RCB ಕ್ಯಾಪ್ಟನ್ ಜಿತೇಶ್ ಶರ್ಮಾ ಗೆಲುವಿನ ಕ್ರೆಡಿಟ್ ಯಾರಿಗೆ ನೀಡಿದರು..?

author-image
Ganesh
Updated On
ಫೈನಲ್​ಗೆ ಹೋಗಲು ಎರಡು ಅವಕಾಶ.. ಆರ್​ಸಿಬಿ ಚೇಸಿಂಗ್ ಹೋರಾಟ ಹೆಂಗಿತ್ತು..?
Advertisment
  • ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದು ಬೀಗಿದ ಆರ್​ಸಿಬಿ
  • ಐಪಿಎಲ್​ನ ಲೀಗ್ ಹಂತದ ಎಲ್ಲಾ ಪಂದ್ಯಗಳು ಮುಕ್ತಾಯ
  • ಪ್ಲೇ-ಆಫ್​ನಲ್ಲಿ ಪಂಜಾಬ್ ವಿರುದ್ಧ ಆರ್​ಸಿಬಿ ಸೆಣಸಾಟ

ಕೊನೆಗೂ ಆರ್​ಸಿಬಿ ಪಾಯಿಂಟ್ಸ್​ ಟೇಬಲ್​​ನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ. ನಿನ್ನೆ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಲಕ್ನೋ ವಿರುದ್ಧ 6 ವಿಕೆಟ್​ಗಳ ಗೆಲುವಿನೊಂದಿಗೆ ಆರ್​ಸಿಬಿ ಸಂಭ್ರಮಿಸಿದೆ. ಇನ್ನು, ಪ್ಲೇ-ಆಫ್​ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಾಟ ನಡೆಸಲಿದ್ದು, ಇಲ್ಲಿ ಗೆದ್ದರೆ ನೇರವಾಗಿ ಫೈನಲ್​​ಗೆ ಎಂಟ್ರಿ ನೀಡಲಿದೆ.

ಇದನ್ನೂ ಓದಿ: ಮಂಗಳೂರಲ್ಲಿ ಮತ್ತೆ ಹರಿದ ನೆತ್ತರು.. ತಲ್ವಾರ್​ನಿಂದ ಕೊಚ್ಚಿ ಅಬ್ದುಲ್ ರಹಿಮಾನ್​ನ ಭೀಕರ ಹತ್ಯೆ

ಇನ್ನು ಗೆದ್ದ ಖುಷಿಯಲ್ಲಿ ಮಾತನಾಡಿರುವ ಕ್ಯಾಪ್ಟನ್ ಜಿತೇಶ್ ಶರ್ಮಾ, ನಿಜ ಹೇಳಬೇಕು ಅಂದರೆ ನನಗೆ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ತುಂಬಾ ಖುಷಿ ಆಗುತ್ತಿದೆ. ಕ್ರೀಸ್​ನಲ್ಲಿದ್ದಾಗ ಆ ಕ್ಷಣದಲ್ಲಿ ಏನು ಮಾಡಬೇಕು ಅದನ್ನು ಮಾತ್ರ ಯೋಚಿಸುತ್ತಿದ್ದೆ. ಕೊಹ್ಲಿ ಔಟ್ ಆದಾಗ ಆಟವನ್ನು ಡೀಪ್ ಆಗಿ ತೆಗೆದುಕೊಂಡು ಹೋಗಲು ನಿರ್ಧರಿಸಿದೆ.

ಇದನ್ನೂ ಓದಿ: ಕ್ಯಾಪ್ಟನ್ ಜಿತೇಶ್​ ಅಬ್ಬರ, RCB ಜಯಭೇರಿ.. ಪಾಯಿಂಟ್ ಟೇಬಲ್​ನಲ್ಲಿ ಬೆಂಗಳೂರು ತಂಡ ಟಾಪರ್​

publive-image

ನನ್ನ ಮೆಂಟರ್ (ದಿನೇಶ್ ಕಾರ್ತಿಕ್) ಹೇಳುವುದು ಅದನ್ನೇ. ಇರುವ ಸಾಮರ್ಥ್ಯದಿಂದ ನಾನು ಯಾವುದೇ ಸಂದರ್ಭದಲ್ಲೂ ಆಟವನ್ನು ಮುಗಿಸಬಲ್ಲೆ. ಆರ್​ಸಿಬಿ ತುಂಬಾನೇ ದೊಡ್ಡ ಫ್ರಾಂಚೈಸಿ. ಪಂದ್ಯದ ಒತ್ತಡವನ್ನು ಆನಂದಿಸುತ್ತಿದ್ದೇನೆ. ವಿರಾಟ್, ಕೃನಾಲ್ ಮತ್ತು ಭುವಿ ಅವರನ್ನು ನೋಡಿದಾಗ ಆಡಲು ಇನ್ನಷ್ಟು ಉತ್ಸಾಹ ಹೆಚ್ಚುತ್ತದೆ. ಅವರೊಂದಿಗೆ ಆಡಲು ಅವಕಾಶ ಸಿಗುತ್ತಿರೋದಕ್ಕೆ ಉತ್ಸುಕನಾಗಿದ್ದೇನೆ.

ನಾವು ಈ ಕ್ಷಣವನ್ನು ಆನಂದಿಸುತ್ತೇವೆ. ಈ ಜವಾಬ್ದಾರಿಯನ್ನು ನನಗೆ ನೀಡಿದ್ದಕ್ಕಾಗಿ (ಈ ಋತುವಿನಲ್ಲಿ ತವರಿನ ಹೊರಗೆ ಗೆದ್ದ ಅತ್ಯುತ್ತಮ ದಾಖಲೆಯನ್ನು ಕಾಯ್ದುಕೊಂಡಿದ್ದಕ್ಕಾಗಿ) ರಜತ್ ಅವರಿಗೆ ಶ್ರೇಯಸ್ಸ ಸಲ್ಲುತ್ತದೆ. ಹೇಜಲ್​ವುಡ್ ಫಿಟ್ ಆಗಿದ್ದಾರೆ. ನಮ್ಮ ತಂಡದಲ್ಲಿ ನಂಬಿಕೆ ತುಂಬಾ ಪ್ರಬಲವಾಗಿದೆ. ನೀವು ಯಾವುದೇ ಆಟಗಾರರನ್ನು ನೋಡಿದರೂ ಎಲ್ಲರೂ ಪಂದ್ಯ ವಿಜೇತರು. ನಾವು 3-4 ವಿಕೆಟ್‌ಗಳನ್ನು ಕಳೆದುಕೊಂಡರೂ ನಂಬಿಕೆ ಇತ್ತು ಎಂದಿದ್ದಾರೆ.

ಇದನ್ನೂ ಓದಿ: ಸೆಂಚುರಿ ಸಿಡಿಸಿ ಅದ್ಭುತ ಫ್ರಂಟ್​​​ಫ್ಲಿಪ್​..​ ರಿಷಭ್ ಪಂತ್ ಶತಕದ ಸಂಭ್ರಮ ಹೇಗಿತ್ತು? -Video

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment