/newsfirstlive-kannada/media/post_attachments/wp-content/uploads/2024/11/RCB-5.jpg)
ಐಪಿಎಲ್ ಟೂರ್ನಿಯ 20ನೇ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ನಡುವಿನ ಹೈ-ವೋಲ್ಟೇಜ್ ಬ್ಯಾಟಲ್ಗೆ, ಮುಂಬೈನ ಐಕಾನಿಕ್ ವಾಂಖೆಡೆ ಸ್ಟೇಡಿಯಂ ಸಾಕ್ಷಿಯಾಗ್ತಿದೆ. ವಾಂಖೆಡೆಯಲ್ಲಿ ವಂಡರ್ ಸೃಷ್ಟಿಸಲು ಉಭಯ ತಂಡಗಳು ಸನ್ನದ್ಧವಾಗಿದೆ. ಹೈವೋಲ್ಟೆಜ್ ಕದನ ನೋಡಲು ಫ್ಯಾನ್ಸ್ ತುದಿಗಾಲಿನಲ್ಲಿ ನಿಂತಿದ್ದಾರೆ.
ಮುಂಬೈ ಬ್ಯಾಟರ್ಸ್ ಖೆಡ್ಡಾಗೆ ಕೆಡವಲು ಆರ್ಸಿಬಿ ಥಿಂಕ್ ಟ್ಯಾಂಕ್ಸ್, ಪೇಸರ್ಸ್ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಪ್ರಸಕ್ತ ಐಪಿಎಲ್ನಲ್ಲಿ ಸಾಲಿಡ್ ಸ್ಪೆಲ್ ಹಾಕ್ತಿದ್ದಾರೆ. ಹೊಸ ಬಾಲ್ ಹಿಡಿದು ದಾಳಿಗಿಳಿತಾ ಇರೋ ಭುವಿ ಬ್ಯಾಟ್ಸ್ಮನ್ಗಳನ್ನ ಟ್ರಬಲ್ ಮಾಡ್ತಿದ್ದಾರೆ.
ಇದನ್ನೂ ಓದಿ: Kohli vs Bumrah ಕಾಳಗ ನೋಡೋದೇ ಥ್ರಿಲ್ಲಿಂಗ್.. ಬುಮ್ರಾಗೆ ಕೊಹ್ಲಿ ಎಷ್ಟು ಬಾರಿ ಔಟ್ ಆಗಿದ್ದಾರೆ..?
ಪವರ್ ಪ್ಲೇನಲ್ಲಿ ಪವರ್ಫುಲ್ ಬೌಲಿಂಗ್ ಮಾಡ್ತಿರೋ ಭುವನೇಶ್ವರ್, ಡೆತ್ ಓವರ್ಗಳಲ್ಲೂ ಬ್ಯಾಟ್ಸ್ಮನ್ಗಳ ಅಬ್ಬಕ್ಕೆ ಕಡಿವಾಣ ಹಾಕ್ತಿದ್ದಾರೆ. ಈ ಸೀಸನ್ನಲ್ಲಿ ಕೇವಲ 6.14ರ ಎಕಾನಮಿಯಲ್ಲಿ ರನ್ ಬಿಟ್ಟು ಕೊಟ್ಟಿರೋ ಭುವಿ ವಾಂಖೆಡೆ ಅಂಗಳದಲ್ಲಿ ಎಕಾನಮಿಕಲ್ ಸ್ಪೆಲ್ ಹಾಕಿರೋ ದಾಖಲೆ ಹೊಂದಿದ್ದಾರೆ. ಹೀಗಾಗಿ ಈ ಆಟಗಾರ ಇವತ್ತು ಮಿಂಚಿದ್ರೆ ಆರ್ಸಿಬಿ ಗೆಲುವು ಸುಲಭವಾಗಲಿದೆ.
ವಾಂಖೆಡೆಯಲ್ಲಿ ಭುವಿ
- ಪಂದ್ಯ 13
- ಓವರ್ಸ್ 45.1
- ವಿಕೆಟ್ಸ್ 11
- ಎಕಾನಮಿ 6.61
ಇದನ್ನೂ ಓದಿ: RCB vs MI ಪಿಚ್ ರಿಪೋರ್ಟ್! ಗೆಲ್ಲಲು ಪಾಟೀದಾರ್ ನಿರ್ಧಾರ ಏನಾಗಿರಬೇಕು..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್