/newsfirstlive-kannada/media/post_attachments/wp-content/uploads/2025/03/RCB-5-1.jpg)
ಇಂದಿನ ಡಬಲ್ ಹೆಡ್ಡರ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ರಜತ್ ಪಾಟಿದಾರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಚಂಡೀಗಢದ ಮುಲ್ಲನ್ಪುರ್ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ರಜತ್ ಪಾಟಿದಾರ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಪಂಜಾಬ್ ಕಿಂಗ್ಸ್ ಮೊದಲ ಬ್ಯಾಟಿಂಗ್ ಮಾಡಲಿದೆ. ವಿಕೆಟ್ಗಳನ್ನು ಬೇಗ ಉರುಳಿಸುವುದು ಹಾಗೂ ರನ್ಗಳನ್ನು ಚೇಸ್ ಮಾಡುವ ಉದ್ದೇಶದಿಂದ ನಾಯಕ ರಜತ್ ಮೊದಲ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿರಬಹುದು.
ಇದನ್ನೂ ಓದಿ: ರಣರೋಚಕ ಪಂದ್ಯ.. ಕೇವಲ 2 ರನ್ಗಳಿಂದ ರಿಷಭ್ ಪಂತ್ ಪಡೆಗೆ ಭರ್ಜರಿ ಗೆಲುವು
ಇನ್ನು ಪಂದ್ಯದಲ್ಲಿ ಆರ್ಸಿಬಿ ಪರ ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ ಆರಂಭಿಕರಾಗಿ ಕ್ರೀಸ್ಗೆ ಬರಲಿದ್ದಾರೆ. 3ನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕೆ ಇಳಿಯಬಹುದು. ಸದ್ಯ ಇವರ ಬದಲಿಗೆ ಬೌಲರ್ ಸುಯಶ್ ಶರ್ಮಾ ಮೈದಾನದಲ್ಲಿ ಇರಲಿದ್ದಾರೆ. ರಜತ್ ಪಾಟಿದಾರ್ ಅಬ್ಬರದ ಬ್ಯಾಟಿಂಗ್ ಮಾಡುವ ಅವಕಾಶ ಇದೆ. ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಆಗಿ ಜಿತೇಶ್ ಶರ್ಮಾ ಸ್ಥಾನ ಖಾಯಂ ಆಗಿದೆ. ತವರಿನಲ್ಲಿ ಸೋಲನ್ನು ಅನುಭವಿಸಿದ್ದ ಆರ್ಸಿಬಿ ಈಗ ಚಂಡೀಗಢದ ಮುಲ್ಲನ್ಪುರ್ನಲ್ಲಿ ಗೆಲುವಿನ ನಗೆ ಬೀರಬೇಕಿದೆ.
ಆಲೌರೌಂಡರ್ ಆಗಿದ್ದ ಲೈಮ್ ಲಿವಿಂಗ್ಸ್ಟನ್ಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿದ್ದು ಇವರ ಬದಲಿಗೆ ವೆಸ್ಟ್ ಇಂಡೀಸ್ ಪ್ಲೇಯರ್ ರೊಮಾರಿಯೋ ಶೆಫರ್ಡ್ಗೆ ಸ್ಥಾನ ಕಲ್ಪಿಸಲಾಗಿದೆ. ಕೃನಾಲ್ ಪಾಂಡ್ಯ ಅವರ ಬ್ಯಾಟಿಂಗ್, ಬೌಲಿಂಗ್ ತಂಡದಲ್ಲಿ ಮಹತ್ವ ಪಡೆಯುತ್ತದೆ. ಸುಯಶ್ ಶರ್ಮಾ, ಯಶ್ ದಯಾಳ್, ಭುವನೇಶ್ವರ್ ಹಾಗೂ ಜೋಶ್ ಹ್ಯಾಜಲ್ವುಡ್ ಅವರ ತಂಡದ ಬೌಲಿಂಗ್ ಶಕ್ತಿಯಾಗಿದ್ದಾರೆ.
ಇನ್ನು ಎದುರಾಳಿ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್ ಅನ್ನು ಆರಂಭದಲ್ಲೇ ಕಟ್ಟಿ ಹಾಕಬೇಕಿದೆ. ಓಪನರ್ ಆಗಿ ಕ್ರೀಸ್ಗೆ ಆಗಮಿಸುವ ಪ್ರಿಯಾಂಶ್ ಆರ್ಯ, ಪ್ರಭಾಸಿಮ್ರಾನ್ ಸಿಂಗ್ ಅವರ ಜೋಡಿಯನ್ನು ಪವರ್ ಪ್ಲೇ ಒಳಗೆಯೇ ಮುರಿಯಬೇಕು. ಇಲ್ಲದಿದ್ದರೇ ಈ ಇಬ್ಬರ ಬ್ಯಾಟಿಂಗ್ ಆರ್ಸಿಬಿಗೆ ಸಂಕಷ್ಟ ತರಬಹುದು. ಇನ್ನುಳಿದಂತೆ ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸುವ ನೆಹಾಲ್ ವಧೇರಾ ಹಾಗೂ ಜೋಶ್ ಇಂಗ್ಲಿಸ್ ಮೇಲೆ ಆರ್ಸಿಬಿ ಹದ್ದಿನ ಕಣ್ಣು ಇಡಬೇಕು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್- 11
ರಜತ್ ಪಾಟಿದಾರ್ (ನಾಯಕ), ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ರೊಮಾರಿಯೋ ಶೆಫರ್ಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್, ಸುಯಶ್ ಶರ್ಮಾ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ