/newsfirstlive-kannada/media/post_attachments/wp-content/uploads/2025/04/RAJAT-PATIDAR-1.jpg)
ಕೊನೆಗೂ ಆರ್ಸಿಬಿ ತವರಿನಲ್ಲಿ ರೋಚಕವಾಗಿ ಗೆದ್ದು ಬೀಗಿದೆ. ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ಪ್ಲೇ-ಆಫ್ ಕನಸಿನ ಬಗ್ಗೆ ಜೋರಾಗಿ ಮಾತನಾಡಿಕೊಳ್ಳುತ್ತಿದ್ದಾರೆ.
ಪಂದ್ಯ ಗೆದ್ದ ಖುಷಿಯಲ್ಲಿ ಮಾತನಾಡಿರುವ ಕ್ಯಾಪ್ಟನ್ ರಜತ್ ಪಾಟೀದಾರ್, ಈ ಗೆಲುವು ನಮಗೆ ತುಂಬಾ ಅಗತ್ಯವಾಗಿತ್ತು. ಇಂದು ವಿಕೆಟ್ ವಿಭಿನ್ನವಾಗಿತ್ತು. 10ನೇ ಓವರ್ ನಂತರ ನಮ್ಮ ಬೌಲರ್ಗಳು ಕಂಟ್ರೋಲ್ಗೆ ತಂದರು. ಗೆಲುವಿನ ಕ್ರೆಡಿಟ್ ಬೌಲರ್‌ಗಳಿಗೆ ಸಲ್ಲುತ್ತದೆ. ಅವರು ಧೈರ್ಯ ಅದ್ಭುತವಾಗಿತ್ತು.
ರಾಜಸ್ಥಾನ್ ರಾಯಲ್ಸ್, ಆರಂಭದಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ನಾವು ವಿಕೆಟ್‌ಗಳನ್ನು ಹುಡುಕುತ್ತಿದ್ದೆವು. ವಿಕೆಟ್ ಬಿದ್ದಾಗ ಮಾತ್ರ ರನ್ ಓಟಕ್ಕೆ ಬ್ರೇಕ್ ಹಾಕಬಹುದು. ನಮ್ಮಲ್ಲಿ ಉತ್ತಮ ನಾಯಕರ ತಂಡವಿದೆ. ಅವರ ಇನ್‌ಪುಟ್‌ಗಳು ಬಹಳಷ್ಟು ಸಹಾಯ ಮಾಡುತ್ತವೆ ಎಂದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಆರ್ಸಿಬಿ, ಐದು ವಿಕೆಟ್ ಕಳೆದುಕೊಂಡು 205 ರನ್ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ರಾಜಸ್ಥಾನ್ ರಾಯಲ್ಸ್, 9 ವಿಕೆಟ್ ಕಳೆದುಕೊಂಡು 194 ರನ್ಗಳಿಸಿ ಸೋಲಿಗೆ ಶರಣಾಯ್ತು.
ಇದನ್ನೂ ಓದಿ: RCBಗೆ ತವರಲ್ಲಿ ಮೊದಲ ಗೆಲುವು.. ರೋಚಕ ಪಂದ್ಯದಲ್ಲಿ ರಾಯಲ್ಸ್ಗೆ ಪಂಚ್, ರಾಯಲ್ ಸಂಭ್ರಮ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್