18ಕ್ಕೆ ಟ್ರೋಫಿಗೆ ಮುತ್ತಿಟ್ಟ RCB.. ಫೈನಲ್ ಗೆಲುವಿಗೆ ಕಾರಣ ಹೇಳಿದ ಕ್ಯಾಪ್ಟನ್​ ರಜತ್ ಪಾಟಿದಾರ್

author-image
Bheemappa
Updated On
ಟ್ರೋಫಿ ಗೆಲ್ಲಿಸಿಕೊಟ್ಟ ಪಾಟೀದಾರ್ ಜರ್ನಿ ಹಿಂದೆ ತ್ಯಾಗದ ಕತೆ.. ಝೀರೋ ಟು ಹೀರೋ..!
Advertisment
  • ಪಂದ್ಯದ ಬಳಿಕ ಮಾತನಾಡಿದ ರಜತ್ ಪಾಟಿದಾರ್ ಏನಂದ್ರು?
  • ಪಂಜಾಬ್​ ವಿರುದ್ಧ ಕೇವಲ 6 ರನ್​ಗಳಿಂದ ಆರ್​ಸಿಬಿಗೆ ಜಯ
  • ಕೊನೆ ಓವರ್​ನಲ್ಲಿ ಎಲ್ಲರ ಮೊಗದಲ್ಲಿ ಗೆಲುವಿನ ಮಂದಹಾಸ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂತೂ ಫೈನಲ್​ನಲ್ಲಿ ಗೆದ್ದು 18 ವರ್ಷಗಳ ಬಳಿಕ ಐಪಿಎಲ್​ ಟ್ರೋಫಿಗೆ ಮುತ್ತಿಟ್ಟಿದೆ. ಪಂಜಾಬ್​ ವಿರುದ್ಧ ಕೇವಲ 6 ರನ್​ಗಳಿಂದ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಪಂದ್ಯದ ಬಳಿಕ ಮಾತನಾಡಿದ ಆರ್​ಸಿಬಿ ಕ್ಯಾಪ್ಟನ್​ ರಜತ್ ಪಾಟಿದಾರ್ ಯಾರು ಉತ್ತಮವಾಗಿ ಪ್ರದರ್ಶನ ನೀಡಿದರು ಎಂದು ಮಾತನಾಡಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್ ಅವರು, ಇಂದು ಅತ್ಯಂತ ವಿಶೇಷವಾದ ದಿನ. ನನಗೆ, ವಿರಾಟ್ ಕೊಹ್ಲಿ ಹಾಗೂ ಹಲವು ವರ್ಷಗಳಿಂದ ಬೆಂಬಲ ನೀಡಿದ ಎಲ್ಲ ಫ್ಯಾನ್ಸ್​ಗೆ ತುಂಬಾ ತುಂಬಾ ವಿಶೇಷವಾಗಿದೆ. ಟ್ರೋಫಿಗೆ ಅಭಿಮಾನಿಗಳ ಕೊಟ್ಟ ಬೆಂಬಲ ಮುಖ್ಯ. ಹೀಗಾಗಿ ಈ ಸಂಭ್ರಮಕ್ಕೆ ಅವರು ಅರ್ಹರು ಎಂದು ಹೇಳಿದ್ದಾರೆ.

ಇದನ್ನೂ ಓದಿ:RCB ಫೈನಲ್​ನಲ್ಲಿ ಗೆದ್ದರೆ ಎಷ್ಟು ಕೋಟಿ ದುಡ್ಡು ಸಿಗುತ್ತೆ..? ರನ್ನರ್​ ಅಪ್​ಗೂ ಭಾರೀ ಹಣ!

publive-image

ಕ್ವಾಲಿಫೈಯರ್-1ರಲ್ಲಿ ಗೆದ್ದ ಮೇಲೆ ಫೈನಲ್​ನಲ್ಲಿ 190 ರನ್ ಗಳಿಸಿದರೆ ಅತ್ಯುತ್ತಮ ರನ್​ಗಳು ಎಂದು ನಾವು ಮೊದಲೇ ಭಾವಿಸಿದ್ದೇವು. ಅದರಂತೆ ಪಂದ್ಯದಲ್ಲಿ ಬೌಲಿಂಗ್ ಪ್ರದರ್ಶನ ಅದ್ಭುತವಾಗಿ ಮೂಡಿ ಬಂತು. ಕೃನಾಲ್ ಪಾಂಡ್ಯ ವಿಕೆಟ್​ ಟೇಕರ್​ ಆಟಗಾರ. ಯಾವಾಗ ನಮಗೆ ಒತ್ತಡ ಹೆಚ್ಚಾಯಿತೋ ಅವಾಗ ಕೃನಾಲ್ ಪಾಂಡ್ಯ ಕೈಗೆ ಬಾಲ್ ನೀಡಿದೆ. ಇದರ ಜೊತೆ ಸುಯಶ್​ ಶರ್ಮಾ ಈ ಸೀಸನ್​ನಲ್ಲಿ ಒಳ್ಳೆಯ ಬೌಲಿಂಗ್ ಮಾಡಿದರು ಎಂದು ಹೇಳಿದರು.

ಭುವಿ, ಯಶ್​, ಹ್ಯಾಜಲ್ವುಡ್​ ಹಾಗೂ ರೊಮೊರಿಯೋ ಶೆಫರ್ಡ್​ ಎಲ್ಲರೂ ಎದುರಾಳಿ ಮೇಲೆ ಪರಾಕ್ರಮ ತೋರಿಸಿದರು. ಈ ಎಲ್ಲರೂ ಇರುವ ತಂಡದ ನಾಯಕತ್ವ ವಹಿಸಿರುವುದು ನನಗೆ ಒಂದು ಉತ್ತಮ ಅವಕಾಶ. ಇಲ್ಲಿ ನಾನು ಸಾಕಷ್ಟು ಕಲಿತುಕೊಂಡೆ. ತಂಡಕ್ಕೆ ಬೆಂಬಲ ಕೊಟ್ಟ ಪ್ರತಿಯೊಬ್ಬರೂ ಆಡಳಿತ ಮಂಡಳಿ, ಸಹಾಯಕ ಸಿಬ್ಬಂದಿ, ಆಟಗಾರರು ಹಾಗೂ ಪ್ರತಿ ಅಭಿಮಾನಿಗೂ ಧನ್ಯವಾದಗಳು. ಈಗ ಮತ್ತೆ ಅಭಿಮಾನಿಗಳಿಗೆ ನಾನು ಒಂದೇ ಒಂದು ಮಾತು ಹೇಳುತ್ತೇನೆ- ಈ ಸಲಾ ಕಪ್ ನಮ್ದು ಅಂತ ರಜತ್ ಅವರು ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment