ಆರ್​ಸಿಬಿಗೆ ತವರಿನಲ್ಲಿ ಮುಖಭಂಗ.. ಹೀನಾಯ ಸೋಲಿಗೆ ಕ್ಯಾಪ್ಟನ್ ಪಾಟೀದಾರ್ ಕೊಟ್ಟ ಕಾರಣ ಏನು..?

author-image
Ganesh
Updated On
ಆರ್​ಸಿಬಿಗೆ ತವರಿನಲ್ಲಿ ಮುಖಭಂಗ.. ಹೀನಾಯ ಸೋಲಿಗೆ ಕ್ಯಾಪ್ಟನ್ ಪಾಟೀದಾರ್ ಕೊಟ್ಟ ಕಾರಣ ಏನು..?
Advertisment
  • ಗುಜರಾತ್ ಟೈಟನ್ಸ್ ವಿರುದ್ಧ ಹೀನಾಯವಾಗಿ ಸೋಲು
  • 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದ ಗುಜರಾತ್ ತಂಡ
  • 160 ರನ್​ಗಳ ಟಾರ್ಗೆಟ್ ನೀಡಿದ್ದ ಆರ್​ಸಿಬಿ ಟೀಂ

ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಗುಜರಾತ್ ಟೈಟನ್ಸ್​ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಟಾಸ್​ ಸೋತು ಮೊದಲು ಬ್ಯಾಟ್ ಮಾಡಿದ್ದ ಆರ್​ಸಿಬಿ ಎದುರಾಳಿ ತಂಡಕ್ಕೆ 8 ವಿಕೆಟ್ ಕಳೆದುಕೊಂಡು 170 ರನ್​ಗಳ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಗುಜರಾತ್ ಟೈಟನ್ಸ್, ಕೇವಲ 2 ವಿಕೆಟ್ ಕಳೆದುಕೊಂಡು 170 ರನ್​ಗಳಿಸಿ ಸಂಭ್ರಮಿಸಿತು.

ಪಂದ್ಯ ಸೋತ ಬೆನ್ನಲ್ಲೇ ಮಾತನಾಡಿರುವ ಆರ್​ಸಿಬಿ ಕ್ಯಾಪ್ಟನ್ ರಜತ್ ಪಾಟೀದಾರ್, 200 ಅಲ್ಲ, ಸುಮಾರು 190 ರನ್​ಗಳಷ್ಟು ಟಾರ್ಗೆಟ್ ನೀಡೋದಾಗಿತ್ತು. ಆದರೆ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿದ್ದರಿಂದ ನಮ್ಮ ಟಾರ್ಗೆಟ್​​ಗೆ ಅಡ್ಡಿ ಆಯಿತು. ನಮ್ಮ ಉದ್ದೇಶ ಒಳ್ಳೆಯದೇ ಆಗಿತ್ತು. ಆದರೆ ಪವರ್​ ಪ್ಲೇನಲ್ಲೇ ಮೂರು ವಿಕೆಟ್ ಕಳೆದುಕೊಳ್ಳಬಾರದಿತ್ತು. ಇದರಿಂದ ತಂಡಕ್ಕೆ ದೊಡ್ಡ ಆಘಾತ ಆಯಿತು.

ಇದನ್ನೂ ಓದಿ: ಸಿರಾಜ್​ಗೆ ಅತ್ಯಂತ ಬಿಗ್​ ಸಿಕ್ಸರ್​ ಸಿಡಿಸಿದ RCB ಸ್ಫೋಟಕ ಬ್ಯಾಟರ್ ಸಾಲ್ಟ್.. ಎಷ್ಟು ಮೀಟರ್​?

ನಂತರದ ಪರಿಸ್ಥಿತಿ ಉತ್ತಮವಾಗಿತ್ತು. ಬೌಲರ್‌ಗಳು ಈ ಮೊತ್ತವನ್ನು ರಕ್ಷಿಸಲು ಅದ್ಭುತವಾಗಿ ಪ್ರಯತ್ನಿಸಿದರು. ಈ ಚೇಸ್ ಅನ್ನು 18ನೇ ಓವರ್‌ಗೆ ಕೊಂಡೊಯ್ಯುವುದು ನೋಡಲು ಅದ್ಭುತವಾಗಿತ್ತು. ಜಿತೇಶ್, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಟಿಮ್ ಡೇವಿಡ್ ಅವರ ಬ್ಯಾಟಿಂಗ್ ನಮಗೆ ಸಕಾರಾತ್ಮಕವಾಗಿತ್ತು. ಬ್ಯಾಟಿಂಗ್ ಲೈನ್-ಅಪ್ ಬಗ್ಗೆ ಹೆಚ್ಚು ವಿಶ್ವಾಸವಿದೆ. ಅವರು ಸಕಾರಾತ್ಮಕ ಉದ್ದೇಶ ತೋರಿಸುತ್ತಿದ್ದಾರೆ, ಅದು ನಮಗೆ ಒಳ್ಳೆಯದು ಎಂದಿದ್ದಾರೆ.

ಇದನ್ನೂ ಓದಿ: ಆರಂಭದಲ್ಲಿ ವಿಕೆಟ್​ ಬಿದ್ರೂ ಕೊನೆಯಲ್ಲಿ RCB ಆರ್ಭಟ.. ಗುಜರಾತ್​ಗೆ ಈ ಟಾರ್ಗೆಟ್ ಸೆಟ್ ಮಾಡಿದ ಬೆಂಗಳೂರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment