ಚಿನ್ನಸ್ವಾಮಿಯಲ್ಲಿ ಸತತ ಎರಡನೇ ಸೋಲು.. ಕ್ಯಾಪ್ಟನ್ ಪಾಟೀದಾರ್ ಹೊಣೆ ಮಾಡಿದ್ದು ಯಾರನ್ನ..?

author-image
Ganesh
Updated On
‘ಗೆಲುವಿನ ಕ್ರೆಡಿಟ್ ಯಾರಿಗೆ ಅಂದರೆ..’ ಗೆದ್ದ ಖುಷಿಯಲ್ಲಿ RCB ಕ್ಯಾಪ್ಟನ್ ಹೊಗಳಿದ್ದು ಯಾರನ್ನ..?
Advertisment
  • ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ಬೆಂಗಳೂರು ತಂಡ
  • 6 ವಿಕೆಟ್​ಗಳ ಭರ್ಜರಿ ಜಯಗಳಿಸಿದ ಡೆಲ್ಲಿ ಕ್ಯಾಪಿಟಲ್ಸ್
  • ಸೋಲಿನ ಬಳಿಕ ಕ್ಯಾಪ್ಟನ್ ರಜತ್ ಪಾಟೀದಾರ್ ಏನಂದ್ರು

ಬೆಂಗಳೂರಲ್ಲಿ ಆರ್​ಸಿಬಿ ಸತತ ಎರಡನೇ ಬಾರಿಗೆ ಸೋತಿದೆ. ನಿನ್ನೆಯ ದಿನ ಡೆಲ್ಲಿ ಕ್ಯಾಪಿಟಲ್ಸ್​ಗೆ ರಜತ್ ಪಾಟೀದಾರ್ ಪಡೆ ಶರಣಾಗಿದೆ. ಟಾಸ್ ಸೋತು ಬ್ಯಾಟ್ ಮಾಡಿದ್ದ ಆರ್​ಸಿಬಿ 7 ವಿಕೆಟ್ ಕಳೆದುಕೊಂಡು 163 ರನ್​ಗಳನ್ನು ಕಲೆ ಹಾಕಿತ್ತು. ಈ ಗುರಿ ಬೆನ್ನು ಹತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್, 17.5 ಓವರ್​ನಲ್ಲಿ ನಿಗದಿತ ಗುರಿ ಮುಟ್ಟಿತು.

ಸೋಲಿನ ಬಳಿಕ ಮಾತನಾಡಿರುವ ಆರ್​ಸಿಬಿ ಕ್ಯಾಪ್ಟನ್ ರಜತ್ ಪಾಟೀದಾರ್.. ಆರಂಭದಲ್ಲಿ ವಿಕೆಟ್ ತುಂಬಾ ಭಿನ್ನವಾಗಿತ್ತು. ಬ್ಯಾಟಿಂಗ್​ಗೆ ಉತ್ತಮವಾಗಿದೆ ಎಂದು ಭಾವಿಸಿದ್ದೇವು. ಆದರೆ ನಾವು ಚೆನ್ನಾಗಿ ಬ್ಯಾಟ್ ಮಾಡಲಿಲ್ಲ. ಅತಿಯಾದ ಆತ್ಮವಿಶ್ವಾಸ ನಮ್ಮಲ್ಲಿತ್ತು ಅನ್ನೋದನ್ನ ನಾನೊಪ್ಪಲ್ಲ ಎಂದರು.

ಇದನ್ನೂ ಓದಿ: ತವರಲ್ಲಿ ಕೆ.ಎಲ್ ರಾಹುಲ್ ಬ್ಯಾಟಿಂಗ್​ ಆರ್ಭಟ.. ಕನ್ನಡಿಗನಿಂದ RCBಗೆ ಭಾರೀ ಮುಖಭಂಗ, ಸೋಲು

ಪ್ರತಿಯೊಬ್ಬ ಬ್ಯಾಟರ್ ಉತ್ತಮ ಮನಸ್ಥಿತಿಯಲ್ಲಿದ್ದರು. ಸರಿಯಾದ ಇಂಟೆಂಟ್ ತೋರಿಸುತ್ತಿದ್ದರು. ಆರಂಭದಲ್ಲಿ ತಂಡದ ಸ್ಕೋರ್ 80 ರನ್​ವರೆಗೆ ಕೇವಲ ಒಂದು ವಿಕೆಟ್ ಕಳೆದುಕೊಂಡಿದ್ದೇವು. ಆ 80 ರಿಂದ 90 ರನ್​​ ತಲುಪುವ ವೇಳೆಗೆ ನಾಲ್ಕು ವಿಕೆಟ್ ಕಳೆದುಕೊಳ್ಳುವುದನ್ನ ಸ್ವೀಕರಿಸಲು ಸಾಧ್ಯವಿಲ್ಲ.

ನಮ್ಮಲ್ಲಿ ಉತ್ತಮ ಬ್ಯಾಟಿಂಗ್ ಲೈನ್-ಅಪ್ ಇದೆ. ಪರಿಸ್ಥಿತಿಗೆ ತಕ್ಕಂತೆ ಆಡಬೇಕಾಗಿದೆ. ಹಾಗಾದರೆ ಮಾತ್ರ ತಂಡಕ್ಕೆ ಒಳ್ಳೆಯದು. ಟಿಮ್ ಡೇವಿಡ್ ರನ್​​​ ವೇಗ ಹೆಚ್ಚಿಸಿದ ರೀತಿ ಅದ್ಭುತವಾಗಿದೆ. ಪವರ್‌ಪ್ಲೇನಲ್ಲಿ ಬೌಲಿಂಗ್ ವಿಶೇಷವಾಗಿತ್ತು. ನಾವು ಉತ್ತಮ ಕ್ರಿಕೆಟ್ ಆಡಬೇಕು, ಅದನ್ನು ಸರಳವಾಗಿ ಇಡಬೇಕು ಎಂದರು.

ಇದನ್ನೂ ಓದಿ: ಇದು ನನ್ನ ಮೈದಾನ, ನನ್ನ ಮನೆ -ಆರ್​ಸಿಬಿ ಸೋಲಿಸಿ KL ರಾಹುಲ್ ಸ್ಫೋಟಕ ಹೇಳಿಕೆ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment