/newsfirstlive-kannada/media/post_attachments/wp-content/uploads/2025/06/RCB_TEAM_BOWLERS.jpg)
ಬೌಲರ್ಸ್​ ವಿನ್ಸ್​ ಮ್ಯಾಚಸ್​​​, ಈ ಮಾತನ್ನ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಈ ಸೀಸನ್​ನಲ್ಲಿ ನಿಜವಾಗಿಸಿದೆ. ರೆಡ್​​ ಆರ್ಮಿಯ ಸಕ್ಸಸ್​​ಫುಲ್​ ಯಾತ್ರೆಯಲ್ಲಿ ಬಾಲಿಂಗ್ ವಿಭಾಗ ಕೀ ರೋಲ್​ ಪ್ಲೇ ಮಾಡಿದೆ. ಇದೀಗ ಫೈನಲ್​ಗೆ ಎಂಟ್ರಿ ನೀಡಿರೋ ಆರ್​​ಸಿಬಿ ಟ್ರೋಫಿಗೆ ಮುತ್ತಿಡಬೇಕಾದ್ರೆ, ಈ ಪಂಚ ಪಾಂಡವರ ಆಟ ಮೋಸ್ಟ್​ ಕ್ರೂಶಿಯಲ್​. ಇವರ ಆಟ ನಡೆದ್ರೆ, ಆರ್​ಸಿಬಿ ಟ್ರೋಫಿ ಗೆಲ್ಲೋದು ಶತಸಿದ್ಧ.
ಸೀಸನ್-18ರ ಕಲರ್​ಫುಲ್​​​​​​​​​​​​​​​​​​​​​​ ಟೂರ್ನಿ ಕ್ಲೈಮ್ಯಾಕ್ಸ್ ಹಂತ ತಲುಪಿದೆ. 70 ರೋಚಕ ಲೀಗ್​ ಮ್ಯಾಚ್​ಗಳು.. ಮೂರು ಹೈಟೆನ್ಶನ್​​ ಪ್ಲೇ-ಆಫ್​ ಪಂದ್ಯಗಳ ಕಾದಾಟ. ಮೂರು ತಿಂಗಳ ಅದ್ಧೂರಿ ಮನರಂಜನೆಯ ಜಾತ್ರೆಯ ಅಂತ್ಯಕ್ಕೆ ಕೌಂಟ್​​ಡೌನ್ ಶುರುವಾಗಿದೆ. 18 ವರ್ಷಗಳ ವನವಾಸಕ್ಕೆ ಬ್ರೇಕ್ ಹಾಕಿ ಟ್ರೋಫಿಗೆ ಮುತ್ತಿಕ್ಕಲು ಬೆಂಗಳೂರು ಬಾಯ್ಸ್​ ರೆಡಿಯಾಗಿದ್ದಾರೆ. ​
/newsfirstlive-kannada/media/post_attachments/wp-content/uploads/2025/06/RCB_TEAM.jpg)
ಪಂಜಾಬ್​​ಗೆ ಪಂಚ್ ನೀಡಿ ಫೈನಲ್​ಗೇರಿರುವ ಆರ್​ಸಿಬಿ, ಈ ಸಲ ಶತಯಗತಾಯ ರಣಕಣದಲ್ಲಿ ಕಪ್​ ಗೆಲ್ಲಲು ಪಣತೊಟ್ಟಿದೆ. ಇದಕ್ಕಾಗಿ ಇನ್ನಿಲ್ಲದ ಗೇಮ್ ಪ್ಲಾನ್, ಸ್ಟ್ರಾಟರ್ಜಿಗಳನ್ನೇ ರೂಪಿಸಿಕೊಂಡಿದೆ. ಆದ್ರೆ, ನಮೋ ಮೈದಾನದಲ್ಲಿ ಫೈನಲ್ ಫೈಟ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೆರೆದಾಡಬೇಕಾದ್ರೆ, ಆರ್​ಸಿಬಿ ಬ್ಯಾಟರ್​​ಗಳಿಗಿಂತಲೂ ಬೌಲರ್​ಗಳ ರೋಲ್ ಮೋಸ್ಟ್​ ಕ್ರೂಶಿಯಲ್​.
ಈ ಬಾರಿ RCB ಹಣೆಬರಹ ಬದಲಿಸುತ್ತಾ ‘ತ್ರಿವಳಿ ಅಸ್ತ್ರ’..
ಐಪಿಎಲ್​ನ ಫೈನಲ್ ಬ್ಯಾಟಲ್​ಗೆ ಕೌಂಟ್​ಡೌನ್​​​ ಶುರುವಾಗಿದೆ. ನಮೋ ಮೈದಾನದ ರನ್​ಭೂಮಿಯಲ್ಲಿ ವೀರಾ ಸೇನಾನಿಗಳಂತೆ ಕಪ್​ಗಾಗಿ ತಂಡಗಳು ಹೋರಾಡಲಿವೆ. ಸುಲಭವಾಗಿ ಸೋಲೊಪ್ಪಿಕೊಳ್ಳುವ ಜಾಯಮಾನ 2 ತಂಡಗಳದ್ದಲ್ಲ. ಆದ್ರೂ, ಈ ಬಿಗ್ ಬ್ಯಾಟಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಟ್​ ಫೇವರಿಟ್​ ಅನಿಸಿದೆ. ಬ್ಯಾಟ್ಸ್​​ಮನ್​ಗಳಲ್ಲ, ಬೌಲರ್​ಗಳೇ RCBಗೆ ಟ್ರೋಫಿ ಗೆಲ್ಲಿಸಿಕೊಡ್ತಾರೆ ಎಂಬ ಭರವಸೆ ಎಲ್ಲರದ್ದು. ಅದಕ್ಕೆ ಕಾರಣ ಬೌಲರ್​ಗಳ ಬೆಂಕಿ ಪರ್ಫಾಮೆನ್ಸ್​​​.
ಹೇಜಲ್​ವುಡ್​​, ಭುವಿ, ದಯಾಳ್​​​​​​​ ದರ್ಬಾರ್​​.. ಹೈ ‘ಜೋಷ್’.!
18 ವರ್ಷಗಳ ಐಪಿಎಲ್​ ಇತಿಹಾಸದಲ್ಲೇ ಆರ್​ಸಿಬಿ, ಮೊದಲ ಬಾರಿಗೆ ದಿ ಬೆಸ್ಟ್​ ಬೌಲಿಂಗ್ ಅಟ್ಯಾಕ್​​ ಹೊಂದಿದೆ. ಟೂರ್ನಿಯ ಆರಂಭದಿಂದಲೂ ಸಾಲಿಡ್ ಆಟವಾಡಿದ್ದು, RCBಗೆ ಗೆಲುವಿನ ರುಚಿ ಉಣ ಬಡಿಸಿದರಲ್ಲಿ ಮಹತ್ವದ ಪಾತ್ರ ವಹಿಸಿದ್ದೆ ಆರ್​ಸಿಬಿಯ ಪೇಸ್ ಅಟ್ಯಾಕ್​ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಪವರ್​​​​ಪ್ಲೇ, ಸ್ಲಾಗ್ ಓವರ್​ಗಳಲ್ಲಿ ಎಫೆಕ್ಟಿವ್ ಬೌಲಿಂಗ್​ ಮಾಡ್ತಿರುವ ಈ ತ್ರಿವಳಿಗಳೂ ಬರೋಬ್ಬರಿ 53 ವಿಕೆಟ್ ಉರುಳಿಸಿದ್ದಾರೆ. ಅಷ್ಟೇ ಅಲ್ಲ, ಎದುರಾಳಿಗಳ ಪಾಲಿಗೆ ಸಿಂಹ ಸ್ವಪ್ನವಾಗಿ ಕಾಡಿದ್ದಾರೆ. ಹೀಗಾಗಿ ಫೈನಲ್ಸ್​ನಲ್ಲಿ ಇವರ ದರ್ಬಾರ್​ ನಡೆದ್ರೆ, ಎದುರಾಳಿ ಖಲ್ಲಾಸ್ ಆಗೋದು ಗ್ಯಾರಂಟಿ.
ಆರ್​​ಸಿಬಿಯ ಪೇಸರ್ಸ್​ ಬೌಲಿಂಗ್
ಪ್ರಸಕ್ತ ಸೀಸನ್​​ನಲ್ಲಿ 11 ಪಂದ್ಯಗಳನ್ನಾಡಿರುವ ಜೋಶ್ ಹೇಜಲ್​ವುಡ್​, 21 ವಿಕೆಟ್ ಬೇಟೆಯಾಡಿದ್ದಾರೆ. ಪ್ರತಿ ಓವರ್​​ಗೆ 8.30ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಇನ್ನು 13 ಪಂದ್ಯಗಳನ್ನಾಡಿರುವ ಭುವನೇಶ್ವರ್, 9.27ರ ಎಕಾನಮಿಯಲ್ಲಿ ರನ್ ನೀಡಿ 15 ವಿಕೆಟ್ ಕಬಳಿಸಿದ್ದಾರೆ. ಕ್ರೂಶಿಯಲ್ ಮ್ಯಾಚ್​ಗಳ ಗೇಮ್​​​ ಚೇಂಜರ್ ಯಶ್ ದಯಾಳ್​, 14 ಪಂದ್ಯಗಳಿಂದ 12 ವಿಕೆಟ್ ಕಬಳಿಸಿದ್ದಾರೆ.
ಮೆಜಿಶಿಯನ್ಸ್​ ಮ್ಯಾಜಿಕ್​ ಮಾಡಿದ್ರೆ ಗೆಲುವು ಫಿಕ್ಸ್..!
ಇವ್ರೇ ಅಲ್ಲ.! ಇವರಿಗೆ ಮಿಡಲ್ ಓವರ್ಸ್​ನಲ್ಲಿ ಸಾಥ್ ನೀಡುವ ರೊಮಾರಿಯೊ ಶೆಫರ್ಡ್​ ಸಹ ಅಪಾಯಕಾರಿ ಅನ್ನೋದ್ರಲ್ಲಿ ಡೌಟೇ ಇಲ್ಲ. ಸ್ಪಿನ್ ಟು ವಿನ್​ ಆರ್​ಸಿಬಿ ಗೆಲುವಿನ ಗುಟ್ಟು ಅನ್ನೋದ್ರಲ್ಲಿ ಡೌಟೇ ಇಲ್ಲ. ಯಾಕಂದ್ರೆ, ಬಹುತೇಕ ಪಂದ್ಯಗಳಲ್ಲಿ ಕೃನಾಲ್ ಪಾಂಡ್ಯ, ಸುಯಶ್ ಶರ್ಮಾ ವಿಕೆಟ್ ಬೇಟೆಯಾಡದಿದ್ದರು. ರನ್​ ಗಳಿಕೆಗೆ ಕಡಿವಾಣ ಹಾಕಿ ಇಂಪ್ಯಾಕ್ಟ್​ ಮಾಡಿದಿದ್ದೆ. ಅಷ್ಟೇ ಅಲ್ಲ, ಕೆಲವೊಂದು ಮ್ಯಾಚ್​ಗಳಲ್ಲಿ ಮ್ಯಾಚ್​ ವಿನ್ನರ್​​ಗಳಾಗಿ ಮೆರೆದಾಡಿದ್ದು ಇದೆ. ಹೀಗಾಗಿ ಕೃನಾಲ್​, ಸುಯಶ್ ಕಮಾಲ್ ಮಾಡಿದ್ರೆ, ಆರ್​ಸಿಬಿ ಗೆಲುವು ಕಷ್ಟವೇನಲ್ಲ.
ಆರ್​ಸಿಬಿಯ ಸ್ಪಿನ್ನರ್ಸ್​ ಪ್ರದರ್ಶನ
ಕೃನಾಲ್ ಪಾಂಡ್ಯ 14 ಪಂದ್ಯಗಳಿಂದ 15 ವಿಕೆಟ್ ಉರುಳಿಸಿದ್ದಾರೆ. 8.61ರ ಎಕಾನಮಿಯಲ್ಲಿ ರನ್ ನೀಡಿದ್ಧಾರೆ. ಸುಯಶ್ ಶರ್ಮಾ 13 ಪಂದ್ಯಗಳಿಂದ 8 ವಿಕೆಟ್ ಬೇಟೆಯಾಡಿ 8.81ರ ಎಕಾನಮಿಯಲ್ಲಿ ಕಾಯ್ದುಕೊಂಡಿದ್ದಾರೆ. ಹೀಗಾಗಿ ಫೈನಲ್ಸ್​ನಲ್ಲಿ ಇವರಿಬ್ಬರ ಜುಗಲ್​ಬಂದಿ ಮುಂದುವರಿದ್ರೆ. ಎದುರಾಳಿ ಖಲ್ಲಾಸ್ ಆಗೋದು ಗ್ಯಾರಂಟಿ.
ಇದನ್ನೂ ಓದಿ: RCB ಸಕ್ಸಸ್​​ ಹಿಂದಿನ ಕಾರಣ ಏನು.. ತಂಡದಲ್ಲಿ ದೊಡ್ಡ ಬದಲಾವಣೆ ಶುರುವಾಗಿದ್ದು ಯಾವಾಗ..?
/newsfirstlive-kannada/media/post_attachments/wp-content/uploads/2025/05/josh_hazlewood-1.jpg)
87 ವಿಕೆಟ್ ಬೇಟೆ.. ಕಡಿಮೆ ರನ್ ಬಿಟ್ಟುಕೊಟ್ಟ ತಂಡ ಆರ್​ಸಿಬಿ..!
ರಾಯಲ್ ಚಾಲೆಂಜರ್ಸ್​ ತಂಡ ಬೆಸ್ಟ್​ ಬೌಲಿಂಗ್ ಅಟ್ಯಾಕ್​ ಹೊಂದಿದೆ. ಅದಕ್ಕೆ 87 ವಿಕೆಟ್​​​​​ ಸರಮಾಲೇನೆ ಸಾಕ್ಷಿ. ಜಿದ್ದಿಗೆ ಬಿದ್ದವರಂತೆ ಬೌಲಿಂಗ್ ಮಾಡಿರುವ ಈ ಪಂಚ ಪಾಂಡವರು, ಪ್ರಸಕ್ತ ಐಪಿಎಲ್​ನಲ್ಲಿ 2422 ರನ್ ಮಾತ್ರವೇ ಬಿಟ್ಟುಕೊಟ್ಟಿದ್ದಾರೆ. ಇದು ಪ್ರಸಕ್ತ ಐಪಿಎಲ್​​ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿಯೂ ಕಡಿಮೆ ರನ್​ ಬಿಟ್ಟುಕೊಟ್ಟ 2ನೇ ತಂಡವಾಗಿದೆ.
ಅಷ್ಟೇ ಅಲ್ಲ, ಟೂರ್ನಿಯುದ್ದಕ್ಕೂ ಜವಾಬ್ದಾರಿಯುತ ಆಟವಾಡಿರುವ ಆರ್​​ಸಿಬಿ ಬೌಲರ್ಸ್​, ಫೈನಲ್​ ಸಮರದಲ್ಲೇ ಅದೇ ಕಿಚ್ಚಿನ ಪ್ರದರ್ಶನ ಹೊರಹಾಕಿದ್ರೆ. ಟ್ರೋಫಿ ಗೆಲ್ಲೋದ್ರಲ್ಲಿ ಆಶ್ಚರ್ಯಪಡಬೇಕಿಲ್ಲ. ಕ್ವಾಲಿಫೈಯರ್​​-1ನಲ್ಲಿ ಅಟ್ಯಾಕಿಂಗ್ ಸ್ಪೆಲ್ ಮಾಡಿದ್ದ ಆರ್​ಸಿಬಿ ಬೌಲರ್ಸ್​, ಫೈನಲ್ಸ್​ನಲ್ಲೂ ಅದೇ ಆಟ ಪುನರಾವರ್ತಿಸಿದ್ರೆ. ಗೆಲುವಿನ ಬಾವುಟ ಹಾರಿಸೋದ್ರಲ್ಲಿ ಅನುಮಾನವೇ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us