/newsfirstlive-kannada/media/post_attachments/wp-content/uploads/2025/04/BHUVANESHWAR.jpg)
ಮೊದಲ 2 ಪಂದ್ಯ ಗೆದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ನಲ್ಲಿ ಶುಭಾರಂಭ ಮಾಡಿದೆ. 3ನೇ ಪಂದ್ಯವನ್ನಾಡಲು ಬೆಂಗಳೂರಿಗೆ ಬಂದಿರುವ ಆರ್ಸಿಬಿ ಚಿನ್ನಸ್ವಾಮಿ ಮೈದಾನದಲ್ಲಿ ಅಭ್ಯಾಸ ಆರಂಭಿಸಿದೆ.
ಅಭ್ಯಾಸದ ವೇಳೆ ವೇಗಿ ಭುವನೇಶ್ವರ್ ಕುಮಾರ್ ಕರಾರುವಕ್ ಯಾರ್ಕರ್ ಹಾಕಿದ್ದಾರೆ. ಭುವನೇಶ್ವರ್ ಎಸೆತಕ್ಕೆ ಸ್ಟ್ರೈಕ್ನಲ್ಲಿದ್ದ ಕ್ಯಾಪ್ಟನ್ ರಜತ್ ಪಟಿದಾರ್ ಸ್ಟನ್ ಆಗಿದ್ದಾರೆ. ಆರ್ಸಿಬಿ ನಾಳೆ ತನ್ನ ಮೂರನೇ ಪಂದ್ಯವನ್ನು ಆಡಲಿದೆ.
ಇದನ್ನೂ ಓದಿ: ಹ್ಯಾಟ್ರಿಕ್ ಸೋಲಿನಿಂದ ಮುಂಬೈ ಇಂಡಿಯನ್ಸ್ ಪಾರು.. ಹಾರ್ದಿಕ್ ಪಾಂಡ್ಯ ಪಡೆಗೆ ಮೊದಲ ಗೆಲುವು
Bhuvi lands one fierce and fine,
Our skipper counters just in time! 🎯
How many times are you gonna watch this? 🤩#PlayBold#ನಮ್ಮRCB#IPL2025pic.twitter.com/WlXDrXn5lq— Royal Challengers Bengaluru (@RCBTweets) March 31, 2025
ಗುಜರಾತ್ ಟೈಟನ್ಸ್ ವಿರುದ್ಧ ಆರ್ಸಿಬಿ ಸೆಣಸಾಟ ನಡೆಸಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಸಂಜೆ 7.30 ರಿಂದ ಪಂದ್ಯ ಆರಂಭವಾಗಲಿದೆ. ಅದಕ್ಕಾಗಿ ಆರ್ಸಿಬಿ ಭರ್ಜರಿ ತಯಾರಿ ನಡೆಸಿದೆ. ಎರಡು ಪಂದ್ಯಗಳನ್ನು ಆಡಿರುವ ಆರ್ಸಿಬಿ ಎರಡಲ್ಲೂ ಗೆದ್ದುಕೊಂಡಿರುವ ಆರ್ಸಿಬಿ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಒಂದು ಪಂದ್ಯದಲ್ಲಿ ಸೋತು, ಇನ್ನೊಂದು ಪಂದ್ಯದಲ್ಲಿ ಗೆದ್ದಿರುವ ಗುಜರಾತ್ ಟೈಟನ್ಸ್ ಪಾಯಿಂಟ್ಸ್ ಟೇಬಲ್ನಲ್ಲಿ 4ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: 4, 4, 4, 4, 6, 6, 6, 6; ರೋಹಿತ್ ಶರ್ಮಾ ಅದೇ ರಾಗ, ಅದೇ ಹಾಡು.. ಭರ್ಜರಿ ಅರ್ಧಶತಕ ಸಿಡಿಸಿದ ರಯಾನ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್