಗ್​ನಲ್ಲಿ ತಂಡಕ್ಕೆ ಕಾಣಿಕೆ ನೀಡ್ತಿದ್ದಾರೆ. ಆದ್ರೆ ಡೆಲ್ಲಿ ಕ್ಯಾಪಿಟಲ್ಸ್​​​ ವಿರುದ್ಧ ಪಟಿದಾರ್ ಪರದಾಟ, ಆರ್​ಸಿಬಿ ಮ್ಯಾನೇಜ್ಮೆಂಟ್​ಗೆ ನಿಜಕ್ಕೂ ಆತಂಕ ಮೂಡಿಸಿದೆ. ಯಾಕಂದ್ರೆ ಚಾಲೆಂಜಿಂಗ್ ಪಿಚ್​ನಲ್ಲಿ ಪಟಿದಾರ್ ಆಟ ನಡೆಯೊಲ್ಲ ಅನ್ನೋದು, ಇದೀಗ ಓಪನ್ ಸೀಕ್ರೆಟ್ ಆಗಿದೆ.

ಚಾಲೆಂಜ್ ನಂ.2: ಪಡಿಕ್ಕಲ್, ಲಿವಿಂಗ್​ಸ್ಟೋನ್ ತಂಡಲ್ಲಿ ಇದ್ರೂ ಇಲ್ಲದಂತೆ!
ಎಡಗೈ ಬ್ಯಾಟ್ಸ್​ಮನ್​ ದೇವದತ್ ಪಡಿಕ್ಕಲ್ ತಂಡದಲ್ಲಿ ಅದ್ಯಾಕೆ ಇದ್ದಾರೋ ಗೊತ್ತಿಲ್ಲ. ಕೊಟ್ಟ ಅವಕಾಶಗಳನ್ನ ಪಡಿಕ್ಕಲ್ ಸುಮ್ಮನೇ ವೇಸ್ಟ್ ಮಾಡ್ತಿದ್ದಾರೆ. ಆಡಿರೋ ಐದೂ ಪಂದ್ಯಗಳಲ್ಲಿ ಪಡಿಕ್ಕಲ್, ಅಟ್ಟರ್ ಫ್ಲಾಪ್. ಲಿಯಾಮ್ ಲಿವಿಂಗ್​ಸ್ಟೋನ್​​ ಗುಜರಾತ್ ವಿರುದ್ಧ ಒಂದೇ ಒಂದು ಫಿಫ್ಟಿ ಹೊಡೆದಿದ್ದು ಬಿಟ್ರೆ, ಈ ಬಿಗ್ ​ಹಿಟ್ಟರ್ ತಂಡಲ್ಲಿ ಇದ್ರೂ ಇಲ್ಲದಂತೆಯೇ.

publive-image

ಚಾಲೆಂಜ್ ನಂ.3: ವಿಕೆಟ್ ಕಬಳಿಕೆಯಲ್ಲಿ ಟಾಪ್ 10ನಲ್ಲಿಲ್ಲ ಆರ್​ಸಿಬಿ ಬೌಲರ್ಸ್​..!
ಆರ್​ಸಿಬಿ ಪೇಸ್ ಬೌಲಿಂಗ್ ಅಟ್ಯಾಕ್, ಆನ್​ ಪೇಪರ್ ಸಖತ್ ಸ್ಟ್ರಾಂಗ್ ಆಗಿದೆ. ಆದ್ರೆ ಪಂದ್ಯ ಕಳೆದಂತೆ ಪೇಸರ್​ಗಳು ಧಮ್ ಕಳೆದುಕೊಳ್ತಿದ್ದಾರೆ. ದುಬಾರಿ ಕೂಡ ಆಗ್ತಿದ್ದಾರೆ. ಆರ್​ಸಿಬಿಯ ಒಬ್ಬನೇ ಒಬ್ಬ ಪೇಸರ್, ವಿಕೆಟ್ ಗಳಿಕೆಯಲ್ಲಿ ಟಾಪ್ 10ನಲ್ಲಿ ಕಾಣಿಸಿಕೊಂಡಿಲ್ಲ. ಆರ್​ಸಿಬಿ ಥಿಂಕ್ ಟ್ಯಾಂಕ್, ಇದರ ಬಗ್ಗೆ ಗಂಭೀರ ಆಲೋಚನೆ ನಡೆಸಬೇಕಿದೆ.

ಚಾಲೆಂಜ್ ನಂ.4: ಬೆಂಗಳೂರು ತಂಡಕ್ಕೆ 5ನೇ ಬೌಲರ್ ಕೊರತೆ ಕಾಡ್ತಿದ್ಯಾ..?
ಜೋಷ್ ಹೇಝಲ್​ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್ ಮತ್ತು ಕೃನಾಲ್ ಪಾಂಡ್ಯ, ಆರ್​ಸಿಬಿಯ ಮುಖ್ಯ ಬೌಲರ್ಸ್​. ಆದ್ರೆ ಇಂಪ್ಯಾಕ್ಟ್ ಪ್ಲೇಯರ್​ ಆಗಿ ಕಣಕ್ಕಿಳಿಯುತ್ತಿರುವ ಲೆಗ್​ಸ್ಪಿನ್ನರ್ ಸುಯೇಶ್ ಶರ್ಮಾರಿಂದ, ತಂಡಕ್ಕೆ ಏನೂ ಲಾಭ ಆಗ್ತಿಲ್ಲ. ಪಾರ್ಟ್ ಟೈಮ್ ಸ್ಪಿನ್ನರ್ ಲಿವಿಂಗ್​ಸ್ಟೋನ್​​ ಬೌಲಿಂಗ್ ಕೂಡ ಆರ್​ಸಿಬಿಗೆ ಪ್ರಯೋಜನವಿಲ್ಲ.

publive-image

ಚಾಲೆಂಜ್ ನಂ.5: ಕ್ಯಾಚಸ್ ವಿನ್ ಮ್ಯಾಚಸ್, ಆರ್​ಸಿಬಿ ಆಟಗಾರರಿಗೆ ಇದು ನೆನಪಿರಲಿ..!
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್​ಸಿಬಿ, ಕೆಎಲ್ ರಾಹುಲ್ ಕ್ಯಾಚ್ ಡ್ರಾಪ್ ಮಾಡಿ ಪಂದ್ಯವನ್ನೇ ಕೈಚೆಲ್ಲಿತು. ಇದಲ್ಲದೇ ಕಳೆದ ಐದು ಪಂದ್ಯಗಳಲ್ಲಿ ಆರ್​ಸಿಬಿ ಸಾಕಷ್ಟು ಕ್ಯಾಚ್​ಗಳನ್ನ ಡ್ರಾಪ್ ಮಾಡಿ, ಭಾರಿ ಬೆಲೆ ಕಟ್ಟಿದೆ. ಹಾಗಾಗಿ ಆರ್​ಸಿಬಿ, ಫೀಲ್ಡಿಂಗ್​​ ಟೈಟ್ ಮಾಡಬೇಕಿದೆ. ಹಾಗೇ ಕ್ಯಾಚಸ್ ವಿನ್ ಮ್ಯಾಚಸ್ ಅನ್ನೋದನ್ನ, ಆರ್​ಸಿಬಿ ಫೀಲ್ಡರ್ಸ್ ಗಮನದಲ್ಲಿಟ್ಟುಕೊಳ್ಳಬೇಕಿದೆ.

ಇದನ್ನೂ ಓದಿ: 40 ಬಾಲ್‌ಗೆ 100 ಸಂಭ್ರಮ.. ಅಭಿಷೇಕ್ ಶರ್ಮಾ ಚೀಟಿಯಲ್ಲಿ ಬರೆದಿದ್ದೇನು? ಏನಿದರ ವಿಶೇಷ ಗೊತ್ತಾ? 

ಚಾಲೆಂಜ್ ನಂ.6: ತವರಿನಲ್ಲಿ ಘರ್ಜಿಸೋಕೆ ರಾಜಸ್ಥಾನ್ ರಾಯಲ್ಸ್​ ಕಾತರ..!
ರಾಜಸ್ಥಾನ್ ರಾಯಲ್ಸ್ ಸಹ ಟೂರ್ನಿಯಲ್ಲಿ ಸೋಲುಗಳಿಂದ ಕಂಗೆಟ್ಟಿದೆ. ಆದ್ರೆ ಇದೇ ಮೊದಲ ಬಾರಿ ಹೋಂ ಗ್ರೌಂಡ್ ಜೈಪುರದಲ್ಲಿ ಆಡ್ತಿರುವ ರಾಜಸ್ಥಾನ ತಂಡಕ್ಕೆ, ಆನೆ ಬಲ ಬಂದಂತಾಗಿದೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್​ನಲ್ಲಿ ಸಖತ್ ಆಗಿ ಕಾಣುವ ರಾಜಸ್ಥಾನ ತಂಡಕ್ಕೆ, ಯುವ ಪಡೆಯ ಶಕ್ತಿ ಇದೆ. ಹಾಗಾಗಿ ರಾಯಲ್ಸ್​ ಇಂದು ಬೆಂಗಳೂರು ತಂಡದ ವಿರುದ್ಧ ಗೆಲುವಿನ ಲೆಕ್ಕಾಚಾರದಲ್ಲಿದೆ.

ಬೆಂಗಳೂರು ಬಿಟ್ಟು ಹೊರಗಿನ ಮ್ಯಾಚ್​ಗಳಲ್ಲಿ ಒಳ್ಳೆ ರೆಕಾರ್ಡ್ ಹೊಂದಿರುವ ಆರ್​ಸಿಬಿ, ಪಿಂಕ್ ಸಿಟಿ ಜೈಪುರದಲ್ಲೂ ಜಯಗಳಿಸೋ ವಿಶ್ವಾಸದಲ್ಲಿದೆ. ಮತ್ತೊಂದೆಡೆ ತವರಿನಲ್ಲಿ ರಾಜಸ್ಥಾನ್ ರಾಯಲ್ಸ್​​​ನ ಯುವ ಪಡೆ, ಬೆಂಗಳೂರು ವಿರುದ್ಧ ಘರ್ಜಿಸೋಕೆ ರೆಡಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment