/newsfirstlive-kannada/media/post_attachments/wp-content/uploads/2024/11/RCB_BOWLER.jpg)
ಆರ್ಸಿಬಿ ಫ್ರಾಂಚೈಸಿಯು ಈ ಬಾರಿ ಅಚ್ಚರಿ ಎನ್ನುವಂತೆ ಆಟಗಾರರನ್ನು ಅಳೆದು ತೂಗಿ ತಂಡಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದೆ. 2ನೇ ದಿನದ ಮೆಗಾ ಆಕ್ಷನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಹಾಗೂ ಆಲ್ರೌಂಡರ್ ಕೃನಾಲ್ ಪಾಂಡ್ಯಗೆ ಮಣೆ ಹಾಕಿದೆ. ಇದರಿಂದ ಆರ್ಸಿಬಿ ತಂಡದ ಬೌಲಿಂಗ್ ಮತ್ತಷ್ಟು ಬಲಿಷ್ಠವಾಗಿದೆ ಎನ್ನಬಹುದು.
ಏಕೆಂದರೆ ಭುವನೇಶ್ವರ್ ಓವರ್ಗಳಲ್ಲಿ ರನ್ ಗಳಿಸಬೇಕು ಎಂದರೆ ಬ್ಯಾಟ್ಸ್ಮನ್ಗಳು ಪರದಾಡುವ ಪರಿಸ್ಥಿತಿ ಎದುರಾಗಲಿದೆ. ತಂಡದಲ್ಲಿ ಬಲಿಷ್ಠ ಬೌಲಿಂಗ್ ಮಾಡುವ ಭುವನಶ್ವರ್ ರನ್ಗಳನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡಲ್ಲ. ಹೀಗಾಗಿ ಆರ್ಸಿಬಿ ತಂಡದಲ್ಲಿಯು ಉತ್ತಮವಾದ ಪ್ರದರ್ಶನ ನೀಡುವರು ಎಂದು ನಿರೀಕ್ಷಿಸಬಹುದು. ಇವರು ಆಡಿದ ಎಲ್ಲ ತಂಡಗಳಿಗೂ ಉತ್ತಮವಾದ ಕೊಡುಗೆ ನೀಡಿದ್ದಾರೆ ಎಂದು ಹೇಳಬಹುದು.
ಇದನ್ನೂ ಓದಿ:IPL Mega Auction; ಅದೃಷ್ಟ ಲಕ್ಷ್ಮಿ.. ರೋಹಿತ್ ಟೀಮ್ ಸೇರಿದ ಧೋನಿಯ ನೆಚ್ಚಿನ ಬೌಲರ್!
ಕೃನಾಲ್ ಪಾಂಡ್ಯ ಕೂಡ ಅದ್ಭುತ ಆಲ್ರೌಂಡರ್ ಆಗಿದ್ದು ಪಂದ್ಯದ ಮಿಡಲ್ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಪಂದ್ಯದ ದಿಕ್ಕನ್ನು ಬದಲಿಸಬಲ್ಲರು. ಐಪಿಎಲ್ನಲ್ಲಿ ಇದುವರೆಗೆ ಕೃನಾಲ್ ಪಾಂಡ್ಯ 127 ಪಂದ್ಯ ಆಡಿದ್ದು 1,647 ರನ್ ಗಳಿಸಿದ್ದಾರೆ. ಹಾಗೆಯೇ 144 ಫೋರ್, 61 ಸಿಕ್ಸರ್ ಸಿಡಿಸಿರುವ ಕೃನಾಲ್ ತಮ್ಮ ಅದ್ಭುತ ಬೌಲಿಂಗ್ ಮೂಲಕ 76 ವಿಕೆಟ್ ಉರುಳಿಸಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸಹೋದರ ಆಗಿರುವ ಕೃನಾಲ್ ಕಳೆದ ಸೀಸನ್ನಲ್ಲಿ ಲಕ್ನೋ ಟೀಮ್ನಲ್ಲಿ ಹೇಳಿಕೊಳ್ಳುವಂತೆ ಆಡಿರಲಿಲ್ಲ. ಹೀಗಾಗಿ ಆಕ್ಷನ್ಗೆ ಬಂದಿದ್ದರು.
ಆರ್ಸಿಬಿಯಲ್ಲಿ ಬೌಲಿಂಗ್ ವಿಭಾಗ ಸಖತ್ ಬಲಿಷ್ಠವಾಗಿದೆ. ಜೋಶ್ ಹೇಜಲ್ವುಡ್ ಮತ್ತು ಯಶ್ ದಯಾಳ್ ಅವರೊಂದಿಗೆ ಈಗ ಭುವನೇಶ್ವರ್ ಹಾಗೂ ಕೃನಾಲ್ ಪಾಂಡ್ಯ ಸೇರಿಕೊಂಡಿದ್ದಾರೆ. ಇವರೆಲ್ಲ ಎದುರಾಳಿ ಬ್ಯಾಟ್ಸ್ಮನ್ಗಳನ್ನ ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದ ಭುವನೇಶ್ವರ್ ಅವರು ಇದಕ್ಕೂ ಮೊದಲೇ ಆರ್ಸಿಬಿ ತಂಡದ ಪರ ಬೌಲಿಂಗ್ ಮಾಡಿದ್ದರು. ಹೀಗಾಗಿ ಮತ್ತೊಮ್ಮೆ ತಂಡಕ್ಕೆ ಆಗಮಿಸಿದ್ದಾರೆ ಎಂದು ಹೇಳಬಹುದು. ಇದರಿಂದ ಆರ್ಸಿಬಿ ತಂಡದ ಬೌಲಿಂಗ್ ಲೈನ್ ಬಲಿಷ್ಠವಾಗಿದೆ ಎಂದು ಗೊತ್ತಾಗುತ್ತದೆ.
ಸದ್ಯ ಆರ್ಸಿಬಿ ಭುವನೇಶ್ವರ್ ಕುಮಾರ್ಗೆ 10.75 ಕೋಟಿ ರೂಪಾಯಿ ನೀಡಿದೆ
ಕೃನಾಲ್ ಪಾಂಡ್ಯರನ್ನ ಬರೋಬ್ಬರಿ 5.75 ಕೋಟಿ ರೂ.ಗೆ ಆರ್ಸಿಬಿ ಖರೀದಿ ಮಾಡಿದೆ
ಜೋಶ್ ಹೇಜಲ್ವುಡ್- 12.50 ಕೋಟಿ ರೂಪಾಯಿ
ಯಶ್ ದಯಾಳ್- 5 ಕೋಟಿ ರೂಪಾಯಿ (ರಿಟೈನ್)
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ