/newsfirstlive-kannada/media/post_attachments/wp-content/uploads/2025/05/RAJATH_JITESH.jpg)
ಪ್ಲೇ ಆಫ್ಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ, ಕೆಲ ಸಮಸ್ಯೆಗಳು ಶುರುವಾಗಿವೆ. ಬೌಲಿಂಗ್ನಲ್ಲಿ ಆರ್ಸಿಬಿ ಅತ್ಯುತ್ತಮ ಅಟ್ಯಾಕ್ ಹೊಂದಿದೆ. ಆದ್ರೆ, ಬ್ಯಾಟಿಂಗ್ನಲ್ಲಿ ಬೆಂಗಳೂರು ತಂಡಕ್ಕೆ ಇನ್ಕನ್ಸಿಸ್ಟೆನ್ಸಿ ಕಾಡ್ತಿದೆ. ಟೂರ್ನಿಯುದ್ದಕ್ಕೂ ರನ್ಗಳಿಸುತ್ತಿರುವ ಕಿಂಗ್ ಕೊಹ್ಲಿ ಮೇಲೆ, ಆರ್ಸಿಬಿ ಹೆಚ್ಚು ಡಿಪೆಂಡ್ ಆಗಿದೆ. ತಂಡದಲ್ಲಿ ಸೂಪರ್ಸ್ಟಾರ್ ಬ್ಯಾಟರ್ಸ್ ಇದ್ದರೂ, ಇಲ್ಲದಂತಾಗಿದೆ.
ಲೀಗ್ ಸ್ಟೇಜ್ನಲ್ಲಿ 12 ಪಂದ್ಯಗಳನ್ನ ಯಶಸ್ವಿಯಾಗಿ ಮುಗಿಸಿರುವ ಆರ್ಸಿಬಿಗೆ, ಉಳಿದೆರೆಡು ಪಂದ್ಯಗಳು ಅತ್ಯಂತ ಮಹತ್ವದಾಗಿದೆ. ಈ 2 ಪಂದ್ಯಗಳನ್ನ ಗೆದ್ರೆ, ಆರ್ಸಿಬಿ ಕಪ್ ಗೆದ್ದಂತೆ. ಹಾಗಾಗಿ ಬೆಂಗಳೂರು ತಂಡ, ಹೈದ್ರಾಬಾದ್ ಮತ್ತು ಲಕ್ನೋ ತಂಡಗಳ ವಿರುದ್ಧ ಗೆಲ್ಲಲೇಬೇಕು ಅಂತ ಹೆಚ್ಚು ತಲೆ ಕೆಡಿಸಿಕೊಂಡಿದೆ. ಆದ್ರೆ ಆರ್ಸಿಬಿ ಕ್ಯಾಂಪ್ನಲ್ಲಿರುವ ಸಮಸ್ಯೆಗಳು, ತಂಡದ ಗೆಲುವಿಗೆ ಅಡ್ಡಿಯಾಗುತ್ತಿದೆ. ಎಸ್ಆರ್ಹೆಚ್ ಪಂದ್ಯಕ್ಕೂ ಮುನ್ನ ಈ ಪ್ರಾಬ್ಲಂ ಸಾಲ್ವ್ ಆದ್ರೆ, ಬೆಂಗಳೂರು ತಂಡವನ್ನ ಹಿಡಿರೋರೇ ಇಲ್ಲ.
ವಿರಾಟ್ ಕೊಹ್ಲಿ- 11 ಪಂದ್ಯ- 505 ರನ್ಸ್
ವಿರಾಟ್ ಕೊಹ್ಲಿ, ಆರ್ಸಿಬಿಯ ಬ್ಯಾಟಿಂಗ್ ಸೂಪರ್ಸ್ಟಾರ್. ಈ ಸೀಸನ್ನಲ್ಲಿ ಕೊಹ್ಲಿ ಕನ್ಸಿಸ್ಟೆಂಟ್ ಬ್ಯಾಟಿಂಗ್ ಜೊತೆಗೆ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡುತ್ತಾ ಬಂದಿದ್ದಾರೆ. ಈಗಾಗಲೇ ಆಡಿರೋ 11 ಪಂದ್ಯಗಳಲ್ಲಿ 500ಕ್ಕಿಂತ ಹೆಚ್ಚು ರನ್ಗಳಿಸಿರುವ ಕೊಹ್ಲಿ ಮೇಲೆ, ಆರ್ಸಿಬಿ ಹೆಚ್ಚು ಡಿಪೆಂಡ್ ಆಡಗಿದೆ. ಇದೇ ನೋಡಿ ಆರ್ಸಿಬಿಗೆ, ಬಿಗ್ ಸೆಟ್ಬ್ಯಾಕ್ ಆಗಿರೋದು. ಕೊಹ್ಲಿ ಹೊರತುಪಡಿಸಿದ್ರೆ ಉಳಿದ್ಯಾವ ಬ್ಯಾಟರ್ಸ್, ಈ ಟೂರ್ನಿಯಲ್ಲಿ ಕನ್ಸಿಸ್ಟೆನ್ಸಿ ತೋರಲಿಲ್ಲ. ಇದೇ ಆರ್ಸಿಬಿ ಮ್ಯಾನೇಜ್ಮೆಂಟ್ಗೆ ದೊಡ್ಡ ತಲೆನೋವಾಗಿರೋದು.
ರಜತ್ ಪಟಿದಾರ್- 11 ಪಂದ್ಯ- 239 ರನ್ಸ್
ಕ್ಯಾಪ್ಟನ್ ರಜತ್ ಪಟಿದಾರ್, ಆರಂಭದಲ್ಲಿ ಅಗ್ರೆಸಿವ್ ಬ್ಯಾಟಿಂಗ್ ನಡೆಸಿದ್ರು. ತಂಡಕ್ಕೆ ವೇಗವಾಗಿ ರನ್ ಕಾಂಟ್ರಿಬ್ಯೂಟ್ ಕೂಡ ಮಾಡಿದರು. ಆದ್ರೆ ಇದಕ್ಕಿದಂತೆ ಪಟಿದಾರ್ ಬ್ಯಾಟ್, ಸೈಲೆಂಟ್ ಆಗಿಬಿಡ್ತು. ಆರ್ಸಿಬಿ ನಾಯಕ, ರನ್ಗಳಿಸೋಕೂ ಪರದಾಡಿದರು. ಒಂದೆರೆಡು ಪಂದ್ಯಗಳಲ್ಲಿ ಬಿಟ್ರೆ, ಪಟಿದಾರ್ ಕಾಣಿಕೆ ಏನೇನೂ ಇಲ್ಲ. ಸದ್ಯ ಟಾಪ್ ಆರ್ಡರ್ನಲ್ಲಿ ಪಡಿಕ್ಕಲ್ ಇಲ್ಲ. ಹಾಗಾಗಿ ಮುಂದಿನ ಪಂದ್ಯಗಳಲ್ಲಿ ಪಟಿದಾರ್, ತಂಡಕ್ಕೆ ರನ್ ಕಾಣಿಕೆ ನೀಡಲೇಬೇಕು. ಇಲ್ದಿದ್ರೆ ಆರ್ಸಿಬಿಗೆ ಸಂಕಷ್ಟ ಎದುರಾಗಬಹುದು.
ಟಿಮ್ ಡೇವಿಡ್- 11 ಪಂದ್ಯ- 186 ರನ್ಸ್
ಬೆಂಗಳೂರು ತಂಡದ ಆಪದ್ಬಾಂಧವ ಟಿಮ್ ಡೇವಿಡ್.! ಟಾಪ್ ಮತ್ತು ಮಿಡಲ್ ಆರ್ಡರ್ ಕೈಕೊಟ್ಟಾಗಲೆಲ್ಲ, ಟಿಮ್ ಡೇವಿಡ್ ತಂಡದ ಕೈಹಿಡಿಯುತ್ತಾರೆ. ಮ್ಯಾಚ್ ಫಿನಿಷರ್ ಮತ್ತು ಗೇಮ್ ಚೇಂಜರ್ ಆಗಿ ಟಿಮ್, ತಂಡಕ್ಕೆ ನೆರವಾಗಿದ್ದಾರೆ. ಆಡಿರೋ 11 ಪಂದ್ಯಗಳಲ್ಲಿ ಆಸಿಸ್ ಬಿಗ್ಹಿಟ್ಟರ್ 186 ರನ್ಗಳಿಸಿದ್ದಾರೆ. ಹೆಚ್ಚು ಕಡಿಮೆ 200ರ ಬ್ಯಾಟಿಂಗ್ ಸ್ಟ್ರೈಕ್ರೇಟ್ನಲ್ಲಿ ಟಿಮ್ ಡೇವಿಡ್ ಬ್ಯಾಟ್ ಬೀಸಿದ್ದಾರೆ.
'ಏಕ್ ದಿನ್ ಕಾ ಸುಲ್ತಾನ್' ಆದ ಆರ್ಸಿಬಿಯ ಕೆಲ ಬ್ಯಾಟರ್ಸ್..!
ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜಿತೇಶ್ ಶರ್ಮಾ, ಆರ್ಸಿಬಿಯ ಭರವಸೆಯ ಬ್ಯಾಟ್ಸ್ಮನ್. ಆದ್ರೆ ಜಿತೇಶ್, ಯಾವಾಗ ಆಡ್ತಾರೋ ಯಾವಾಗ ಆಡಲ್ವೋ ಗೊತ್ತಿಲ್ಲ. ಸಿಕ್ಕ ಅವಕಾಶಗಳನ್ನ ಜಿತೇಶ್ ಕೈಚೆಲ್ಲುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ 19 ಎಸೆತಗಳಲ್ಲಿ ಅಜೇಯ 40 ರನ್ಗಳಿಸಿದ್ದು ಬಿಟ್ರೆ, ಜಿತೇಶ್ ಇನ್ಯಾವ ಇನ್ನಿಂಗ್ಸ್ ಕೂಡ ಆಡಲಿಲ್ಲ. ಉಳಿದಂತೆ ಜೇಕಬ್ ಬೆಥಲ್, ಲಿವಿಂಗ್ಸ್ಟನ್ ಎಲ್ಲರೂ ತಲಾ ಒಂದೊಂದು ಮ್ಯಾಚ್ನಲ್ಲಿ ಮಿಂಚಿ ಮರೆಯಾಗಿದ್ದಾರೆ. ರೊಮಾರಿಯೋ ಶೆಫರ್ಡ್ ಹೊಸ ಭರವಸೆಯಾಗಿದ್ದಾರೆ.
ಇದನ್ನೂ ಓದಿ:RCBಗೆ ಸುವರ್ಣಾವಕಾಶ; ಟಾಪ್ ಸ್ಥಾನ ಬೇಕಂದ್ರೆ ಈ ಪಂದ್ಯಗಳು ಇಂಪಾರ್ಟೆಂಟ್!
ಸಮಾಧಾನ ತಂದ ಬೌಲರ್ಗಳ ಪರ್ಫಾಮೆನ್ಸ್..!
ಬೌಲಿಂಗ್ನಲ್ಲಿ ಆರ್ಸಿಬಿ ಬ್ಯಾಲೆನ್ಸ್ಡ್ ಆಗಿದೆ. ಅನುಭವಿ ವೇಗಿ ಜೋಷ್ ಹೇಝಲ್ವುಡ್ ಇಲ್ಲದಿದ್ರೂ, ಆರ್ಸಿಬಿ ಬೌಲಿಂಗ್ ಅಟ್ಯಾಕ್ ಸ್ಟೇಬಲ್ ಆಗಿ ಕಾಣ್ತಿದೆ. ಎಡಗೈ ಸ್ಪಿನ್ನರ್ ಕೃನಾಲ್ ಪಾಂಡ್ಯ 14 ವಿಕೆಟ್, ಭುವನೇಶ್ವರ್ ಕುಮಾರ್ 12 ವಿಕೆಟ್ ಮತ್ತು ಯಶ್ ದಯಾಳ್ ಟೂರ್ನಿಯಲ್ಲಿ 10 ವಿಕೆಟ್ ಪಡೆದು, ಆರ್ಸಿಬಿಯ ಮ್ಯಾಚ್ ವಿನ್ನರ್ಸ್ ಆಗಿದ್ದಾರೆ. ಪವರ್ ಪ್ಲೇನಲ್ಲಿ ಆರ್ಸಿಬಿ ಬೌಲರ್ಸ್ ಎಫೆಕ್ಟೀವ್ ಆಗಿರೋದು, ಕ್ಯಾಪ್ಟನ್ ಮತ್ತು ಕೋಚ್ಗೆ ಸಮಾಧಾನ ತರಿಸಿದೆ.
ಈ ಸೀಸನ್ನಲ್ಲಿ ಆರ್ಸಿಬಿ ಒಳ್ಳೆ ತಂಡವನ್ನ ಆಯ್ಕೆ ಮಾಡಿದೆ. ಇದುವರೆಗೂ 16 ಆಟಗಾರರನ್ನ ಮೈದಾನಕ್ಕಿಳಿಸಿರುವ ಬೆಂಗಳೂರು ತಂಡ, ಬ್ಯಾಟಿಂಗ್ನಲ್ಲಿ ಮಾತ್ರ ಸ್ವಲ್ಪ ಡಲ್ ಆಗಿದೆ. ಉಳಿದಂತೆ ಬೆಂಗಳೂರು ತಂಡ ಎಲ್ಲಾ ಬಾಕ್ಸ್ಗಳನ್ನ ಟಿಕ್ ಮಾಡಿ, ಬಲಿಷ್ಠವಾಗಿ ಕಾಣುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ