/newsfirstlive-kannada/media/post_attachments/wp-content/uploads/2025/04/RCB_RAJAT.jpg)
ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ನಾಯಕ ರಜತ್ ಪಾಟಿದಾರ್ ಕೂಡ ಕೈಕೊಟ್ಟಿರುವುದು ಆರ್​ಸಿಬಿ ಫ್ಯಾನ್ಸ್​ ಬೇಸರಕ್ಕೆ ಕಾರಣವಾಗಿದೆ. ತಂಡದ ಸ್ಥಿತಿ ನೋಡಿಕೊಂಡು ಕ್ಯಾಪ್ಟನ್​ ಬ್ಯಾಟಿಂಗ್ ಮಾಡುತ್ತಾರೆ ಎಂದರೆ ಇಶಾಂತ್ ಶರ್ಮಾ ಬೌಲಿಂಗ್​ನಲ್ಲಿ ಎಲ್​ಬಿಗೆ ಔಟ್ ಆಗಿರುವುದು ತಂಡಕ್ಕೆ ತೀವ್ರ ಸಂಕಷ್ಟವಾಗಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರ್​ಸಿಬಿ ತಂಡದ ಬ್ಯಾಟ್ಸ್​ಮನ್​ಗಳ ವಿಕೆಟ್​ ಬ್ಯಾಕ್​ ಟು ಬ್ಯಾಕ್ ಉದುರುತ್ತಿವೆ. ತಂಡಕ್ಕೆ ಆಶ್ರಯವಾಗಿ ಬ್ಯಾಟಿಂಗ್ ಮಾಡುತ್ತಾರೆ ಎನ್ನಲಾಗಿದ್ದ ನಾಯಕ ರಜತ್ ಪಾಟಿದಾರ್ ಕೂಡ ಬೇಗನೇ ವಿಕೆಟ್ ಒಪ್ಪಿಸಿದ್ದಾರೆ. ಗುಜರಾತ್​ ಬೌಲರ್​ ಇಶಾಂತ್ ಶರ್ಮಾ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದಿದ್ದಾರೆ.
ಇದನ್ನೂ ಓದಿ: ತವರಲ್ಲಿ RCBಗೆ ಭಾರೀ ಅವಮಾನ.. ಸ್ಫೋಟಕ ಬ್ಯಾಟರ್ ಸಾಲ್ಟ್​ ಕ್ಲೀನ್ ಬೋಲ್ಡ್​
ವಿರಾಟ್​ ಕೊಹ್ಲಿ, ಪಡಿಕ್ಕಲ್ ಹಾಗೂ ಫಿಲ್ ಸಾಲ್ಟ್ ವಿಕೆಟ್ ಹೋದ ಮೇಲೆ ತಂಡದ ಸ್ಥಿತಿ ನೋಡಿಕೊಂಡು ರಜತ್ ಬ್ಯಾಟ್ ಬೀಸುತ್ತಾರೆ ಎಂದು ಊಹಿಸಲಾಗಿತ್ತು. ಆದರೆ 12 ಎಸೆತಗಳಲ್ಲಿ 2 ಬೌಂಡರಿಯಿಂದ 12 ರನ್​ ಗಳಿಸಿ ಆಡುವಾಗ ಗುಜರಾತ್​ ಬೌಲರ್​ ಇಶಾಂತ್ ಶರ್ಮಾ ಎಲ್​ಬಿ ಬಲೆಗೆ ಕೆಡವಿದ್ದಾರೆ. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ರಜತ್ ಪಾಟಿದಾರ್ ಗುಜರಾತ್ ವಿರುದ್ಧ ಬೇಗನೇ ವಿಕೆಟ್ ಒಪ್ಪಿಸಿದ್ದಾರೆ.
ವಿರಾಟ್​ ಕೊಹ್ಲಿ ಕೇವಲ 7 ರನ್, ದೇವದತ್​ ಪಡಿಕ್ಕಲ್ 4, ಸ್ಫೋಟಕ ಬ್ಯಾಟ್ಸ್​ಮನ್ ಸಾಲ್ಟ್​ 14, ಜಿತೇಶ್ ಶರ್ಮಾ 33 ರನ್​ಗಳಿಗೆ ಔಟ್ ಆಗಿದ್ದಾರೆ. ಗುಜರಾತ್ ಪರ ಮೊಹಮ್ಮದ್ ಸಿರಾಜ್ 2 ವಿಕೆಟ್​ ಪಡೆದು ಸಂಭ್ರಮಿಸಿದರು. ಸದ್ಯ ಆರ್​ಸಿಬಿ 13.3 ಓವರ್​ನಲ್ಲಿ 5 ವಿಕೆಟ್​ಗೆ 97 ರನ್​ಗಳಿಂದ ಬ್ಯಾಟಿಂಗ್ ಮಾಡುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ