ನಾಳೆಯಿಂದ ಬೆಂಗಳೂರಲ್ಲಿ RCB ಕ್ಯಾಂಪ್ ಆರಂಭ.. ಕಿಂಗ್ ಕೊಹ್ಲಿ ಅಭಿಮಾನಿಗಳಿಗೆ ಬಿಗ್ ಅಪ್ಡೇಟ್!

author-image
admin
Updated On
RCB ಎಷ್ಟು ಸಾವಿರ ಕಿಲೋ ಮೀಟರ್ ಪ್ರಯಾಣಿಸುತ್ತೆ.. ಈ ಬಾರಿ ರಾಯಲ್​ ಚಾಲೆಂಜರ್ಸ್​ಗೆ ‘ಟ್ರಾವೆಲ್​’ ಚಾಲೆಂಜ್​!
Advertisment
  • ಐಪಿಎಲ್​ ಹಣಾಹಣಿಗೆ ಆರ್​​ಸಿಬಿ ಫ್ರಾಂಚೈಸಿಯ ತಯಾರಿ ಹೇಗಿದೆ?
  • ಅಭಿಮಾನಿಗಳಿಗೆ ಕಿಂಗ್ ಕೊಹ್ಲಿ ಘರ್ಜನೆ ಕಣ್ತುಂಬಿಕೊಳ್ಳುವ ತವಕ
  • ಮೊದಲ ಪಂದ್ಯಕ್ಕೆ ಸಜ್ಜಾದ ರಜತ್ ಪಾಟೀದಾರ್ ನಾಯಕತ್ವದ RCB

ಚಾಂಪಿಯನ್ ಟ್ರೋಫಿ ಧಮಾಕ ಮುಗಿಯುತ್ತಿದ್ದಂತೆ ಐಪಿಎಲ್ ಹವಾ ಶುರುವಾಗುತ್ತಿದೆ. 18ನೇ IPL ಹಣಾಹಣಿಗೆ ಆಟಗಾರರು ಸಜ್ಜಾಗುತ್ತಿದ್ದಾರೆ. RCB ಫ್ರಾಂಚೈಸಿ ಕೂಡ ಈ ಬಾರಿಯ ಐಪಿಎಲ್‌ ಮೆಗಾ ಟೂರ್ನಿಗೆ ಭರ್ಜರಿ ಸಿದ್ಧತೆ ಆರಂಭಿಸಿದೆ.

publive-image

ಬೆಂಗಳೂರಿಗೆ ಬಂದ RCB ಕೋಚ್​​!
2025ರ ಐಪಿಎಲ್​ ಪಂದ್ಯಾವಳಿಗೆ ಆರ್​​ಸಿಬಿ ಫ್ರಾಂಚೈಸಿಯ ತಯಾರಿ ಶುರುವಾಗಿದೆ. ತಂಡದ ಹೆಡ್​ಕೋಚ್ ಆ್ಯಂಡಿ ಫ್ಲವರ್ ಈಗಾಗಲೇ​​ ಬೆಂಗಳೂರಿಗೆ ಬಂದಿಳಿದಿದ್ದಾರೆ. ಉದ್ಘಾಟನಾ ಪಂದ್ಯಕ್ಕೆ ಆರ್‌ಸಿಬಿಯ ಪವರ್‌ ಪ್ಲಾನ್ ರೆಡಿಯಾಗುತ್ತಿದೆ.

publive-image

ನಾಳೆಯಿಂದ ಬೆಂಗಳೂರಲ್ಲಿ ಆರ್​​ಸಿಬಿ ಕ್ಯಾಂಪ್​ ಆರಂಭವಾಗೋ ಸಾಧ್ಯತೆಯಿದೆ. 18ನೇ ಐಪಿಎಲ್‌ ಟೂರ್ನಿಯ ಹಿನ್ನೆಲೆಯಲ್ಲಿ ಆರ್‌ಸಿಬಿ, ವಿರಾಟ್ ಕೊಹ್ಲಿಯ 18ನೇ ಜೆರ್ಸಿ ನಂಬರ್‌ ಅನ್ನ ಸೆಲಬ್ರೇಟ್ ಮಾಡುತ್ತಿದೆ. ಅಭಿಮಾನಿಗಳಿಗೆ ಕಿಂಗ್ ಕೊಹ್ಲಿ ಘರ್ಜನೆಯನ್ನ ಕಣ್ತುಂಬಿಕೊಳ್ಳೋ ಮುನ್ಸೂಚನೆಯನ್ನು RCB ಫ್ರಾಂಚೈಸಿ ನೀಡಿದೆ.

ಇದನ್ನೂ ಓದಿ: ಚಾಂಪಿಯನ್ಸ್​ ಟ್ರೋಫಿಯಲ್ಲಿ ಅಮೋಘ ಪ್ರದರ್ಶನ; ಭಾರತ ತಂಡದಲ್ಲಿ KL​ ರಾಹುಲ್​ಗೆ ಹೊಸ ಜವಾಬ್ದಾರಿ 

ಇದೇ ಮಾರ್ಚ್​​ 22ಕ್ಕೆ 18ನೇ ಐಪಿಎಲ್‌ ಸೀಸನ್​​ನ ಉದ್ಘಾಟನಾ ಪಂದ್ಯ ಕೊಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಐಪಿಎಲ್ ಹಣಾಹಣಿಯಲ್ಲಿ ರಜತ್ ಪಾಟೀದಾರ್ ನಾಯಕತ್ವದ ಆರ್​​ಸಿಬಿ-ಕೆಕೆಆರ್​ ತಂಡವನ್ನು ಎದುರಿಸಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment