/newsfirstlive-kannada/media/post_attachments/wp-content/uploads/2025/04/VIRAT_KOHLI-2-2.jpg)
ಚೆನ್ನೈ ತಂಡದ ಕೂಲ್ ಕ್ಯಾಪ್ಟನ್ ಎಂ.ಎಸ್ ಧೋನಿ ವಿರುದ್ಧ ಆರ್ಸಿಬಿ ಕ್ಯಾಪ್ಟನ್ ರಜತ್ ಪಾಟಿದಾರ್ ಟಾಸ್ ಸೋತಿದ್ದು ಮೊದಲು ಬ್ಯಾಟಿಂಗ್ ಮಾಡಲಿದ್ದಾರೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್ ಧೋನಿ ಅವರು ಮೊದಲ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದ ಆರ್ಸಿಬಿ ಬ್ಯಾಟಿಂಗ್ಗೆ ಆಗಮಿಸಲಿದೆ. ಕಳೆದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಸೋತಿದ್ದ ಚೆನ್ನೈ ಸೇಡಿಗಾಗಿ ಎಲ್ಲ ಯೋಜನೆ ರೂಪಿಸಿದೆ.
ಪಂದ್ಯದಲ್ಲಿ ಆರ್ಸಿಬಿ ಪರ ಆರಂಭಿಕರಾಗಿ ಕಣಕ್ಕೆ ಇಳಿಯುತ್ತಿದ್ದ ಫಿಲಿಪ್ ಸಾಲ್ಟ್ ಅಲಭ್ಯರಾಗಿದ್ದಾರೆ. ಜ್ವರದಿಂದ ಬಳಲುತ್ತಿದ್ದ ಅವರು ಮೈದಾನಕ್ಕೆ ಇಳಿಯುವುದಿಲ್ಲ ಎಂದು ಮೊದಲೇ ಹೇಳಲಾಗಿತ್ತು. ಬೆಂಗಳೂರಿನ ತಂಡದಲ್ಲಿ ಮತ್ತೊಂದು ಮುಖ್ಯವಾದ ಬದಲಾವಣೆ ಮಾಡಲಾಗಿದೆ. ಪೇಸ್ ಬೌಲರ್ ಜೋಶ್ ಹ್ಯಾಜಲವುಡ್ ಬದಲಿಗೆ ಲುಂಗಿ ಎನ್‌ಗಿಡಿ ಕಣಕ್ಕೆ ಇಳಿಸಲಾಗಿದೆ. ಹೀಗಾಗಿ ತಂಡದಲ್ಲಿ ಪ್ರಮುಖವಾಗಿ ಎರಡು ಚೇಂಜ್ಗಳನ್ನು ಮಾಡಲಾಗಿದೆ.
ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಜೊತೆ ಯುವ ಆಟಗಾರ ಜಾಕೋಬ್ ಬೆಥೆಲ್ ಆರಂಭಿಕರಾಗಿ ಕ್ರೀಸ್ಗೆ ಆಗಮಿಸಲಿದ್ದಾರೆ. 3ನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಅಬ್ಬರ ಮುಂದುವರೆಯಲಿದೆ. ಎರಡು ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ವಿಫಲರಾಗಿರುವ ನಾಯಕ ರಜತ್ ಪಾಟಿದಾರ್ ಈ ಪಂದ್ಯದಲ್ಲಿ ಅಬ್ಬರಿಸುವ ನಿರೀಕ್ಷೆ ಇದೆ. ಎಂದಿನಂತೆ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಆಗಿ ಜಿತೇಶ್ ಶರ್ಮಾ ತಂಡದಲ್ಲಿ ಇದ್ದಾರೆ.
ಇದನ್ನೂ ಓದಿ:RCB ಓಪನರ್ ಫಿಲ್ ಸಾಲ್ಟ್ ಇವತ್ತೂ ಆಡಲ್ಲ.. ಏನಾಯ್ತು? ರಜತ್ ಪಾಟೀದಾರ್‌ಗೆ ಕೈ ಕೊಟ್ರಾ?
ಕೊನೆಯಲ್ಲಿ ಸ್ಫೋಟಕ ಬ್ಯಾಟ್ಸ್ಮನ್ ಟಿಮ್ ಡೇವಿಡ್ ಅವರ ಬ್ಯಾಟಿಂಗ್ ಹೆಚ್ಚು ರನ್ಗಳನ್ನು ತಂಡಕ್ಕೆ ತಂದುಕೊಡುತ್ತದೆ. ಆಲ್ರೌಂಡರ್ ಆಗಿ ಕೃನಾಲ್ ಪಾಂಡ್ಯ ಮತ್ತೊಮ್ಮೆ ಇತಿಹಾಸ ನಿರ್ಮಿಸುತ್ತಾರಾ ಎಂದು ಕಾದು ನೋಡಬೇಕಿದೆ. ಆರ್ಸಿಬಿ ತಂಡದ ಬೌಲಿಂಗ್ ಶಕ್ತಿಯಾಗಿ ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್ ಪಾತ್ರ ಇಂದು ಅತ್ಯಂತ ಮುಖ್ಯವಾಗುತ್ತದೆ. ಲುಂಗಿ ಎನ್‌ಗಿಡಿ ಬೌಲಿಂಗ್ ಪರಾಕ್ರಮ ಹೇಗಿದೆ ಎಂದು ತಿಳಿಯಲಿದೆ. ಚಿದಂಬರಂ ಪಿಚ್ನಲ್ಲಿ ಆರ್ಸಿಬಿ ವಿರುದ್ಧ ಸೋಲನ್ನು ಕಂಡಿದ್ದ ಚೆನ್ನೈ ಈಗ ಪ್ರತೀಕಾರ ತೀರಿಸಿಕೊಳ್ಳಲು ಎಲ್ಲ ರೀತಿಯಿಂದಲೂ ತಂತ್ರ ಹೆಣೆದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್- 11
ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಜಾಕೋಬ್ ಬೆಥೆಲ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಲುಂಗಿ ಎನ್‌ಗಿಡಿ, ಯಶ್ ದಯಾಳ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ