IPL ಟ್ರೋಫಿ ಜೊತೆ ಆರ್​ಸಿಬಿ ಕ್ಯಾಪ್ಟನ್​ ರಜತ್, ಶ್ರೇಯಸ್​ ಮಸ್ತ್​ ಲುಕಿಂಗ್​.. ಟಾಪ್-10 ಫೋಟೋಸ್​!

author-image
Bheemappa
Updated On
IPL ಟ್ರೋಫಿ ಜೊತೆ ಆರ್​ಸಿಬಿ ಕ್ಯಾಪ್ಟನ್​ ರಜತ್, ಶ್ರೇಯಸ್​ ಮಸ್ತ್​ ಲುಕಿಂಗ್​.. ಟಾಪ್-10 ಫೋಟೋಸ್​!
Advertisment
  • ಟ್ರೋಫಿ ಜೊತೆಗೆ ಸಖತ್ ಆಗೇ ಲುಕ್ ಕೊಟ್ಟಿರುವ ರಜತ್ ಪಾಟಿದಾರ್
  • ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆಯಲಿರುವ ಫೈನಲ್ ಮ್ಯಾಚ್​
  • IPL ಟ್ರೋಫಿ ಜೊತೆ ಇಬ್ಬರು ನಾಯಕರ ಫೋಟೋ ಶೂಟ್​ ಹೇಗಿದೆ?

ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್​ ನಡುವೆ ಐಪಿಎಲ್​ನ ಫೈನಲ್ ಪಂದ್ಯ ಇಂದು ನಡೆಯಲಿದೆ. ಈ ಸಲ ಆರ್​ಸಿಬಿ ಫೈನಲ್​ಗೆ ಎಂಟ್ರಿ ಕೊಟ್ಟಿದ್ದರಿಂದ ಫೈನಲ್ ಪಂದ್ಯ ಹೆಚ್ಚು ಮಹತ್ವ ಪಡೆದುಕೊಂಡಿದೆ. ಇದು ಅಲ್ಲದೇ ವಿಶ್ವದಲ್ಲಿರುವ ಆರ್​​ಸಿಬಿ ಅಭಿಮಾನಿಗಳು ಬೆಂಗಳೂರು ತಂಡವೇ ಟ್ರೋಫಿ ಗೆಲ್ಲಲಿ ಎಂದು ಹಾರೈಸುತ್ತಿದ್ದಾರೆ. ಇದರ ನಡುವೆ ಐಪಿಎಲ್​ ಟ್ರೋಫಿ ಜೊತೆ ಆರ್​ಸಿಬಿ ನಾಯಕ ರಜತ್ ಪಾಟಿದಾರ್ ಹಾಗೂ ಪಂಜಾಬ್​ ಕ್ಯಾಪ್ಟನ್ ಅಯ್ಯರ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ​

publive-image

ಆರ್​ಸಿಬಿ ನಾಯಕ ರಜತ್ ಪಾಟಿದಾರ್ ಹಾಗೂ ಪಂಜಾಬ್ ಕಿಂಗ್ಸ್​ ತಂಡದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್​ ಇಬ್ಬರು ಐಪಿಎಲ್​ ಟ್ರೋಫಿ ಜೊತೆ ಫೋಟೋ ಶೂಟ್ ಮಾಡಿಸಿದ್ದಾರೆ. ವಿಧವಿಧವಾದ ಫೋಟೋಗಳನ್ನು ಕ್ಲಿಕ್ ಮಾಡಲಾಗಿದೆ. ಆದರೆ ಇನ್ನು ಫೋಟೋಗಳನ್ನು ವೈರಲ್ ಮಾಡಿಲ್ಲ. ಆದರೆ ಫೋಟೋಶೂಟ್​ಗೆ ಹೋಗುವಾಗ ಕ್ಯಾಮೆರಾದಲ್ಲಿ ಸೆರೆ ಹಿಡಿದಂತ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

publive-image

ಐಪಿಎಲ್ ಟ್ರೋಫಿಯೊಂದಿಗೆ ಫೋಟೋಗೆ ಪೋಸ್ ಕೊಡಲು ಕಾರಿನಲ್ಲಿ ಬರುವಾಗ ಆರ್​ಸಿಬಿ ನಾಯಕ ರಜತ್ ಪಾಟಿದಾರ್ ಫೋನ್​ನಲ್ಲಿ ಮಾತನಾಡುತ್ತಿರುವುದು. ಇನ್ನು ಪಂಜಾಬ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಫೋನ್ ನೋಡುತ್ತ ಕುಳಿತಿರುವುದು.

publive-image

ಫೋಟೋಶೂಟ್​ಗಾಗಿ ಶ್ರೇಯಸ್ ಅಯ್ಯರ್ ಸ್ಟೈಲ್​ ಆಗಿ ಬರುತ್ತಿರುವ ದೃಷ್ಯ ಕಾಣಬಹುದು.

publive-image

ಟ್ರೋಫಿಯೊಂದಿಗೆ ಫೋಟೋ ತೆಗೆಸಿಕೊಳ್ಳಲು ಇಬ್ಬರು ನಾಯಕರು ಸ್ಟೇಡಿಯಂ ಒಳಕ್ಕೆ ಬರುತ್ತಿರುವಾಗ ಕಂಡು ಬಂದ ನೋಟ.

publive-image

2025ರ ಐಪಿಎಲ್ ಟ್ರೋಫಿ ಜೊತೆಗೆ ಆರ್​ಸಿಬಿ ನಾಯಕ ರಜತ್ ಪಾಟಿದಾರ್ ಅವರ ಒಂದು ನೋಟ.

publive-image

ಶ್ರೇಯಸ್ ಅಯ್ಯರ್ ಅವರು ಟ್ರೋಫಿಯನ್ನು ಕೆಳಗಿನಿಂದ ಮೇಲೆವರೆಗೆ ನೋಡುತ್ತಿರುವುದು. ಅಷ್ಟಕ್ಕೂ ಹೀಗೆ ಏಕೆ ನೋಡಿದರು ಎಂದು ಯಾರಿಗೂ ತಿಳಿಯಲಿಲ್ಲ.

publive-image

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್ ಕಪ್​ ಮುಂದೆ ರಜತ್ ಪಾಟಿದಾರ್ ಹಾಗೂ ಶ್ರೇಯಸ್ ಅಯ್ಯರ್ ಥ್ಯಾಂಕ್ಸ್ ಕೊಟ್ಟಿರುವುದು.

publive-image

ಶ್ರೇಯಸ್ ಅಯ್ಯರ್ ಹಾಗೂ ರಜತ್ ಪಾಟಿದಾರ್ ಅವರು ಟ್ರೋಫಿ ಜೊತೆಗೆ ಇರುವಾಗ ಹಿಂದೆಯಿಂದ ಫೋಟೋ ಕ್ಲಿಕ್ ಮಾಡಿರುವುದು.

publive-image

ಐಪಿಎಲ್ ಕಪ್​ ನನಗೆ ಬೇಕು ಎನ್ನುವಂತೆ ಟ್ರೋಫಿಯನ್ನು ಹಿಡಿದು ನಿಂತು ಫೋಟೋವನ್ನು ತೆಗೆಸಿಕೊಂಡ ನಾಯಕರು.

ಇದನ್ನೂ ಓದಿ:RCB ಅಭಿಮಾನಿಗಳೇ ಹುಷಾರ್..!​ ಹದ್ದುಮೀರಿ ವರ್ತಿಸಿದರೆ ಕಾದಿದೆ ಬಿಗ್ ಶಾಕ್​!

publive-image

2025ರ ಇಂಡಿಯನ್ ಪ್ರೀಮಿಯರ್ ಲೀಗ್​ನ ಫೈನಲ್​ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಸಿದ್ಧವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಟ್ರೋಫಿಗಾಗಿ ದೊಡ್ಡ ಹೋರಾಟ ಇಂದು ಸಂಜೆ  7:30ಕ್ಕೆ ನಡೆಯಲಿದೆ. 18 ವರ್ಷಗಳಿಂದ ಕಪ್​ ಗೆಲ್ಲದ ಆರ್​ಸಿಬಿ ಈ ಸಲ ಟ್ರೋಫಿಗೆ ಮುತ್ತಿಡಲಿ ಎನ್ನುವುದು ಕೋಟ್ಯಂತರ ಅಭಿಮಾನಿಗಳ ಆಸೆ. ಅದರಂತೆ ಪಂಜಾಬ್ ಕೂಡ ಚೊಚ್ಚಲ ಕಪ್ ಗೆಲ್ಲುವ ನಿರೀಕ್ಷೆಯಲ್ಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment