newsfirstkannada.com

ಸೋತರೂ ಬೌಲಿಂಗ್​ನಲ್ಲಿ ಮಿಂಚಿದ ಕನ್ನಡಿಗ ವೈಶಾಖ್; ಅತಿ ಹೆಚ್ಚು ರನ್​ ಹೊಡೆಸಿಕೊಂಡ RCB ಬೌಲರ್ ಯಾರು?

Share :

Published March 30, 2024 at 9:00am

Update March 30, 2024 at 9:01am

    ಒಂದು ಓವರ್​ ಮಾಡಿ 7 ರನ್​ ಕೊಟ್ಟ ಕಮರೂನ್ ಗ್ರೀನ್

    RCBಗೆ ಸಿರಾಜ್, ದಯಾಳ್ ಆರ್​ಸಿಬಿಗೆ ದುಬಾರಿ

    ಆರ್​ಸಿಬಿ ವಿರುದ್ಧ ಕೆಕೆಆರ್​​​ಗೆ 7 ವಿಕೆಟ್​ಗಳ ಜಯ

ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಆರ್​ಸಿಬಿ ತಂಡ ಕೋಲ್ಕತ್ತ ನೈಟ್​ ರೈಡರ್ಸ್​ ವಿರುದ್ಧ ಹೀನಾಯವಾಗಿ ಸೋತಿದೆ. ಆರ್​ಸಿಬಿ ಸೋಲಿಗೆ ಬೌಲಿಂಗ್ ವಿಭಾಗವೇ ಪ್ರಮುಖ ಕಾರಣ. ನಂಬುಗೆಯ ಬೌಲರ್ಸ್​ ತುಂಬಾನೇ ದುಬಾರಿಯಾದರು. ಪರಿಣಾಮ ಕೆಕೆಆರ್ ತಂಡದ ಮುಂದೆ ಆರ್​ಸಿಬಿ ತಲೆ ಬಾಗಬೇಕಾಯಿತು.

ಮೊಹ್ಮದ್ ಸಿರಾಜ್, ಜೋಸೆಫ್, ಯಶ್ ದಯಾಳ್ ತುಂಬಾನೇ ದುಬಾರಿಯಾದರು. ಸಿರಾಜ್ ಮೂರು ಓವರ್​ ಮಾಡಿ ಯಾವುದೇ ವಿಕೆಟ್ ಪಡೆಯದೇ 46 ರನ್​ಗಳನ್ನು ನೀಡಿದರು. ಅದೇ ರೀತಿ ಯಶ್ ದಯಾಳ್ ಕೂಡ 4 ಓವರ್ ಮಾಡಿ 46 ರನ್​ ನೀಡಿದರು. ಇನ್ನು, ಜೋಸೆಫ್ ಕೇವಲ 2 ಓವರ್ ಮಾಡಿ 34 ರನ್​​ ನೀಡಿದರು.

ಇದನ್ನೂ ಓದಿ: ಕೆಕೆಆರ್​​ ವಿರುದ್ಧ ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟ ಆರ್​​ಸಿಬಿ ಕ್ಯಾಪ್ಟನ್​​​ ಫಾಫ್​​.. ಈ ಬಗ್ಗೆ ಏನಂದ್ರು?

ವಿಶೇಷ ಅಂದರೆ ಕನ್ನಡಿಗ ವಿಜಯಕುಮಾರ್ ವೈಶಾಖ್ 4 ಓವರ್​ ಮಾಡಿ 23 ರನ್​​ಗಳನ್ನು ಮಾತ್ರ ನೀಡಿ ಒಂದು ವಿಕೆಟ್ ಪಡೆದರು. ಹಾಗೆಯೇ ಮಯಾಂಕ್ ಡಗರ್​ ಅವರು 2.5 ಓವರ್ ಮಾಡಿ ಒಂದು ವಿಕೆಟ್ ಪಡೆದು 23 ರನ್​​ ಕೊಟ್ಟರು. ವಿಶೇಷ ಅಂದರೆ ಕಮರೂನ್ ಗ್ರೀನ್ ಕೇವಲ ಒಂದು ಓವರ್ ಮಾಡಿ 7 ರನ್​ ಮಾತ್ರ ನೀಡಿದ್ದರು. ಎಲ್ಲಾ ಬೌಲರ್​ಗಳಿಂತ ಗ್ರೀನ್ ಬೆಟರ್​​ ಬೌಲಿಂಗ್ ಮಾಡಿ ಗಮನ ಸೆಳೆದರು. ಇನ್ನು ಮೊದಲು ಬ್ಯಾಟ್ ಮಾಡಿದ್ದ ಆರ್​ಸಿಬಿ ಕೊಹ್ಲಿ ಅವರ 86 ರನ್​ಗಳ ಅಜೆಯ ಆಟದಿಂದ 6 ವಿಕೆಟ್ ಕಳೆದುಕೊಂಡು 182 ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಕೆಕೆಆರ್, ಮೂರು ವಿಕೆಟ್ ಕಳೆದುಕೊಂಡು 186 ರನ್​ಗಳಿಸಿ ಸಂಭ್ರಮಿಸಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೋತರೂ ಬೌಲಿಂಗ್​ನಲ್ಲಿ ಮಿಂಚಿದ ಕನ್ನಡಿಗ ವೈಶಾಖ್; ಅತಿ ಹೆಚ್ಚು ರನ್​ ಹೊಡೆಸಿಕೊಂಡ RCB ಬೌಲರ್ ಯಾರು?

https://newsfirstlive.com/wp-content/uploads/2024/03/VIJAYKUMAR.jpg

Load More