Advertisment

ಒಂದು ಸ್ಥಾನಕ್ಕಾಗಿ ಮೂವರ ಮಧ್ಯೆ ಫೈಟ್​.. ಆರ್​ಸಿಬಿ ಕ್ಯಾಪ್ಟನ್​​ಗೆ ಇದು ಕಠಿಣ ಚಾಲೆಂಜ್..!

author-image
Ganesh
Updated On
ನಾಳೆ RCB ಹೈವೋಲ್ಟೇಜ್ ಪಂದ್ಯ.. ಚಿನ್ನಸ್ವಾಮಿ ಸ್ಟೇಡಿಯಂ ಕಡೆ ಹೋಗೋರು ಓದಲೇಬೇಕಾದ ಸ್ಟೋರಿ!
Advertisment
  • ಆರ್​ಸಿಬಿ ನಾಯಕ ರಜತ್ ಆಯ್ಕೆ ಯಾವ ಆಟಗಾರ?
  • RCB vs KKR ಮಧ್ಯೆ18ನೇ ಸೀಸನ್​​ನ ಮೊದಲ ಪಂದ್ಯ
  • ಇಂದು ಸಂಜೆ 7.30 ರಿಂದ ಪಂದ್ಯ ಆರಂಭ ಆಗಲಿದೆ

ಹಿಂದಿದ್ದ ಆರ್​​ಸಿಬಿಗೂ ಈಗಿರೋ ಆರ್​​ಸಿಬಿಗೂ ಅಜಗಜಾಂತರ ವ್ಯತ್ಯಾಸವಿದೆ. ಹೊಸ ಸೀಸನ್​, ಹೊಸ ತಂಡ, ಹೊಸ ನಾಯಕನ ಬಲ ತಂಡಕ್ಕಿದೆ. ಇದೀಗ ಹೊಸ ಹುರುಪಿನೊಂದಿಗೆ ಹೊಸ ಸೀಸನ್​​ ಆರಂಭಿಸಲು ರೆಡ್​​ ಆರ್ಮಿ ರೆಡಿಯಾಗಿದೆ. ಭರ್ಜರಿ ತಯಾರಿ ನಡೆಸಿರೋ ಆರ್​ಸಿಬಿ, ರಾಜ ರಜತ್​​​ ಪಟಿದಾರ್​ ನಾಯಕತ್ವದಲ್ಲಿ ಯುದ್ಧ ಭೂಮಿಗೆ ಇಳಿಯಲು ರೆಡಿಯಾಗಿದೆ.

Advertisment

ಆದರೆ..

ಮೊದಲ ಪಂದ್ಯಕ್ಕೂ ಮುನ್ನ ರಜತ್​ ಪಟಿದಾರ್​ಗೆ ಸೆಲೆಕ್ಷನ್​ ಸವಾಲು ಎದುರಾಗಿದೆ. ಇಂಡಿಯನ್​ ಪ್ಲೇಯರ್​​ಗಳ ಆಯ್ಕೆ ದೊಡ್ಡ ಸಮಸ್ಯೆ ಅನಿಸಿಲ್ಲ. ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನ ಪಡೆಯೋ ನಾಲ್ವರು ವಿದೇಶಿ ಪ್ಲೇಯರ್ಸ್​​ ಯಾರು ಅನ್ನೋದು ಪ್ರಶ್ನೆಯಾಗಿದೆ.
ಫಿಲ್​ ಸಾಲ್ಟ್​, ಲಯಾಮ್​ ಲಿವಿಂಗ್​ಸ್ಟೋನ್, ಜೋಶ್​ ಹೇಜಲ್ವುಡ್​​​ ಮೊದಲ 3 ಆಯ್ಕೆಯಾಗಿದ್ದಾರೆ. ಇನ್ನೊಂದು ಸ್ಥಾನಕ್ಕೆ ಟಿಮ್ ಡೇವಿಡ್​, ರೊಮಾರಿಯೋ ಶೆಫರ್ಡ್​, ಜೇಕಬ್​ ಬೆತೆಲ್​ ನಡುವೆ ಫೈಟ್​ ಇದೆ. ಕ್ಯಾಪ್ಟನ್​​ ಚಾಯ್ಸ್​ ಯಾರು ಅನ್ನೋದು ಕುತೂಹಲ ಮೂಡಿಸಿದೆ.

ಕೋಲ್ಕತ್ತದ ಈಡನ್ ಗಾರ್ಡನ್​​ನಲ್ಲಿ ಇಂದು ಸಂಜೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಿನಿಮಾ ತಾರೆಯರು ಐಪಿಎಲ್ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಅದಾದ ನಂತರ ಅಂದರೆ 7 ಗಂಟೆಗೆ ಟಾಸ್​​ ಪ್ರಕ್ರಿಯೆ ನಡೆಯಲಿದೆ. 7.30 ರಿಂದ ಪಂದ್ಯ ಆರಂಭವಾಗಲಿದೆ.

ಇದನ್ನೂ ಓದಿ: ಮೊದಲ ಪಂದ್ಯಕ್ಕೂ ಮುನ್ನ ಅಣ್ಣಾವ್ರ ನೆನಪಿಸಿದ RCB; ಕ್ಯಾಪ್ಟನ್ ರಜತ್ ಅಭಿಮಾನಿಗಳಿಗೆ ಹೇಳಿದ್ದೇನು?

Advertisment

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment