/newsfirstlive-kannada/media/post_attachments/wp-content/uploads/2025/03/Rajat-Patidar.jpg)
ಕ್ರಿಕೆಟ್​​ ಜಗತ್ತು ತುದಿಗಾಲಲ್ಲಿ ನಿಂತು ಕಾಯುತ್ತಿದ್ದ ದಿನ ಬಂದೇ ಬಿಡ್ತು. ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಒಂದು ಪ್ರತಿಷ್ಟಿತ ಟ್ರೋಫಿಗಾಗಿ ಇಂದಿನಿಂದ 10 ತಂಡಗಳು ಬ್ಯಾಟಲ್ ​ಫೀಲ್ಡ್​ನಲ್ಲಿ ಫೈಟ್​​ ನಡೆಸಲಿದೆ. 75 ಪಂದ್ಯಗಳಿಗೆ 18ನೇ ಸೀಸನ್​ನ ಐಪಿಎಲ್​ ಸಾಕ್ಷಿಯಾಗಲಿದ್ದು, 65 ದಿನಗಳ ಕಾಲ ಕ್ರಿಕೆಟ್​ ಫ್ಯಾನ್ಸ್​ಗೆ ಫುಲ್​ ಟ್ರೀಟ್​ ಕಾದಿದೆ.
ಇದನ್ನೂ ಓದಿ: ಕರ್ನಾಟಕ ಬಂದ್! ನಾಳೆ ಏನಿರುತ್ತೆ? ಏನಿರಲ್ಲ? ಕನ್ನಡ ಪರ ಸಂಘಟನೆ ಇಟ್ಟ 20 ಬೇಡಿಕೆಗಳು ಏನೇನು?
/newsfirstlive-kannada/media/post_attachments/wp-content/uploads/2025/03/RCB-5.jpg)
ಪಂದ್ಯ ಆರಂಭಕ್ಕೂ ಮುನ್ನ ಆರ್‌ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಅವರು ಎರಡು ಕೈ ಜೋಡಿಸಿ ನಟ ರಾಜ್‌ಕುಮಾರ್ ಅವರ ಖ್ಯಾತ ಡೈಲಾಗ್​ ಹೊಡೆದಿದ್ದಾರೆ. ಹೌದು, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ರಜತ್​ ಪಾಟಿದಾರ್​ ವರನಟ ಡಾಕ್ಟರ್​​ ರಾಜ್​ಕುಮಾರ್​ರನ್ನ ನೆನೆದಿದ್ದಾರೆ.
View this post on Instagram
ಮಿಸ್ಟರ್​​ ನ್ಯಾಗ್ಸ್​ ಜೊತೆಗಿನ ಇನ್​​ಸೈಡರ್​ ಶೋನಲ್ಲಿ ಭಾಗಿಯಾಗಿದ್ದ ವೇಳೆ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ಫ್ಯಾನ್ಸ್​ ಬೆಂಬಲಕ್ಕೆ ಧನ್ಯವಾದ ಹೇಳಿರೋ ರಜತ್​, ಡಾಕ್ಟರ್​​ ರಾಜ್​ಕುಮಾರ್​ ಅವರು ಹೇಳಿದಂತೆ ಅಭಿಮಾನಿಗಳೇ ನಮ್ಮ ದೇವ್ರು ಎಂದು ಡೈಲಾಗ್​ ಹೊಡೆದಿದ್ದಾರೆ.
ಕನ್ನಡದಲ್ಲಿ ಅಭಿಮಾನಿಗಳೇ ನಮ್ಮ ದೇವ್ರು ಎಂದು ರಜತ್ ಪಾಟಿದಾರ್ ಹೊಡೆದ ಡೈಲಾಗ್​ ಕೇಳಿ ಆರ್​ಸಿಬಿ ಅಭಿಮಾನಿಗಳು ಫುಲ್​ ಖುಷ್ ಆಗಿದ್ದಾರೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು, ಅಭಿಮಾನಿಗಳಿಗೆ ನಮ್ಮನೇ ದೇವ್ರು, RCBನೇ ನಮ್ ಎದೆ ಉಸಿರು, ಕನ್ನಡ ಮಾತಾಡಿ ಮನಸ್ಸು ಗೆದ್ದು ಬಿಟ್ಟೆ, ಈ ಸಲ cup ನಮ್ದೇ, ನಮ್ಮ ನಾಯಕ ನಮ್ಮ ಹೆಮ್ಮೆ ಎಂದು ಕಾಮೆಂಟ್ಸ್​ ಹಾಕುತ್ತಿದ್ದಾರೆ. ಇನ್ನೂ, 2022 ರಿಂದ 2024ರವರೆಗೆ ದಕ್ಷಿಣ ಆಫ್ರಿಕಾದ ಫಾಫ್ ಡುಪ್ಲೆಸಿಸ್ (Faf du Plessis) ಆರ್​ಸಿಬಿ ನಾಯಕರಾಗಿದ್ದರು. ಆದರೆ ಈ ಬಾರಿಯ ರಜತ್ ಪಾಟಿದಾರ್ ಆರ್​ಸಿಬಿ ತಂಡದ ನಾಯಕರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us