/newsfirstlive-kannada/media/post_attachments/wp-content/uploads/2025/04/RCB_TEAM_MI.jpg)
ಭಾನುವಾರದ ಡಬಲ್ ಹೆಡ್ಡರ್ನ 2ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ರಜತ್ ಪಾಟಿದಾರ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ತಂಡದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದ್ದು ಸ್ಫೋಟಕ ಬ್ಯಾಟರ್ ಫಿಲ್ ಸಾಲ್ಟ್ ಬದಲಿಗೆ ವಿದೇಶದ ಯುವ ಆಟಗಾರನಿಗೆ ಸ್ಥಾನ ನೀಡಲಾಗಿದೆ.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ರಜತ್ ಪಾಟಿದಾರ್ ಫೀಲ್ಡಿಂಗ್ ತೆಗೆದುಕೊಂಡು ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಮೊದಲ ಬ್ಯಾಟಿಂಗ್ಗೆ ಆಹ್ವಾನ ಮಾಡಿದ್ದಾರೆ. ರಜತ್ ಅವರ ನಿರ್ಣಯ ಇಲ್ಲಿ ಉತ್ತಮವಾಗಿದೆ ಎನ್ನಬಹುದು, ಏಕೆಂದರೆ ಈ ಮೈದಾನದಲ್ಲಿ ರನ್ಗಳ ಹೊಳೆ ಹರಿಸಬಹುದು. ಇದರಿಂದ ಈಜಿಯಾಗಿ ಎದುರಾಳಿ ನೀಡಿದ ರನ್ಗಳನ್ನ ಚೇಸ್ ಮಾಡಬಹುದು ಎಂದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಆರ್ಸಿಬಿ ಪರವಾಗಿ ಓಪನರ್ ಆಗಿ ಸಾಲ್ಟ್ ಬದಲಿಗೆ ಯುವ ಪ್ಲೇಯರ್ ಜಾಕೋಬ್ ಬೆಥೆಲ್ ಅವರು ವಿರಾಟ್ ಕೊಹ್ಲಿ ಜೊತೆ ಮೈದಾನಕ್ಕೆ ಆಗಮಿಸಲಿದ್ದಾರೆ. 3ನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಕಣಕ್ಕೆ ಇಳಿಯಲಿದ್ದು ಕಳೆದ ಪಂದ್ಯದಲ್ಲಿ ಅಬ್ಬರಿಸಿದಂತೆ ಡೆಲ್ಲಿ ವಿರುದ್ಧ ಕನ್ನಡಿಗ ಕಮಾಲ್ ಮಾಡೋದು ಪಕ್ಕಾ ಎನ್ನಲಾಗುತ್ತಿದೆ. ಸದ್ಯ ಪಂದ್ಯದಲ್ಲಿ ಪಡಿಕ್ಕಲ್ ಇಂಪ್ಯಾಕ್ಟ್ ಪ್ಲೇಯರ್ ಆಗಿದ್ದು ಸುಯಾಶ್ ಶರ್ಮಾ ಫೀಲ್ಡಿಂಗ್ ಮಾಡಲಿದ್ದಾರೆ.
ಕಳೆದ ಪಂದ್ಯದಲ್ಲಿ ವಿಫಲ ಬ್ಯಾಟಿಂಗ್ ಮಾಡಿದ್ದ ನಾಯಕ ರಜತ್ ಪಾಟಿದಾರ್ ಈ ಪಂದ್ಯದಲ್ಲಿ ಉತ್ತಮ ಪರ್ಫಾಮೆನ್ಸ್ ನೀಡಬೇಕಿದೆ. ಜಿತೇಶ್ ಶರ್ಮಾ ವಿಕೆಟ್ ಕೀಪರ್ ಜೊತೆಗೆ ಬ್ಯಾಟಿಂಗ್ ಅನ್ನು ನಿರ್ವಹಿಸಲಿದ್ದಾರೆ. ಡೆಲ್ಲಿ ಜೊತೆ ತವರಲ್ಲಿ ಸೋಲನ್ನು ಅನುಭವಿಸಿದ್ದ ಆರ್ಸಿಬಿ, ಈಗ ಅವರ ನೆಲದಲ್ಲೇ ಅವರನ್ನು ಬಗ್ಗು ಬಡಿಯಬೇಕಿದೆ.
ಆಲೌರೌಂಡರ್ ಕೃನಾಲ್ ಪಾಂಡ್ಯ ತಂಡದಲ್ಲಿ ಮಹತ್ವ ಸ್ಥಾನ ನಿರ್ವಹಿಸಲಿದ್ದಾರೆ. ಭುವನೇಶ್ವರ್, ಸುಯಶ್ ಶರ್ಮಾ, ಯಶ್ ದಯಾಳ್ ಹಾಗೂ ಜೋಶ್ ಹ್ಯಾಜಲ್ವುಡ್ ಬೌಲಿಂಗ್ ಬಲವಾಗಿದ್ದಾರೆ. ಎದುರಾಳಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಬಲಿಷ್ಠವಾಗಿದೆ. ಓಪನರ್ ಫಾಫ್ ಡುಪ್ಲಿಸಿಸ್ ಹಾಗೂ ಅಭಿಷೇಕ್ ಪೊರೆಲ್ ಬ್ಯಾಟಿಂಗ್ ಅನ್ನು ಆರ್ಸಿಬಿ ಕಟ್ಟಿ ಹಾಕಬೇಕಿದೆ. ಕನ್ನಡಿಗರಾದ ಕೆ.ಎಲ್ ರಾಹುಲ್ ಹಾಗೂ ಕರುಣ್ ನಾಯರ್ ಬ್ಯಾಟಿಂಗ್, ಡೆಲ್ಲಿಗೆ ಅತಿ ಮುಖ್ಯವಾಗಿದೆ. ಹೀಗಾಗಿ ಆರ್ಸಿಬಿ ಬೌಲರ್ಸ್ ಈ ಕನ್ನಡಿಗರ ಬ್ಯಾಟಿಂಗ್ಗೂ ಕಡಿವಾಣ ಹಾಕಬೇಕಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್- 11
ರಜತ್ ಪಾಟಿದಾರ್ (ನಾಯಕ), ಜಾಕೋಬ್ ಬೆಥೆಲ್, ವಿರಾಟ್ ಕೊಹ್ಲಿ, ರೊಮಾರಿಯೋ ಶೆಫರ್ಡ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್, ಸುಯಶ್ ಶರ್ಮಾ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ