/newsfirstlive-kannada/media/post_attachments/wp-content/uploads/2025/04/VIRAT_KOHLI_BAT.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್ ಅವರು ಚಿನ್ನಸ್ವಾಮಿ ಮೈದಾನದಲ್ಲಿ ಮತ್ತೆ ಟಾಸ್ ಸೋತಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಅವರು ಟಾಸ್ ಗೆದ್ದು ಆರ್ಸಿಬಿಯನ್ನ ಮೊದಲ ಬ್ಯಾಟಿಂಗ್ಗೆ ಆಹ್ವಾನ ಮಾಡಿದ್ದಾರೆ. ಮಳೆ ಬಂದ ಕಾರಣ 20 ಓವರ್ ಬದಲಿಗೆ 14 ಓವರ್ಗಳ ಪಂದ್ಯ ಇದಾಗಿದೆ.
ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಫೀಲ್ಡಿಂಗ್ ತೆಗೆದುಕೊಂಡಿದ್ದಾರೆ. ಆರ್ಸಿಬಿ ತಂಡವನ್ನು ಮೊದಲ ಬ್ಯಾಟಿಂಗ್ಗೆ ಆಹ್ವಾನ ಮಾಡಿದ್ದಾರೆ. ಈಗಾಗಲೇ ಎರಡು ಪಂದ್ಯಗಳಲ್ಲಿ ಟಾಸ್ ಗೆದ್ದವರೇ ಈ ಪಿಚ್ನಲ್ಲಿ ಬಾಸ್ ಆಗಿದ್ದಾರೆ. ಹೀಗಾಗಿ ಪಂಜಾಬ್ ತಂಡದ ನಾಯಕನ ನಿರ್ಧಾರ ಮತ್ತೆ ಸರಿಯಾಗಿದೆ ಎಂದು ಊಹೆ ಮಾಡಬಹುದು.
ಪಂದ್ಯದಲ್ಲಿ ಆರ್ಸಿಬಿ ಪರ ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ ಓಪನರ್ಗಳಾಗಿ ಕ್ರೀಸ್ನಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. 3ನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಕಣಕ್ಕೆ ಇಳಿಯಲಿದ್ದಾರೆ. ಈ ಪಂದ್ಯದಲ್ಲಿ ಪಡಿಕ್ಕಲ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟಿಂಗ್ ಮಾಡಲಿದ್ದಾರೆ. ಇವರ ಬದಲಿಗೆ ಸುಯಶ್ ಶರ್ಮಾ ಫೀಲ್ಡಿಂಗ್ ವೇಳೆ ಮೈದಾನದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ನಾಯಕ ರಜತ್ ಪಾಟಿದಾರ್ ಪಂದ್ಯದಲ್ಲಿ ನಿರ್ಣಾಯಕ ಬ್ಯಾಟಿಂಗ್ ಮಾಡಿ ತಂಡದ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ. ಜಿತೇಶ್ ಶರ್ಮಾ ಅವರು ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಆಗಿ ಕಣದಲ್ಲಿದ್ದಾರೆ. ತವರಿನಲ್ಲಿ ಸೋಲಗಳನ್ನ ಕಂಡಿರುವ ಆರ್ಸಿಬಿ ಈಗ ಪಂಜಾಬ್ ವಿರುದ್ಧ ಗೆಲುವಿನ ಟ್ರ್ಯಾಕ್ಗೆ ಬರಬೇಕಿದೆ.
ಇದನ್ನೂ ಓದಿ:RCB vs PBKS ನಡುವಿನ ಜಿದ್ದಾಜಿದ್ದಿ ಹೇಗಿದೆ.. ಹೆಚ್ಚು ಬಾರಿ ಮ್ಯಾಚ್ ಗೆದ್ದವರು ಯಾರು?
ಆರ್ಸಿಬಿಯಲ್ಲಿ ಲೈಮ್ ಲಿವಿಂಗ್ಸ್ಟನ್, ಕೃನಾಲ್ ಪಾಂಡ್ಯ ಆಲೌರೌಂಡರ್ ಆಗಿ ಬ್ಯಾಟಿಂಗ್, ಬೌಲಿಂಗ್ನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಭುವನೇಶ್ವರ್, ಯಶ್ ದಯಾಳ್ ಹಾಗೂ ಜೋಶ್ ಹ್ಯಾಜಲ್ವುಡ್ ಅವರು ತಂಡದ ಬೌಲಿಂಗ್ ಬಲವಾಗಿದ್ದಾರೆ. ಎದುರಾಳಿ ತಂಡ ಪಂಜಾಬ್ ಕೂಡ ಭಾರೀ ಬಲಿಷ್ಠವಾಗಿದ್ದು ಆರ್ಸಿಬಿಯಂತೆ ಎರಡು ಸೋಲುಗಳನ್ನು ನೋಡಿದೆ. ಓಪನರ್ ಬ್ಯಾಟಿಂಗ್ ಅಬ್ಬರ ಚೆನ್ನಾಗಿಯೇ ಇದೆ. 3ನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬರುವ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಅನ್ನು ಕಟ್ಟಿ ಹಾಕಬೇಕಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್- 11
ರಜತ್ ಪಾಟಿದಾರ್ (ನಾಯಕ), ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್, ಸುಯಶ್ ಶರ್ಮಾ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ