/newsfirstlive-kannada/media/post_attachments/wp-content/uploads/2025/06/Rajat_Patidar.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು. IPLನ ಮೋಸ್ಟ್ ಫ್ಯಾನ್ ಫಾಲೋಯಿಂಗ್ ಟೀಮ್. ಇಂಥ ಟೀಮ್ಗೆ ರಜತ್ ಪಟಿದಾರ್ ನಾಯಕನಾಗೋದು ಇರಲಿ, ತಂಡದಲ್ಲಿ ಇರ್ತಾನೋ ಇಲ್ವೋ ಅನ್ನೋದು ಸಹ ಗೊತ್ತಿರಲಿಲ್ಲ. ಆರ್ಸಿಬಿಯ ನಾಯಕನಾಗಿ 18 ವರ್ಷಗಳ ಕನಸು ನನಸಾಗಿಸಿದ್ದಾರೆ. ಅದರ ಹಿಂದೆ ತ್ಯಾಗ, ಪರಿಶ್ರಮದ ಕಥೆಯಿದೆ.
18 ವರ್ಷಗಳಿಂದ ಆರ್‌ಸಿಬಿ ಕಂಡಿದ್ದು ಜಸ್ಟ್ ದಿಗ್ಗಜ ಆಟಗಾರನ್ನು ಮಾತ್ರವಲ್ಲ. ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ವಿರಾಟ್ ಕೊಹ್ಲಿರಂಥ ದಿಗ್ಗಜ ನಾಯಕರನ್ನು ಕಂಡಿತ್ತು. 8ನೇ ನಾಯಕನಾಗಿ ಆರ್‌ಸಿಬಿ ಪಟ್ಟಾಭಿಷೇಕ ವಹಿಸಿಕೊಂಡ ರಜತ್ ಪಟಿದಾರ್, ನಿಜಕ್ಕೂ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ತಂಡವನ್ನು ಯಶಸ್ವಿಯಾಗಿ ಮುನ್ನಡೆಸ್ತಾರಾ ಎಂಬ ಅನುಮಾನ ಕಾಡಿತ್ತು. ಕೊಹ್ಲಿಗೆ ನಾಯಕತ್ವದ ಪಟ್ಟ ನೀಡಬೇಕಿತ್ತು ಎಂಬ ಕೂಗು ಇತ್ತು. ಆದ್ರೀಗ ಪಟಿದಾರ್ಗೆ ಪಟ್ಟ ಕಟ್ಟಿರುವ ನಿರ್ಧಾರಕ್ಕೆ ಫಲ ಸಿಕ್ಕಿದೆ. ನಾಯಕನಾಗಿ ಮೊದಲ ಸೀಸನ್ನಲ್ಲೇ ಟ್ರೋಫಿ ಗೆಲ್ಲಿಸಿಕೊಟ್ಟ ಪಟಿದಾರ್, ಜರ್ನಿಯೇ ಆಸಕ್ತಿದಾಯಕ.
ಇದನ್ನೂ ಓದಿ: ರಸ್ತೆಯಲ್ಲಿ ಮಲಗಿ ರಾತ್ರಿ ಕಳೆದ ಸ್ಪೀಕರ್ ಯು.ಟಿ ಖಾದರ್; ಹಜ್ ಪ್ರವಾಸದಲ್ಲಿ ವಿಶೇಷ ಪ್ರಾರ್ಥನೆ
2021ರಲ್ಲಿ RCBಗೆ ಎಂಟ್ರಿ..
ರಜತ್ ಪಟೀದಾರ್ ಐಪಿಎಲ್ ಜರ್ನಿ ಆರಂಭವಾಗಿದ್ದೇ ಆರ್ಸಿಬಿಯಲ್ಲಿ. 2021ರ ಮೆಗಾ ಆಕ್ಷನ್ನಲ್ಲಿ ಆರ್‌ಸಿಬಿ ಸೇರಿದ್ದ ಪಟಿದಾರ್, ಆ ಸೀಸನ್ನಲ್ಲಿ ಸಿಕ್ಕ 4 ಪಂದ್ಯಗಳಲ್ಲಿ ಫ್ಲಾಪ್ ಶೋ ನೀಡಿದ್ರು. ಪರಿಣಾಮ ತಂಡದಿಂದ ರಿಲೀಸ್ ಮಾಡ್ತು. ಅದೃಷ್ಟ ಹೇಗಿತ್ತು ಅಂದ್ರೆ ಅನ್ಸೋಲ್ಡ್ ಆದ ರಜತ್ಗೆ ಮತ್ತೊಂದು ಚಾನ್ಸ್ ಸಿಗುವಂತಾಯ್ತು.
2022ರ ಮೆಗಾ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದ ಪಟಿದಾರ್, ಐಪಿಎಲ್ಗೆ ಮರು ಎಂಟ್ರಿ ನೀಡುವ ನಿರೀಕ್ಷೆಯೇ ಇರಲಿಲ್ಲ. ವಿಧಿ ಆಡಿದ ಆಟವೇ ಬೇರೆಯಾಗಿತ್ತು. ಲವ್ನೀತ್ ಸಿಸೋಡಿಯಾ ಇಂಜುರಿಯಿಂದ ಬದಲಿ ಆಟಗಾರನಾಗಿ ಆರ್ಸಿಬಿಗೆ ರೀ ಎಂಟ್ರಿ ನೀಡಿದ್ರು. ಅದ್ಭುತ ಪ್ರದರ್ಶನದಿಂದ ಆರ್‌ಸಿಬಿ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಂಡ ರಜತ್, ಅಂದಿನಿಂದ ಹಿಂತಿರುಗಿ ನೋಡಿದಿಲ್ಲ.
ವಿವಾಹವೇ ಪೋಸ್ಟ್ಪೋನ್
ಅನ್ಸೋಲ್ಡ್ ಆಗಿದ್ದ ರಜತ್ 2022ರ ಮೇ9 ರಂದು ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಆರ್‌ಸಿಬಿ ಮ್ಯಾನೇಜ್ಮೆಂಟ್ನ ಒಂದು ಕರೆಯಿಂದ ಮದುವೆಯನ್ನೇ ಪೋಸ್ಟ್ ಫೋನ್ ಮಾಡಿದ ರಜತ್, ಸಿಕ್ಕ ಗೋಲ್ಡನ್ ಚಾನ್ಸ್ ಎರಡೂ ಕೈಯಿಂದ ಬಾಚಿಕೊಂಡ್ರು. ಆ ಸೀಸನ್ನಲ್ಲಿ ಚಾನ್ಸ್ ಗಿಟ್ಟಿಸಿಕೊಂಡ ರಜತ್, ಲಕ್ನೋ ಎದುರಿನ ಎಲಿಮಿನೇಟರ್ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಇದರಿಂದ ಆರ್‌ಸಿಬಿ ಮ್ಯಾನೇಜ್ಮೆಂಟ್ ನಂಬಿಕೆ ಉಳಿಸಿಕೊಂಡಿದ್ದ ಪಟಿದಾರ್, 2023ರಲ್ಲಿ ದುರಾದೃಷ್ಟವಶಾತ್ ಇಂಜುರಿಯಿಂದಾಗಿ ಟೂರ್ನಿಯಿಂದಲೇ ಹೊರಬಿದ್ದರು ಬ್ಯಾಕ್ ಮಾಡಿತ್ತು.
ಇದನ್ನೂ ಓದಿ: NEET-PG 2025 ಪರೀಕ್ಷೆಗೆ ಹೊಸ ದಿನಾಂಕ ನಿಗದಿ; ಮಹತ್ವದ ಬದಲಾವಣೆಗಳು ಪ್ರಕಟ
2024ರಲ್ಲಿ ಕಮ್ಬ್ಯಾಕ್..
2024ರ ಐಪಿಎಲ್ಗೆ ಕಮ್ಬ್ಯಾಕ್ ಮಾಡಿದ್ದ ರಜತ್ ಪಾಟಿದಾರ್, ಆ ಸೀಸನ್ನಲ್ಲಿ ಸಾಲಿಡ್ ಆಟವಾಡಿದ್ದರು. ಮಿಡಲ್ ಆರ್ಡರ್ನಲ್ಲಿ ಬೊಂಬಾಟ್ ಬ್ಯಾಟಿಂಗ್ ಮಾಡಿದ್ದ ಪಟಿದಾರ್, 13 ಇನ್ನಿಂಗ್ಸ್ಗಳಲ್ಲಿ 177.13ರ ಸ್ಟ್ರೈಕ್ರೇಟ್ನಲ್ಲಿ 395 ರನ್ ಸಿಡಿಸಿದ್ರು. ಇದರ ಪ್ರತಿಫಲವಾಗಿ 11 ಕೋಟಿ ನೀಡಿ ರಿಟೈನ್ ಮಾಡಿಕೊಂಡಿದ್ದ ಆರ್‌ಸಿಬಿ, ನಾಯಕತ್ವದ ಪಟ್ಟವನ್ನು ಕಟ್ತು.
ನಾಯಕತ್ವದ ಜವಾಬ್ದಾರಿಯನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದ ರಜತ್ ಪಟಿದರ್, ಟೂರ್ನಿಯುದಕ್ಕೂ ಅದ್ಭುತ ಆಟವೂ ಆಡಿದರು. ಕೂಲ್ ಅಂಡ್ ಕಾಮ್ ನಾಯಕತ್ವದಿಂದ ಎಲ್ಲರ ಗಮನ ಸೆಳೆದಿದ ರಜತ್ ಪಟಿದಾರ್, 15 ಪಂದ್ಯಗಳಿಂದ 312 ರನ್ ಮಾತ್ರವೇ ಗಳಿಸಲಿಲ್ಲ. ಆರ್ಸಿಬಿಯ ಯಶಸ್ವಿ ನಾಯಕನಾಗಿ ಹೊರಹೊಮ್ಮಿದರು. ಕೋಟ್ಯಾಂತರ ಅಭಿಮಾನಿಗಳ ಬೇಡಿಕೆ ಈಡೇರಿಸಿದರು. 18 ವರ್ಷಗಳಿಂದ ಕಪ್ ಗೆಲುವಿಗೆ ಕಾದಿದ್ದ ವಿರಾಟ್ ಕೊಹ್ಲಿಗೆ ಟ್ರೋಫಿಯ ಗಿಫ್ಟ್ ನೀಡಿದರು. ಆರ್‌ಸಿಬಿ ಅಭಿಮಾನಿಗಳ ಪಾಲಿನ ರಣಧೀರನಾಗಿ ಕಾಣ್ತಿರುವುದು ಸತ್ಯ.
ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್.. RCB ಮಾರ್ಕೆಟಿಂಗ್ ಮುಖ್ಯಸ್ಥ ಸೇರಿ ಮೂವರು ಅರೆಸ್ಟ್
ಚೊಚ್ಚಲ ಸೀಸನ್ನಲ್ಲೇ ನಾಯಕನಾಗಿ ಟ್ರೋಫಿ
ಐಪಿಎಲ್ನಂತ ಬಿಗ್ ಗೇಮ್ನಲ್ಲಿ ಟ್ರೋಫಿ ಗೆಲ್ಲುವುದು ನಿಜಕ್ಕೂ ಸುಲಭವಲ್ಲ. ದಿಗ್ಗಜರು ಎಂದು ಕರೆಸಿಕೊಂಡವರೇ ವರ್ಷನುಗಟ್ಟಲೇ ತಂಡವನ್ನ ಮುನ್ನಡೆಸಿ ಟ್ರೋಫಿ ಗೆದ್ದಿದ್ದಿಲ್ಲ. ನಾಯಕನಾಗಿ ತಂಡವನ್ನು ಮುನ್ನಡೆಸಿದ ಮೊದಲ ಸೀಸನ್ನಲ್ಲೇ ರಜತ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಶೇನ್ ವಾರ್ನ್, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಬಳಿಕ ಮಾಡಿದ 4ನೇ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ರಜತ್ ಪಟಿದಾರ್, ಈಗ ಆರ್‌ಸಿಬಿ ಅಭಿಮಾನಿಗಳಿಗೆ ಹೊಸ ಭರವಸೆ ಹುಟ್ಟಿಹಾಕಿದ್ದು, ಮುಂದಿನ ವರ್ಷಗಳಲ್ಲಿ ಇನ್ನಷ್ಟು ಕಪ್ ಗೆಲ್ಲಿಸಲಿ ಎಂಬುವುದೇ ಎಲ್ಲರ ಆಶಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ