/newsfirstlive-kannada/media/post_attachments/wp-content/uploads/2024/05/RCB_VIRAT_KARTHIK.jpg)
ಇಂಡಿಯನ್ ಪ್ರೀಮಿಯರ್ ಲೀಗ್. ಇದು ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್. ವಿಶ್ವ ಕ್ರಿಕೆಟ್ನಲ್ಲಿರೋ ಅದೆಷ್ಟೋ ಬೋರ್ಡ್ಗಳ ಬಳಿ ಇಲ್ಲದಷ್ಟು ಹಣ ಈ ಐಪಿಎಲ್ನಲ್ಲಿದೆ. ಮಿಲಿಯನ್ ಡಾಲರ್ ಟೂರ್ನಿ ಎಂದು ಸುಮ್ಮನೇ ಹೇಳೋದಲ್ಲ. ಇಲ್ಲಿ ಬೌಂಡರಿ-ಸಿಕ್ಸರ್ಗಳ ಅಬ್ಬರ ಎಷ್ಟಿರುತ್ತೋ ಅಷ್ಟೇ ದುಡ್ಡು ಇರುತ್ತೆ.
ಇತ್ತೀಚೆಗೆ ಸೌದಿ ಅರೇಬಿಯಾದಲ್ಲಿ ಹಣದ ಹೊಳೆಯೇ ಹರಿಯಿತು. ಕೋಟಿ ಕೋಟಿ ಹಣದ ಸುರಿಮಳೆ ಆಕ್ಷನ್ ಅಖಾಡದಲ್ಲಿ ಆಯ್ತು. 10 ಫ್ರಾಂಚೈಸಿಗಳು ಸೇರಿ ಒಂದಲ್ಲ.. ಎರಡಲ್ಲ.. ಬರೋಬ್ಬರಿ 639.15 ಕೋಟಿ ಹಣವನ್ನ ಆಕ್ಷನ್ನಲ್ಲಿ ನೀರಿನಂತೆ ಖರ್ಚು ಮಾಡಿದವು.
IPL ಬ್ರ್ಯಾಂಡ್ ವ್ಯಾಲ್ಯೂ ರಿಲೀಸ್
ಹತ್ತು, ಇಪ್ಪತ್ತು ಸಾವಿರ ಕೋಟಿ ಅಲ್ಲ.. ಒಂದು ಲಕ್ಷ ಕೋಟಿ. 2024ರ ಐಪಿಎಲ್ ಲೆಕ್ಕಾಚಾರಗಳ ಅಂತ್ಯದ ಬಳಿಕ ಹೊರಬಿದ್ದಿರೋ ಬಿಗ್ ಸುದ್ದಿಯಿದು. ಐಪಿಎಲ್ನ ಬ್ರಾಡ್ ಕಾಸ್ಟರ್ ರೈಟ್ಸ್, ಸ್ಪಾನ್ಸರ್ಸ್, ಅಡ್ವರ್ಟೈಸ್ಮೆಂಟ್, ಟೈಟಲ್ ರೈಟ್ಸ್, ಪ್ಲೇಯರ್ ಪ್ರೈಸ್ ಹಾಗೂ ತಂಡಗಳ ಪ್ರೈಸ್ ಎಲ್ಲವನ್ನ ಕೂಡಿ ಕಳೆದು ಲೆಕ್ಕಾಚಾರ ಹಾಕಲಾಗಿದೆ. ಅನ್ವಯ 2024ರ ಅಂತ್ಯಕ್ಕೆ ಐಪಿಎಲ್ನ ಬ್ರ್ಯಾಂಡ್ ವ್ಯಾಲ್ಯೂ 1.1 ಲಕ್ಷ ಕೋಟಿ ದಾಟಿದೆ.
ಕಳೆದ ವರ್ಷಕ್ಕಿಂತ 13 ಪಟ್ಟು ಹೆಚ್ಚಳ
2023ರ ಐಪಿಎಲ್ ಅಂತ್ಯದ ಬಳಿಕ ಐಪಿಎಲ್ನ ಬ್ರ್ಯಾಂಡ್ ವ್ಯಾಲ್ಯೂ 90,679 ಕೋಟಿಯಾಗಿತ್ತು. ಕಳೆದ ಬಾರಿಗಿಂತ ಈ ಬಾರಿ ಶೇಕಡಾ 13ರಷ್ಟು ಇದು ಏರಿಕೆಯಾಗಿದೆ. ಒಟಿಟಿ ಫ್ಲಾಟ್ಫಾರ್ಮ್ನಲ್ಲಿ ಉಚಿತ ವೀಕ್ಷಣೆಗೆ ಅವಕಾಶ ನೀಡಿದ್ದು, ಇದ್ರ ಹೆಚ್ಚಳಕ್ಕೆ ಕಾರಣ ಎನ್ನಲಾಗ್ತಿದೆ.
ಕಪ್ ಗೆಲ್ಲದಿದ್ರೂ ಆರ್ಸಿಬಿ ಎಂದಿಗೂ ‘ರಾಯಲ್’
17 ಸೀಸನ್ಗಳಾದ್ರೂ ಆರ್ಸಿಬಿ ಐಪಿಎಲ್ ಕಪ್ ಗೆದ್ದಿಲ್ಲ. ಕ್ರೇಜ್ ಮಾತ್ರ ಯಾರಿಗೂ ಕಮ್ಮಿ ಇಲ್ಲ. ಕಪ್ ನಮ್ಮದಾಗದಿದ್ರೂ ಲಾಯಲ್ ಅಭಿಮಾನಿಗಳ ಅಪರಿಮಿತ ಪ್ರೀತಿ ಆರ್ಸಿಬಿ ಖಜಾನೆಯನ್ನಂತೂ ತುಂಬಿಸ್ತಾನೆ ಇದೆ. ವರ್ಷದಿಂದ ವರ್ಷಕ್ಕೆ ಬಂಪರ್ ಗಳಿಕೆಯನ್ನ ಆರ್ಸಿಬಿ ಕಾಣ್ತಿದೆ. ಕಳೆದ ಒಂದು ವರ್ಷದಲ್ಲೇ ಆರ್ಸಿಬಿಯ ಬ್ರ್ಯಾಂಡ್ ವ್ಯಾಲ್ಯೂ 67 ಪರ್ಸೆಂಟ್ ಏರಿಕೆ ಕಂಡಿದೆ. ಒಟ್ಟಾರೆ ಬ್ರ್ಯಾಂಡ್ ವ್ಯಾಲ್ಯೂ 991 ಕೋಟಿಗೆ ಬಂದು ನಿಂತಿದೆ. ಚೆನ್ನೈ, ಮುಂಬೈ ಬಿಟ್ರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯೇ ಐಪಿಎಲ್ನ ಶ್ರೀಮಂತ ಫ್ರಾಂಚೈಸಿ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್