/newsfirstlive-kannada/media/post_attachments/wp-content/uploads/2025/04/Rajat-1.jpg)
ಐಪಿಎಲ್ ಪ್ಲೇ-ಆಫ್ಗೆ ಅಧಿಕೃತ ಎಂಟ್ರಿಗಾಗಿ ಕಾಯುತ್ತಿರುವ ಆರ್ಸಿಬಿಗೆ ಆಘಾತ ಉಂಟಾಗಿದೆ. ಸೀಸನ್ 18 ಆವೃತ್ತಿಯಲ್ಲಿ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದ, ರಜತ್ ಪಾಟೀದಾರ್ ಮುಂದಿನ ಪಂದ್ಯ ಆಡೋದು ಡೌಟ್ ಎನ್ನಲಾಗುತ್ತಿದೆ.
ಭಾರತ ಮತ್ತು ಪಾಕ್ ನಡುವೆ ಯುದ್ಧ ಬಿಕ್ಕಟ್ಟು ಹಿನ್ನೆಲೆಯಲ್ಲಿ ಐಪಿಎಲ್ನ ಎಲ್ಲಾ ಪಂದ್ಯಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಮೇ 17 ರಿಂದ ಪಂದ್ಯಗಳು ಪುನರಾರಂಭದ ಜೊತೆಗೆ ಉಳಿದ ಮ್ಯಾಚ್ಗಳ ರಿಶೆಡ್ಯೂಲ್ ಕೂಡ ಆಗಿದೆ. ಅತೆಯೇ ಮೇ 17 ರಂದು ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಆರ್ಸಿಬಿ ಸೆಣಸಾಟ ನಡೆಸಲಿವೆ.
ಇದನ್ನೂ ಓದಿ: RCBಗೆ ವಿದೇಶಿ ಆಟಗಾರರಿಂದ ಭಾರೀ ಹೊಡೆತ.. ಐಪಿಎಲ್ನ ಟಾಪ್- 5 ತಂಡಗಳಿಗೆ ಸಂಕಷ್ಟ!
ಈ ಪಂದ್ಯಕ್ಕೆ ನಾಯಕ ರಜತ್ ಪಾಟೀದಾರ್ ಆಡೋದು ಅನುಮಾನ ಎಂದು ಹೇಳಲಾಗುತ್ತಿದೆ. ಪಾಟೀದಾರ್ಗೆ ಆಗಿದ್ದೇನು ಅಂತಾ ನೋಡೋದಾದರೆ, ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆರ್ಸಿಬಿ ಎದುರಿಸಿತ್ತು. ಈ ವೇಳೆ ನಾಯಕ ಪಾಟೀದಾರ್, ಬೆರಳಿಗೆ ಗಾಯವಾಗಿದೆ. ಈ ಗಾಯವು ಇನ್ನೂ ಸರಿಯಾಗಿ ವಾಸಿ ಆಗಿಲ್ಲ ಎಂದು ಹೇಳಲಾಗುತ್ತಿದೆ.
ಹಾಗಾಗಿ ಕೆಕೆಆರ್ ವಿರುದ್ಧ ಆಡಲ್ಲ ಎನ್ನಲಾಗುತ್ತಿದೆ. ರಜತ್ ಬದಲಿಗೆ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಆರ್ಸಿಬಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಯಾವುದೇ ಖಚಿತತೆ ಇಲ್ಲ. ಆರ್ಸಿಬಿ ಮ್ಯಾನೇಜ್ಮೆಂಟ್ ಈ ಬಗ್ಗೆ ಉತ್ತರ ನೀಡಬೇಕಿದೆ.
ಇದನ್ನೂ ಓದಿ: ಕಿಂಗ್ ಕೊಹ್ಲಿಗಾಗಿ RCB ಅಭಿಮಾನಿಗಳು ಮಾಸ್ಟರ್ ಪ್ಲಾನ್.. ಚಿನ್ನಸ್ವಾಮಿಯಲ್ಲಿ ಸ್ಪೆಷಲ್ ಡೇ, ಏನು ಗೊತ್ತಾ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್