RCBಗೆ ಇಂದು ಡಬಲ್​ ಸಂಭ್ರಮ, ಏನೇನು ಗೊತ್ತಾ..? ಫೈನಲ್​ ಆಡಲು ಗುಜರಾತ್​ ತಲುಪಿದ ಟೀಮ್

author-image
Bheemappa
Updated On
RCBಗೆ ಇಂದು ಡಬಲ್​ ಸಂಭ್ರಮ, ಏನೇನು ಗೊತ್ತಾ..? ಫೈನಲ್​ ಆಡಲು ಗುಜರಾತ್​ ತಲುಪಿದ ಟೀಮ್
Advertisment
  • ನಮ್ಮೊಂದಿಗೆ ವಿಶೇಷ ದಿನ ಕಳೆಯಲಿದ್ದಾರೆ ಎಂದ ಫ್ರಾಂಚೈಸಿ
  • ಪಂಜಾಬ್​ಗೆ ಟಕ್ಕರ್ ಕೊಟ್ಟು ಫೈನಲ್ ಟಿಕೆಟ್ ಪಡೆದಿದ್ದ RCB
  • DK ತಂಡದ ಮೆಂಟರ್ ಆದ ಬೆನ್ನಲ್ಲೇ ಆರ್​ಸಿಬಿ ಫೈನಲ್​ಗೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವರ್ಷಗಳ ನಂತರ ಐಪಿಎಲ್​ನಲ್ಲಿ ಫೈನಲ್‌ಗೆ ತಲುಪಿದೆ. ಪಂಜಾಬ್ ಕಿಂಗ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಬೆಂಗಳೂರು ಟೀಮ್ ಐತಿಹಾಸಿಕ ಗೆಲುವು ದಾಖಲಿಸಿದೆ. ಫೈನಲ್ ಪಂದ್ಯದಲ್ಲಿ ಗೆದ್ದು ಟ್ರೋಫಿ ಎತ್ತಿ ಹಿಡಿಯುವ ನಿರೀಕ್ಷೆಯಲ್ಲಿರುವ ಆರ್​ಸಿಬಿಗೆ ಇಂದು ಡಬಲ್​ ಸಂಭ್ರಮ.

ಆರ್​ಸಿಬಿ ಆಟಗಾರರೆಲ್ಲ ಐಪಿಎಲ್​ ಸೀಸನ್​- 18 ಫೈನಲ್​ ಪಂದ್ಯ ಆಡಲು ಈಗಾಗಲೇ ಗುಜರಾತ್​ನ ಅಹಮದಾಬಾದ್​​ಗೆ ತೆರಳಿದ್ದಾರೆ. ಇಂದು ಮುಂಬೈ ಇಂಡಿಯನ್ಸ್​ ಹಾಗೂ ಪಂಜಾಬ್ ಕಿಂಗ್ಸ್​ ನಡುವಿನ ಕಾಳಗಲ್ಲಿ ಯಾರು ಗೆಲುವು ಸಾಧಿಸುತ್ತಾರೋ ಅವರು ಆರ್​ಸಿಬಿ ಜೊತೆ ಫೈನಲ್​ ಪಂದ್ಯ ಆಡಲಿದ್ದಾರೆ. ಇದು ಈಗಿರುವಾಗಲೇ ಆರ್​ಸಿಬಿ ಫ್ರಾಂಚೈಸಿಯು ಇಂದಿನ ಆ ಎರಡು ಸೆಲೆಬ್ರೆಷನ್​ ಕುರಿತು ತನ್ನ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ:ಕರುಣ್ ನಾಯರ್ ದ್ವಿಶತಕ, ಟೀಕೆಗಳಿಗೆ ಉತ್ತರ ಕೊಟ್ಟ ಕನ್ನಡಿಗ.. ಬೃಹತ್‌ ಮೊತ್ತ ಪೇರಿಸಿದ ಭಾರತ!

publive-image

ಆರ್​ಸಿಬಿ ಭರ್ಜರಿ ಬರ್ತ್​ಡೇ ಸೆಲೆಬ್ರೆಷನ್​ ಮೂಡ್​ನಲ್ಲಿದೆ. ಇವತ್ತು ಒಂದೇ ದಿನ ಆರ್​ಸಿಬಿ ಕ್ಯಾಪ್ಟನ್​ ರಜತ್ ಪಾಟಿದಾರ್ ಹಾಗೂ ತಂಡದ ಮೆಂಟರ್ ಆಗಿರುವ ದಿನೇಶ್ ಕಾರ್ತಿಕ್​ ಅವರ ಹುಟ್ಟುಹಬ್ಬವಾಗಿದೆ. ರಜತ್ ಅವರು 32ನೇ ವರ್ಷಕ್ಕೆ ಕಾಲಿಡುತ್ತಿದ್ರೆ ಮೆಂಟರ್ ದಿನೇಶ್ ಕಾರ್ತಿಕ್ ಅವರು 40ನೇ ವರ್ಷಕ್ಕೆ ವೆಲ್​ಕಮ್ ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್​ಸಿಬಿ ಇಬ್ಬರಿಗೂ ವಿಶ್ ಮಾಡಿದೆ.

ಈ ಬಾರಿ ತಂಡ ಫೈನಲ್ ತಲುಪಿರುವ ಖುಷಿಯಲ್ಲಿರುವ ಆರ್​ಸಿಬಿ ಫ್ರಾಂಚೈಸಿ ಇಬ್ಬರಿಗೂ ಬಿಗ್​ ಟ್ರೀಟ್​ ನೀಡಬಹುದು ಎಂದು ಹೇಳಲಾಗುತ್ತಿದೆ. ಏಕೆಂದರೆ ಕ್ಯಾಪ್ಟನ್ ಹಾಗೂ ಕೋಚ್ ಈ ಸ್ಪೆಷಲ್ ಡೇಯನ್ನು ನಮ್ಮೊಂದಿಗೆ ಕಳೆಯಲಿದ್ದಾರೆ ಎಂದು ಫ್ರಾಂಚೈಸಿ ಎಕ್ಸ್​ನಲ್ಲಿ ತಿಳಿಸಿದೆ. ಕಳೆದ ಬಾರಿ ತಂಡದಲ್ಲಿ ಆಡಿದ್ದ ದಿನೇಶ್ ಕಾರ್ತಿಕ್, ನಿವೃತ್ತಿ ಘೋಷಿಸಿ ಈ ಸಲ ಆರ್​ಸಿಬಿಯ ಮೆಂಟರ್ ಆಗಿದ್ದಾರೆ. ಅದರಂತೆ ಹಳೆಯ ಆಟಗಾರನಾದರೂ ಇದೆ ಮೊದಲ ಬಾರಿಗೆ ರಜತ್ ನಾಯಕತ್ವ ವಹಿಸಿಕೊಂಡಿದ್ದಾರೆ. ಇಬ್ಬರ ಜುಗಲ್​ಬಂದಿಯಲ್ಲಿ ಆರ್​ಸಿಬಿ ಗಮನಾರ್ಹವಾದ ಸಾಧನೆ ಮಾಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment