ಆರ್​ಸಿಬಿಗೆ ಚಿನ್ನಸ್ವಾಮಿ ಕಂಟಕ.. ತವರಿನಲ್ಲಿ ಗೆಲ್ಲಲು ರೆಡ್​ ಆರ್ಮಿಗೆ ಐದು ಬಿಗ್ಗೆಸ್ಟ್ ಚಾಲೆಂಜ್..!

author-image
Ganesh
Updated On
RCB ಕಪ್ ಗೆಲ್ಲಬೇಕಾ?; ಈ ಪ್ಲೇಯರ್ಸ್​ ರೋಲ್ ಇಂಪಾರ್ಟೆಂಟ್​.. ಇವರು ಏನೇನು ಮಾಡಬೇಕು?
Advertisment
  • ಇಂದು ಆರ್​ಸಿಬಿ, ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಅಖಾಡಕ್ಕೆ
  • ಮೂರು ಪಂದ್ಯ ಗೆದ್ದುಕೊಂಡಿರುವ ಆರ್​ಸಿಬಿ ಟೀಂ
  • ಸೋಲನ್ನೇ ಕಾಣದೇ ಮುನ್ನುಗ್ಗುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್

ರಾಯಲ್ ಚಾಲೆಂಜರ್ಸ್​ ಬೆಂಗಳೂರು ಇವತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ತವರಿನ ಅಂಗಳ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಆರ್​ಸಿಬಿ ಗೆದ್ದಿರೋದ್ಕಿಂತ ಸೋತಿದ್ದೇ ಹೆಚ್ಚು. 18ನೇ ಆವೃತ್ತಿಯಲ್ಲಿ ಹೋಮ್​ಗ್ರೌಂಡ್​ನಲ್ಲಿ ನಡೆದ ಮೊದಲ ಪಂದ್ಯದಲ್ಲೇ ಸೋಲನ್ನು ಕಂಡಿದೆ. ಗುಜರಾತ್ ಟೈಟನ್ಸ್​ ವಿರುದ್ಧ ಆರ್​ಸಿಬಿ ಸೋತಿದೆ. ಇಂದು ತವರಿನ ಅಡ್ವಾಂಟೇಜ್ ಪಡೆದು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಗೆಲ್ಲಬೇಕು ಅಂದರೆ ಆರ್​ಸಿಬಿ ಕಠಿಣ ಸವಾಲು ಎದುರಿಸಬೇಕಾಗಿದೆ.

ಚಿನ್ನಸ್ವಾಮಿ ಕಂಟಕ..!

ಹೋಮ್​ಗ್ರೌಂಡ್​ ಅನ್ನೋದು ಪ್ರತಿ ತಂಡಕ್ಕೂ ಅಡ್ವಾಂಟೇಜ್ ಆಗಿರುತ್ತೆ. ಯಾವಾಗ್ಲೂ ತವರಿನ ತಂಡವೇ ಗೆಲ್ಲೋ ಫೇವರಿಟ್ ಅನಿಸಿರುತ್ತೆ. ಆರ್​ಸಿಬಿ ವಿಚಾರದಲ್ಲಿ ಇದು ಉಲ್ಟಾ. ಚಿನ್ನಸ್ವಾಮಿಯಲ್ಲಿ ಆರ್​ಸಿಬಿ, ಇದುವರೆಗೆ 92 ಪಂದ್ಯಗಳನ್ನಾಡಿದೆ. ಈ ಪೈಕಿ 43 ಪಂದ್ಯಗಳಲ್ಲಿ ಗೆದ್ದಿರುವ ಆರ್​ಸಿಬಿ, 48.96ರ ವಿನ್ನಿಂಗ್ ಪರ್ಸೇಂಟೇಜ್ ಹೊಂದಿದೆ. ಹೋಮ್​​ಗ್ರೌಂಡ್​ ಚಿನ್ನಸ್ವಾಮಿಯಲ್ಲಿ 7 ಪಂದ್ಯಗಳನ್ನಾಡಲಿರುವ ಆರ್​ಸಿಬಿ, ಕನಿಷ್ಟ ಅಂದ್ರೂ 5 ಪಂದ್ಯಗಳನ್ನ ಗೆಲ್ಲಲೇಬೇಕಿದೆ. ಗೆದ್ರೆ ಪ್ಲೇ ಆಫ್​ ಎಂಟ್ರಿ ಸುಲಭವಾಗಲಿದೆ. ಚಿನ್ನಸ್ವಾಮಿಯ ಈ ಹಿಂದಿನ ದಾಖಲೆಗಳು ಆರ್​​ಸಿಬಿಗೆ ವಿರುದ್ಧವಾಗಿವೆ. ಹಳೆಯ ದಾಖಲೆಯನ್ನ ಸುಳ್ಳಾಗಿಸಿ ತಂಡವನ್ನ ಗೆಲುವಿನ ದಡ ಸೇರಿಸೋ ಜವಾಬ್ದಾರಿ ಇದೀಗ ಕ್ಯಾಪ್ಟನ್​ ರಜತ್​ ಪಟಿದಾರ್​ ಮುಂದಿದೆ.

ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗೆಲ್ಲುವ ಫೇವರಿಟ್ ತಂಡ ಯಾವುದು.. ಆರ್​​ಸಿಬಿನಾ, ಡೆಲ್ಲಿನಾ?

publive-image

​ಕೊಹ್ಲಿ ಮೇಲೆ ಬೆಟ್ಟದಷ್ಟು ನಿರೀಕ್ಷೆ

ಚಿನ್ನಸ್ವಾಮಿ ವಿರಾಟ್​ ಕೊಹ್ಲಿಯ ಫೇವರಿಟ್ ಗ್ರೌಂಡ್. ಈ ಅಂಗಳದಲ್ಲಿ ಕಿಂಗ್ ಕೊಹ್ಲಿ ರನ್ ಸುನಾಮಿಯನ್ನೇ ಸೃಷ್ಟಿಸಿದ್ದಾರೆ. ಈ ಸೀಸನ್​ನಲ್ಲೂ ತನ್ನ ಫೇವರಿಟ್​ ಗ್ರೌಂಡ್​ನಲ್ಲಿ ವಿರಾಟ್ ವೀರಾವೇಶ ಮುಂದುವರಿಸಬೇಕಿದೆ. ತವರಿನ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆಯಿಟ್ಟಿದ್ದಾರೆ. ಆ ನಿರೀಕ್ಷೆಯನ್ನ ನಿಜವಾಗಿಸಬೇಕಿದೆ.

ವಿದೇಶಿ ಬ್ಯಾಟರ್ಸ್

ಚಿನ್ನಸ್ವಾಮಿ ಸ್ಟೇಡಿಯಂ ಬ್ಯಾಟರ್​​​ಗಳಿಗೆ ಹೇಳಿ ಮಾಡಿಸಿದಂತಿದೆ. ವಿದೇಶಿ ಬ್ಯಾಟ್ಸ್​ಮನ್ಸ್ ಈ ಬ್ಯಾಟಿಂಗ್ ಸ್ವರ್ಗದ ​ಅಡ್ವಾಂಟೇಜ್ ತೆಗೆದುಕೊಳ್ಳಬೇಕಿದೆ. ಆರಂಭದಿಂದಲೇ ಫಿಲ್ ಸಾಲ್ಟ್​ ಸಿಡಿಗುಂಡಿನಂತೆ ಸಿಡಿದ್ರೆ, ಮಿಡಲ್ ಓವರ್​​ ಮತ್ತು ಸ್ಲಾಗ್ ಓವರ್​ಗಳಲ್ಲಿ ಲಿಯಾಮ್ ಲಿವಿಂಗ್ ಸ್ಟೋನ್, ಟಿಮ್ ಡೇವಿಡ್ ದಂಡಯಾತ್ರೆ ಮಾಡಿದ್ರೆ, ಆರ್​ಸಿಬಿ ಗೆಲುವು ಪಕ್ಕಾ.

ಇದನ್ನೂ ಓದಿ: ಆರ್​ಸಿಬಿ vs ಮಾಜಿ ಆರ್​ಸಿಬಿ ಆಟಗಾರರು.. ಡೆಲ್ಲಿ ಕ್ಯಾಪಿಟಲ್ಸ್​ನಲ್ಲಿ ಇವ್ರದ್ದೇ ದರ್ಬಾರ್​​..!

publive-image

ಬೌಂಡರಿ ತಡೆಯೋದೇ ಚಾಲೆಂಜ್!

ಚಿಕ್ಕ ಬೌಂಡರಿಗಳಿರೋ ಚಿನ್ನಸ್ವಾಮಿ ಸ್ಟೇಡಿಯಂ ಬೌಲರ್​ಗಳ ಪಾಲಿಗೆ ಎಂದಿಗೂ ವಿಲನ್​​​. ಈ ಕಾರಣದಿಂದಲೇ ಆರ್​ಸಿಬಿ 17 ವರ್ಷಗಳಿಂದಲೂ ಹಿನ್ನಡೆ ಅನುಭವಿಸಿದೆ. ಈ ಸೀಸನ್​ನಲ್ಲಿ ಕೊಲ್ಕತ್ತಾ ಹಾಗೂ ಚೆನ್ನೈನಲ್ಲಿ ಅದ್ಭುತ ದಾಳಿ ಸಂಘಟಿಸಿರೋ ಜೋಶ್ ಹೇಜಲ್​ವುಡ್​, ಯಶ್ ದಯಾಳ್​, ಸ್ವಿಂಗ್ ಮಾಸ್ಟರ್​ ಭುವನೇಶ್ವರ್ ಕುಮಾರ್​​ ಹೊಸ ಭರವಸೆ ಮೂಡಿಸಿದ್ದಾರೆ. ಈ ತ್ರಿಮೂರ್ತಿಗಳು ಚಿನ್ನಸ್ವಾಮಿ ಅಂಗಳದಲ್ಲೂ ಬೌಂಡರಿಗಳಿಗೆ ಬ್ರೇಕ್​ ಹಾಕಿದ್ರೆ ಆರ್​​ಸಿಬಿ ಗೆಲುವನ್ನ ತಡಿಯೋರೆ ಇಲ್ಲ.

ಸ್ಪೆಷಲಿಸ್ಟ್ ಸ್ಪಿನ್ನರ್ ಕೊರತೆ ನಿಭಾಯಿಸಬೇಕು!

ಕೃನಾಲ್ ಪಾಂಡ್ಯ, ಸುಯೆಶ್ ಶರ್ಮಾ, ಸ್ವಪ್ನಿಲ್ ಸಿಂಗ್, ಲಿಯಾಮ್ ಲಿವಿಂಗ್ ಸ್ಟೋನ್ RCB ತಂಡದಲ್ಲಿರೋ ಸ್ಪಿನ್​ ಬೌಲರ್​ಗಳಾಗಿದ್ದಾರೆ. ಈ ಪೈಕಿ ಸುಯೆಶ್​ ಶರ್ಮಾ ಚಿನ್ನಸ್ವಾಮಿಯಲ್ಲಿ ಆಡಿದ ಅನುಭವ ಕಡಿಮೆಯಿದೆ. ಉಳಿದವರ್ಯಾರೂ ಸ್ಪೆಷಲಿಸ್ಟ್​ ಸ್ಪಿನ್ನರ್​ಗಳಲ್ಲ. ಸದ್ಯಕ್ಕಂತೂ ಇವ್ರ ಬೌಲಿಂಗ್ ಚಿನ್ನಸ್ವಾಮಿಯ ಬ್ಯಾಟಿಂಗ್​ ಟ್ರ್ಯಾಕ್​ನಲ್ಲಿ ಎಫೆಕ್ಟಿವ್​ ಆಗುತ್ತೆ ಅನ್ನಿಸ್ತಿಲ್ಲ. ಈ ಸ್ಪಿನ್ನರ್​ಗಳನ್ನ ರಜತ್​ ಪಾಟಿದಾರ್ ಹೇಗೆ ಬಳಸಿಕೊಳ್ತಾರೆ ಅನ್ನೋದು ಕುತೂಹಲ ಮೂಡಿಸಿದೆ. ಜೊತೆಗೆ ಪರಿಸ್ಥಿತಿಗೆ ಅನುಗುಣವಾಗಿ ಇವ್ರನ್ನ ಬಳಸಿಕೊಳ್ಳೋದ್ರ ಮೇಲೆಯೇ ಆರ್​​ಸಿಬಿ ಗೆಲುವು ನಿಂತಿದೆ.

ಇದನ್ನೂ ಓದಿ: ಇವತ್ತಿನ RCB ಪಂದ್ಯಕ್ಕೆ ಮಳೆ ಬರುತ್ತಾ..? ಹೇಗಿರಲಿದೆ ಬೆಂಗಳೂರು ವಾತಾವರಣ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment