newsfirstkannada.com

ಪ್ಲೇ ಆಫ್​ಗೆ ಮತ್ತೊಂದು ಸುವರ್ಣಾವಕಾಶ; ಆರ್​​​ಸಿಬಿ ಮುಂದಿನ ಪಂದ್ಯಗಳು ಎಷ್ಟು ರನ್​ನಿಂದ ಗೆಲ್ಲಬೇಕು?

Share :

Published May 6, 2024 at 9:37pm

    ಇಂದು ಮುಂಬೈ ಹೈದರಾಬಾದ್​​ ವಿರುದ್ಧ ಗೆದ್ದರೆ ಆರ್​​ಸಿಬಿಗೆ ಅವಕಾಶ

    ಪ್ಲೇ ಆಫ್​ಗೆ ಹೋಗಲು ಆರ್​​ಸಿಬಿ ಟೀಮ್​​ಗೆ ಇದೆ ಸುವರ್ಣಾವಕಾಶ!

    ಆರ್​ಸಿಬಿ ಮಾಡಬೇಕಿರೋ ಕೆಲಸ, ಉಳಿದ ಮೂರು ಪಂದ್ಯ ಗೆಲ್ಲೋದು

ಇಂದು ವಾಂಖೆಡೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​​ನಲ್ಲಿ ಮುಂಬೈ ಇಂಡಿಯನ್ಸ್​, ಸನ್​​ರೈಸರ್ಸ್​ ಹೈದರಾಬಾದ್​​ ತಂಡಗಳು ಭಾಗಿಯಾಗುತ್ತಿವೆ. ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಹೈದರಾಬಾದ್​​ ಮುಂಬೈ ಟೀಮ್​ಗೆ 174 ರನ್​ಗಳ ಬಿಗ್​ ಟಾರ್ಗೆಟ್​ ನೀಡಿದೆ. ಇಂದು ಮುಂಬೈ ಒಂದು ವೇಳೆ ಗೆದ್ದರೆ ಆರ್​​ಸಿಬಿ ಪ್ಲೇ ಆಫ್​ಗೆ ಹೋಗಲು ಸುವರ್ಣಾವಕಾಶ ಸಿಗಲಿದೆ.

ಹೌದು, ಹೈದರಾಬಾದ್​​ ಪ್ಲೇ ಆಫ್​ಗೆ ಹೋಗಲು ಇನ್ನೂ 2 ಪಂದ್ಯ ಗೆಲ್ಲಬೇಕಿದೆ. ಇಂದು ಮುಂಬೈ ವಿರುದ್ಧ ಸೋತರೆ ಹೈದರಾಬಾದ್​ ತಂಡಕ್ಕೆ ಪ್ಲೇ ಆಫ್​ ಅವಕಾಶ ಕಡಿಮೆ ಆಗಲಿದೆ. ಮುಂಬೈ ಗೆದ್ರೂ ಪ್ಲೇ ಆಫ್​ ರೇಸ್​ನಿಂದ ಹೊರಬಿದ್ದಿರೋ ಕಾರಣ ಯಾವುದೇ ಅವಕಾಶ ಇಲ್ಲ. ಹೈದರಾಬಾದ್​​ ಮುಂದೆ ಲಕ್ನೋ, ಪಂಜಾಬ್​​, ಗುಜರಾತ್​ ವಿರುದ್ಧ ಆಡಲಿದ್ದು, ಎಲ್ಲಾ ತಂಡಗಳು ಪ್ಲೇ ಆಫ್​ಗೆ ಹೋಗಲು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

ಇನ್ನು ಆರ್​​ಸಿಬಿ ಕೂಡ ಮುಂದೆ ಪಂಜಾಬ್​​, ಡೆಲ್ಲಿ ಮತ್ತು ಚೆನ್ನೈ ವಿರುದ್ಧ ಆಡಲಿದ್ದು, ಎಲ್ಲಾ ಪಂದ್ಯಗಳಲ್ಲೂ ಭಾರೀ ರನ್​ಗಳಿಂದ ಗೆದ್ದು ರನ್​ ರೇಟ್​ ಹೆಚ್ಚಿಸಿಕೊಂಡರೆ ಪ್ಲೇ ಆಫ್​ಗೆ ಹೋಗೋ ಅವಕಾಶ ಇನ್ನೂ ಇದೆ. ಅದರಲ್ಲೂ ಮೊದಲು ಬ್ಯಾಟಿಂಗ್​ ಮಾಡಿ 200-250 ರನ್​ ಟಾರ್ಗೆಟ್​ ನೀಡಿ ಎದುರಾಳಿಗಳನ್ನ 150 ರನ್​ ಒಳಗೆ ಆಲೌಟ್​ ಮಾಡಬೇಕು. ಕನಿಷ್ಠ 100 ರನ್​​ ಮತ್ತು ಸಾಧ್ಯವಾದಷ್ಟು ವಿಕೆಟ್​ಗಳಿಂದ ಗೆಲುವು ಸಾಧಿಸಬೇಕು.

ಸದ್ಯ ಆರ್​​ಸಿಬಿ ತಾನು ಆಡಿರೋ 11 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿ 8 ಅಂಕ ಪಡೆದುಕೊಂಡಿದೆ. ತಂಡದ ರನ್​ ರೇಟ್​ ಕೂಡ ಸುಧಾರಿಸಿದೆ. ಮೂರಕ್ಕೆ ಮೂರು ಪಂದ್ಯ ಗೆದ್ದರೆ ಇನ್ನೂ ಒಂದು ಚಾನ್ಸ್​ ಇದೆ.

ಈಗಾಗಲೇ ಅರ್ಧ ಸೀಸನ್​ ಮುಗಿದಿದೆ. ಆರ್​​ಸಿಬಿ ಇನ್ನೂ 3 ಪಂದ್ಯಗಳು ಆಡಲಿದ್ದು. ಮೂರಕ್ಕೆ ಮೂರು ಗೆಲ್ಲಬೇಕಿದೆ. ಆಗ ಆರ್​​ಸಿಬಿಗೆ ಇನ್ನೂ 6 ಅಂಕ ದೊರೆಯಲಿದ್ದು, ಟೋಟಲ್​​ 14 ಪಾಯಿಂಟ್ಸ್​ ಆಗಲಿವೆ. ಸಾಮಾನ್ಯವಾಗಿ 16 ಅಂಕ ಪಡೆದ್ರೆ ಪ್ಲೇ ಆಫ್​​ ಕನ್ಫರ್ಮ್​​. 14 ಅಂಕ ಪಡೆದ್ರೂ ಪ್ಲೇ ಆಫ್​ಗೆ ಹೋಗಬಹುದು, ಅದು ಸಂಪೂರ್ಣ ಇತರ ತಂಡಗಳ ಪ್ರದರ್ಶನದ ಮೇಲೆ ಡಿಪೆಂಡ್​ ಆಗಿರಲಿದೆ. ಹಾಗಾಗಿ ಆರ್​​ಸಿಬಿ 3 ಮ್ಯಾಚ್​ ಗೆದ್ದು ಒಳ್ಳೇ ರನ್​ ರೇಟ್​ ಇದ್ದರೆ ಪ್ಲೇ ಆಫ್​ಗೆ ಹೋಗಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ಲೇ ಆಫ್​ಗೆ ಮತ್ತೊಂದು ಸುವರ್ಣಾವಕಾಶ; ಆರ್​​​ಸಿಬಿ ಮುಂದಿನ ಪಂದ್ಯಗಳು ಎಷ್ಟು ರನ್​ನಿಂದ ಗೆಲ್ಲಬೇಕು?

https://newsfirstlive.com/wp-content/uploads/2024/04/Maxwell_RCB123.jpg

Load More