ಆರ್​ಸಿಬಿಯಲ್ಲಿ ಯಾರೂ ಮಾಡಿರದ ಸಾಧನೆ ಮಾಡಿದ ರಜತ್.. ಟೀಕಿಸಿದವ್ರಿಗೆ ಕೊಟ್ರು ನೋಡಿ ಉತ್ತರ..!

author-image
Ganesh
Updated On
RCB ಕಪ್ ಗೆಲ್ಲಬೇಕಾ?; ಈ ಪ್ಲೇಯರ್ಸ್​ ರೋಲ್ ಇಂಪಾರ್ಟೆಂಟ್​.. ಇವರು ಏನೇನು ಮಾಡಬೇಕು?
Advertisment
  • 17 ವರ್ಷಗಳ ಬಳಿಕ ಚೆಪಾಕ್​ನಲ್ಲಿ ಐತಿಹಾಸಿಕ ಗೆಲುವು
  • 32 ಎಸೆತ, 3 ಸಿಕ್ಸರ್, 4 ಬೌಂಡ್ರಿ, 51 ರನ್.. CSK ಎದುರು ಅಬ್ಬರ
  • 3 ಬಾರಿ ಎದುರಾಳಿಗಳ ತವರಿನಲ್ಲೇ ಗೆಲುವಿನ ಸಂಭ್ರಮ

ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಖತ್ ಸೌಂಡ್ ಮಾಡ್ತಿದೆ. ಕೊಲ್ಕತ್ತಾ, ಚೆನ್ನೈ ಮತ್ತು ಮುಂಬೈನಂತಹ ಬಲಿಷ್ಟ ತಂಡಗಳನ್ನ ಬಗ್ಗು ಬಡಿದಿರುವ ಆರ್​ಸಿಬಿ, ದಾಖಲೆಗಳ ಮೇಲೆ ದಾಖಲೆಗಳು ಮಾಡ್ತಿದೆ. ಈ ಸೀಸನ್​ನಲ್ಲಿ ಬೆಂಗಳೂರು ತಂಡದ ಲಕ್ ಬದಲಾಗಿದೆ. ಅದಕ್ಕೆ ಕಾರಣ ಕ್ಯಾಪ್ಟನ್ ರಜತ್ ಪಾಟೀದಾರ್.

ಹೌದು, 17 ವರ್ಷಗಳಲ್ಲಿ ಒಂದೇ ಒಂದು ಕಪ್ ಗೆಲ್ಲದ ಆರ್​ಸಿಬಿ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿತ್ತು. ಈ ಸೀಸನ್​ನಲ್ಲಿ ಆರ್​ಸಿಬಿ ಬೋಲ್ಡ್ ಆಗಿ ಕಾಣ್ತಿದೆ. ಪಂದ್ಯದಿಂದ ಪಂದ್ಯಕ್ಕೆ ಆಟಗಾರರು ನೀಡ್ತಿರುವ ಪ್ರದರ್ಶನ. ಜೊತೆಗೆ ರಜತ್ ಪಾಟೀದಾರ್​ರ ಬ್ರಿಲಿಯಂಟ್ ಕ್ಯಾಪ್ಟೆನ್ಸಿ ನೋಡ್ತಿದ್ರೆ ಆರ್​ಸಿಬಿ ಈ ಬಾರಿ​​​​​​ ಕಪ್ ಗೆಲ್ಲುವ ಸೂಚನೆ ನೀಡ್ತಿದೆ.

ಇದನ್ನೂ ಓದಿ: ಅದಿತಿ ಪ್ರಭುದೇವ ಮಗಳು ಎಷ್ಟು ಕ್ಯೂಟ್​.. ಬರ್ತ್​ಡೇ ಟಾಪ್​ 10​ ಫೋಟೋಸ್ ಇಲ್ಲಿವೆ!​​

publive-image

17 ವರ್ಷಗಳ ಬಳಿಕ ಚೆಪಾಕ್​ನಲ್ಲಿ ಐತಿಹಾಸಿಕ ಗೆಲುವು

2008ರ ಬಳಿಕ ಆರ್​ಸಿಬಿ, ಚೆಪಾಕ್​​ನಲ್ಲಿ ಗೆದ್ದಿದ್ದೇ ಇಲ್ಲ. ಈ ಸೀಸನ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಚೆನ್ನೈನಲ್ಲೇ ಸೂಪರ್​ಕಿಂಗ್ಸ್​ ತಂಡವನ್ನ ಮಣಿಸಿ ಐತಿಹಾಸಿಕ ಗೆಲುವು ದಾಖಲಿಸಿತು. ಇದಕ್ಕೆ ಕಾರಣ ಕ್ಯಾಪ್ಟನ್ ರಜಿತ್ ಪಾಟೀದಾರ್​ರ ಸಿಡಿಲಬ್ಬರದ ಇನ್ನಿಂಗ್ಸ್​.

32 ಎಸೆತ, 3 ಸಿಕ್ಸರ್, 4 ಬೌಂಡ್ರಿ, 51 ರನ್!

ಚೆನ್ನೈ ವಿರುದ್ಧ 32 ಎಸೆತಗಳನ್ನ ಎದುರಿಸಿದ್ದ ಪಾಟೀದಾರ್, 51 ರನ್​ ಸಿಡಿಸಿದ್ರು. 3 ಭರ್ಜರಿ ಸಿಕ್ಸರ್ ಮತ್ತು 4 ಬೌಂಡರಿಗಳು, ಕ್ಯಾಪ್ಟನ್ ಬ್ಯಾಟ್​ನಿಂದ ದಾಖಲಾಯ್ತು. ಕೊಹ್ಲಿ, ಲಿವಿಂಗ್​ಸ್ಟೋನ್ ಮತ್ತು ಜಿತೇಶ್ ಶರ್ಮಾ ಜೊತೆ ಪಾಟೀದಾರ್, ಉತ್ತಮ ಜೊತೆಯಾಟವಾಡಿದ್ರು.

ವಾಂಖೆಡೆಯಲ್ಲಿ ವಿಜಯೋತ್ಸವ

ಐಪಿಎಲ್​​​ ಸೀಸನ್​-18ರ ಮೋಸ್ಟ್ ಎಕ್ಸೈಟಿಂಗ್ ಗೇಮ್ ಅಂದ್ರೆ ಅದು ಆರ್​ಸಿಬಿ ವರ್ಸಸ್ ಮುಂಬೈ ಇಂಡಿಯನ್ಸ್ ಪಂದ್ಯ. ವಾಂಖೆಡೆಯಲ್ಲಿ ರನ್​​​ ಸುನಾಮಿ ಎಬ್ಬಿಸಿದ ಉಭಯ ತಂಡಗಳು ಪ್ರತಿ ಬಾಲ್, ಪ್ರತಿ ಓವರ್​​ಗೂ ರೋಚಕತೆ ಹೆಚ್ಚಿಸಿತ್ತು. ಅಂತಿಮವಾಗಿ ಆರ್​ಸಿಬಿ ಸತತ 6 ಪಂದ್ಯಗಳ ಸೋಲಿಗೆ ಬ್ರೇಕ್ ಹಾಕಿತು. 10 ವರ್ಷಗಳ ಬಳಿಕ ವಾಂಖೆಡೆಯಲ್ಲಿ ವಿಜಯೋತ್ಸವ ಆಚರಿಸಿತು.

ಇದನ್ನೂ ಓದಿ: ಹೀನಾಯ ಸ್ಥಿತಿಗೆ ತಲುಪಿದ ಚೆನ್ನೈ ಸೂಪರ್ ಕಿಂಗ್ಸ್​.. ಫಿನಿಷರ್ ಪಾತ್ರ ನಿರ್ವಹಿಸುವಲ್ಲಿ ಧೋನಿ ಮತ್ತೆ ಫೇಲ್..!

publive-image

ಸಿಡಿದೆದ್ದ ಪಾಟೀದಾರ್, 32 ಬಾಲ್, 64 ರನ್

ಮುಂಬೈ ವಿರುದ್ಧ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್​ಗೆ ಮುಂದಾದ ರಜಿತ್ ಪಾಟೀದಾರ್, ಬೌಲರ್​ಗಳನ್ನ ಹಿಗ್ಗಾಮುಗ್ಗಾ ಜಾಡಿಸಿದ್ರು. ಬೋಲ್ಟ್​, ಬೂಮ್ರಾ, ಹಾರ್ದಿಕ್ ಪಾಂಡ್ಯ, ಸ್ಯಾಂಟ್ನರ್​ರಂತಹ ಅನುಭವಿ ಬೌಲರ್​ಗಳನ್ನ ಬೆಂಡೆತ್ತಿದ್ರು. ಕೇವಲ 32 ಎಸೆತಗಳಲ್ಲಿ 64 ರನ್​ ಚಚ್ಚಿದ್ರು.

3 ಬಾರಿ ಎದುರಾಳಿಗಳ ತವರಿನಲ್ಲೇ ಗೆಲುವಿನ ಸಂಭ್ರಮ

ಕೊಲ್ಕತ್ತಾ, ಚೆನ್ನೈ, ಮುಂಬೈನಲ್ಲಿ ಆರ್​ಸಿಬಿ, ಗೆದ್ದು ಬೀಗಿದೆ. ಎದುರಾಳಿ ತಂಡಗಳ ತವರಿನಲ್ಲೇ ಗೆಲುವಿನ ಸಂಭ್ರಮ ಆಚರಿಸಿದ ಬೆಂಗಳೂರು ತಂಡ, ಸದ್ಯ ಐಪಿಎಲ್​​ನ ಮೋಸ್ಟ್ ಡೇಂಜರಸ್ ಟೀಮ್ ಎನಿಸಿಕೊಂಡಿದೆ. ಹೋಂ ಗ್ರೌಂಡ್​ನಲ್ಲಿ ಗೆಲ್ಲೋದು ಸುಲಭ. ಆದ್ರೆ ಆರ್​ಸಿಬಿ AWAY ಮ್ಯಾಚ್​ಗಳನ್ನ ಗೆಲ್ಲುತ್ತಾ ತನ್ನ ತಾಖತ್ತನ್ನ ಪ್ರದರ್ಶಿಸುತ್ತಿದೆ.

ಇದನ್ನೂ ಓದಿ: 9 ಸಿಕ್ಸರ್​, 7 ಬೌಂಡರಿ.. ಕೇವಲ 39 ಎಸೆತದಲ್ಲಿ ಸ್ಫೋಟಕ ಶತಕ.. ಐಪಿಎಲ್​​ನಲ್ಲಿ ಹೊಸ ದಾಖಲೆ..!

publive-image

ಆರ್​ಸಿಬಿಯ ಲಕ್ಕಿ ಕ್ಯಾಪ್ಟನ್ ಆಗ್ತಾರಾ ಪಾಟೀದಾರ್?

ರಜತ್​ ಪಾಟೀದಾರ್​ಗೆ ಪಟ್ಟ ಕಟ್ಟಿದಾಗ ಪರ-ವಿರೋಧ ಕೇಳಿ ಬಂತು. ಪಾಟೀದಾರ್, ಆರ್​ಸಿಬಿಯ ಲಕ್ಕಿ ಕ್ಯಾಪ್ಟನ್ ಅಂತ ಈಗಾಗಲೇ ಪ್ರೂವ್ ಮಾಡ್ತಿದ್ದಾರೆ. ಬ್ಯಾಟಿಂಗ್ ಜೊತೆಗೆ ಕ್ಯಾಪ್ಟೆನ್ಸಿಯಲ್ಲಿ ಪಾಟೀದಾರ್ ಎಕ್ಸಲೆಂಟ್. ಇದುವರೆಗೂ ಯಾವ ಆರ್​ಸಿಬಿ ನಾಯಕನೂ ಮಾಡದ ಸಾಧನೆಯನ್ನ, ಪಾಟೀದಾರ್ ಮಾಡಿ ತೋರಿಸಿದ್ದಾರೆ. ಆ ಮೂಲಕ ಕ್ಯಾಪ್ಟನ್ ಪಟ್ಟ ಕಟ್ಟಿರೋದಕ್ಕೆ ಟೀಕಿಸಿದ್ದ ಟೀಕಾಕಾರರಿಗೂ  ಉತ್ತರ ನೀಡಿದ್ದಾರೆ. ಹಾಗಾಗಿ ಈ ಬಾರಿ ಆರ್​ಸಿಬಿಯ ವನವಾಸಕ್ಕೆ ಬ್ರೇಕ್ ಬೀಳುತ್ತೆ ಅನ್ನೋ ಟಾಕ್ಸ್ ಶುರುವಾಗಿದೆ.

ಈ ಸೀಸನ್​ನಲ್ಲಿ ಆರ್​ಸಿಬಿ ಆಟಗಾರರು ಡಿಫರೆಂಟ್ ಗೇಮ್ ಅಪ್ರೋಚ್ ತೋರುತ್ತಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ತಿದ್ದಾರೆ. ಈ ವರ್ಷ ಹೊಸ ಅಧ್ಯಾಯ ಶುರು ಮಾಡಿರುವ ಆರ್​ಸಿಬಿ, ಮುಂದಿನ ಪಂದ್ಯಗಳಲ್ಲೂ ಭರ್ಜರಿ ಪ್ರದರ್ಶನ ನೀಡಲಿ. ಕ್ಯಾಪ್ಟನ್ ಪಾಟೀದಾರ್ ಮತ್ತಷ್ಟು ಪಂದ್ಯಗಳನ್ನ ಗೆಲ್ಲಿಸಿಕೊಡಲಿ ಅನ್ನೋದೇ ಆಶಯ!

ಇದನ್ನೂ ಓದಿ: ಅಮೆರಿಕಾದಿಂದ ಇವತ್ತೇ ತಹಾವುರ್ ರಾಣಾ ಹಸ್ತಾಂತರ ಸಾದ್ಯತೆ.. ಭಾರತದಲ್ಲಿ ಎರಡು ಜೈಲುಗಳು ಸಿದ್ಧ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment