6,6,6,4,4,4,4; ಚೆನ್ನೈ ವಿರುದ್ಧ ಸ್ಫೋಟಕ ಅರ್ಧಶತಕ ಸಿಡಿಸಿದ ಕ್ಯಾಪ್ಟನ್​ ರಜತ್

author-image
Ganesh Nachikethu
Updated On
6 ಫೋರ್​​.. 6 ಭರ್ಜರಿ ಸಿಕ್ಸರ್​​.. ಬೆಂಗಳೂರಲ್ಲಿ RCB ಸ್ಟಾರ್​​ ರಜತ್​ ಪಾಟಿದಾರ್​ ಶೋ; ಬೆಚ್ಚಿಬಿದ್ದ ಮುಂಬೈ!
Advertisment
  • ರೋಚಕ ಪಂದ್ಯದಲ್ಲಿ ಕ್ಯಾಪ್ಟನ್​ ರಜತ್​ ಪಾಟಿದಾರ್​​ ಅರ್ಧಶತಕ
  • ಕೊನೆಯವರೆಗೂ ಕ್ರೀಸ್​ನಲ್ಲೇ ನಿಂತು ಆಡಿದ ರಜತ್ ಪಾಟಿದಾರ್​​​
  • ಮೊದಲ 30 ಬಾಲ್​ನಲ್ಲೇ 50 ರನ್​ ಸಿಡಿಸಿದ ಆರ್​​ಸಿಬಿ ಕ್ಯಾಪ್ಟನ್​​!

ಚೇಪಕ್​ ಇಂಟರ್​ ನ್ಯಾಷನಲ್​ ಕ್ರಿಕೆಟ್​​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ರೋಚಕ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಕ್ಯಾಪ್ಟನ್​ ರಜತ್​ ಪಾಟಿದಾರ್​​ ಅರ್ಧಶತಕ ಸಿಡಿಸಿದರು.

ಫಿಲ್​ ಸಾಲ್ಟ್​, ದೇವದತ್​ ಪಡಿಕ್ಕಲ್​ ವಿಕೆಟ್​ ಬಿದ್ದ ಬೆನ್ನಲ್ಲೇ ಕ್ರೀಸ್​ಗೆ ಬಂದ ರಜತ್​ ಪಾಟಿದಾರ್​ ಅಬ್ಬರಿಸಿದರು. ಕೊನೆಯವರೆಗೂ ಕ್ರೀಸ್​ನಲ್ಲೇ ನಿಂತು ಆಡಿದ ಪಾಟಿದಾರ್​​​ ಸ್ಫೋಟಕ ಅರ್ಧಶತಜ ಚಚ್ಚಿದ್ರು.

ತಾನು ಆಡಿದ ಮೊದಲ 30 ಬಾಲ್​ನಲ್ಲೇ 50 ರನ್​ ಸಿಡಿಸಿದರು. ಈ ಪೈಕಿ ಮೂರು ಭರ್ಜರಿ ಸಿಕ್ಸರ್​​, 4 ಫೋರ್​​ ಬಾರಿಸಿದ್ದರು. ಈ ಮೂಲಕ ಆರ್​​​ಸಿಬಿ ದೊಡ್ಡ ಮೊತ್ತ ಪೇರಿಸಲು ಸಹಾಯ ಮಾಡಿದರು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ 159ಕ್ಕೂ ಹೆಚ್ಚು ಇತ್ತು.

ಆರ್​​ಸಿಬಿ ಪರ ಓಪನಿಂಗ್​ ಮಾಡಿದ ಸ್ಟಾರ್ ಬ್ಯಾಟರ್​ ಫಿಲಿಪ್​ ಸಾಲ್ಟ್​​ ಅವರು ಅಬ್ಬರಿಸಿದರು. ಕ್ರೀಸ್​ನಲ್ಲಿ ಇರೋವರೆಗೂ ಎದುರಾಳಿಗಳನ್ನು ಕಾಡಿದರು. ತಾನು ಎದುರಿಸಿದ 16 ಬಾಲ್​ನಲ್ಲಿ 5 ಭರ್ಜರಿ ಫೋರ್​​, 1 ಸಿಕ್ಸರ್​ ಸಮೇತ 32 ರನ್​ ಚಚ್ಚಿದ್ರು.

ಇನ್ನೊಂದೆಡೆ ವಿರಾಟ್​ ಕೊಹ್ಲಿ ಕುಟ್ಟುತ್ತಲೇ ಬ್ಯಾಟಿಂಗ್​ ಮಾಡಿದ್ರು. ಸ್ಲೋ ಬ್ಯಾಟಿಂಗ್​ ಮಾಡಿದ ಕೊಹ್ಲಿ ಆರಂಭದಿಂದಲೂ ರನ್​ ಗಳಿಸಲು ಪರದಾಡಿದ್ರು. ತಾನು ಆಡಿದ 30 ಬಾಲ್​ನಲ್ಲಿ 1 ಸಿಕ್ಸರ್​, 2 ಫೋರ್​ ಸಮೇತ 31 ರನ್​ ಗಳಿಸಿ ಔಟಾದ್ರು.

ಇದನ್ನೂ ಓದಿ:ಚೆನ್ನೈ ವಿರುದ್ಧ ಮಹತ್ವದ ಪಂದ್ಯ; ಆರ್​​ಸಿಬಿ ತಂಡಕ್ಕೆ ಸರಿಯಾಗಿ ಕೈ ಕೊಟ್ಟ ವಿರಾಟ್ ಕೊಹ್ಲಿ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment