/newsfirstlive-kannada/media/post_attachments/wp-content/uploads/2025/06/RAJATH_PATIDAR_RCB.jpg)
18 ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಐಪಿಎಲ್ 2025ರ ಚಾಂಪಿಯನ್ ಆಗಿರುವ ಆರ್‌ಸಿಬಿಗೆ 20 ಕೋಟಿ ರೂಪಾಯಿ ಬಹುಮಾನ ಪಡೆಯಲಿದೆ. ರನ್ನರ್ ಅಪ್ ತಂಡ ಪಂಜಾಬ್ ಕೂಡ 13 ಕೋಟಿ ಹಣ ಜೇಬಿಗಿಳಿಸಲಿದೆ. ಈ ಮಹತ್ವದ ಫೈನಲ್ ಪಂದ್ಯಕ್ಕೂ ಮೊದಲು ಆರ್‌ಸಿಬಿ ಕ್ಯಾಪ್ಟನ್ ರಜತ್ ಪಾಟಿದಾರ್ ಟ್ರೋಫಿಯನ್ನು ಗುರಾಯಿಸಿ ಇದೀಗ ವೈರಲ್ ಆಗ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಐಪಿಎಲ್ನ ಫೈನಲ್ ಪಂದ್ಯಕ್ಕೂ ಒಂದು ದಿನ ಮೊದಲು ಟ್ರೋಫಿ ಜೊತೆ ಎರಡು ತಂಡದ ನಾಯಕರ ಫೋಟೋಶೂಟ್ ಮಾಡಲಾಗುತ್ತಿತ್ತು. ಈ ವೇಳೆ ಟ್ರೋಫಿ ಪಕ್ಕದಲ್ಲೇ ಕುಳಿತ್ತಿದ್ದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅವರು ಐಪಿಎಲ್ ಕಪ್ ಅನ್ನು ಗುರಾಯಿಸಿ ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿದ್ದರು.
ಐಪಿಎಲ್ ಟ್ರೋಫಿ ಜೊತೆ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಹಾಗೂ ಪಂಜಾಬ್ ಕ್ಯಾಪ್ಟನ್ ಅಯ್ಯರ್ ಹಲವು ಸುಂದರವಾದ ಫೋಟೋಗಗಳಿಗೆ ಪೋಸ್ ಕೊಟ್ಟಿದ್ದರು. ನರೇಂದ್ರ ಮೋದಿ ಸ್ಟೇಡಿಯಂ ಸೇರಿದಂತೆ ಅಹಮದಾಬಾದ್ ನಗರದಲ್ಲಿನ ಕೆಲ ಪ್ರೇಕ್ಷಣೀಯ ಸ್ಥಳಗಳಿಗೆ ತೆರಳಿ ಫೋಟೋಶೂಟ್ ಮಾಡಲಾಗಿತ್ತು.
ಇದನ್ನೂ ಓದಿ:IPL ಟ್ರೋಫಿ ಜೊತೆ ಆರ್‌ಸಿಬಿ ಕ್ಯಾಪ್ಟನ್ ರಜತ್, ಶ್ರೇಯಸ್ ಮಸ್ತ್ ಲುಕಿಂಗ್.. ಟಾಪ್-10 ಫೋಟೋಸ್!
ಸದ್ಯ ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ಜಯಭೇರಿ ಬಾರಿಸಿ ಟ್ರೋಫಿ ಎತ್ತಿ ಹಿಡಿದಿದೆ. ಫೈನಲ್ ಪಂದ್ಯದ ವೇಳೆ ಪ್ರತಿ ಕ್ಷಣ ಕೂಡ ತುಂಬಾ ಮುಖ್ಯವಾಗಿತ್ತು. ಮೈದಾನದಲ್ಲೇ ವಿರಾಟ್ ಕೊಹ್ಲಿ ಕಣ್ಣೀರು ಹಾಕಿರುವುದು ಎಲ್ಲರನ್ನೂ ಭಾವುಕರನ್ನಾಗಿಸಿತು. ಈ ಎಲ್ಲದರ ನಡುವೆ ಶ್ರೇಯಸ್ ಅಯ್ಯರ್ ಪಕ್ಕದಲ್ಲೇ ಇರುವಾಗ, ರಜತ್ ಪಾಟಿದಾರ್ ಫೈನಲ್ ಪಂದ್ಯಕ್ಕೂ ಮೊದಲೇ ಟ್ರೋಫಿಯನ್ನು ಕೆಕ್ಕರಿಸಿ ನೋಡಿರುವ ಫೋಟೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 190 ರನ್ಗಳ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಸ್ವೀಕರಿಸಿದ್ದ ಎದುರಾಳಿ ಪಂಜಾಬ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 184 ರನ್‌ಗಳನ್ನು ಮಾತ್ರ ಗಳಿಸಿ 6 ರನ್ಗಳಿಂದ ಸೋಲೋಪ್ಪಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ