/newsfirstlive-kannada/media/post_attachments/wp-content/uploads/2025/05/VIRAT_KOHLI_NEW-1.jpg)
2025ರ ಐಪಿಎಲ್ ಸೀಸನ್ 18ರ ಲೀಗ್ನ ಕೊನೆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೆಂಟ್ಸ್ ತಂಡ ಸೆಣಸಾಟ ನಡೆಸುತ್ತಿವೆ. ಈ ಮಹತ್ತರ ಪಂದ್ಯದಲ್ಲಿ ಆರ್ಸಿಬಿ ಕ್ಯಾಪ್ಟನ್ ಜಿತೇಶ್ ಶರ್ಮಾ ಅವರು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಉತ್ತರ ಪ್ರದೇಶದ ಲಕ್ನೋದಲ್ಲಿರುವ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ಜಿತೇಶ್ ಶರ್ಮಾ ಫೀಲ್ಡಿಂಗ್ ತೆಗೆದುಕೊಂಡಿದ್ದಾರೆ. ಆರ್ಸಿಬಿ ಕ್ಯಾಂಪ್ನಿಂದ ಈಗಾಗಲೇ ಜಾಕೋಬ್ ಬೆಥೆಲ್ ಹಾಗೂ ಲುಂಗಿ ಎನ್ಗಿಡಿ ಹೊರ ನಡೆದಿದ್ದಾರೆ. ತಮ್ಮ ತಮ್ಮ ದೇಶದ ಪರವಾಗಿ ಆಡಲು ತವರಿಗೆ ಮರಳಿದ್ದಾರೆ. ಇದರ ಜೊತೆಗೆ ಜೋಶ್ ಹ್ಯಾಜಲ್ವುಡ್, ಟಿಮ್ ಡೇವಿಡ್ ಅವರು ಪಂದ್ಯದಿಂದ ಹೊರಗುಳಿದಿದ್ದು ಇದಕ್ಕೆ ಕಾರಣ ತಿಳಿದು ಬಂದಿಲ್ಲ. ಹೀಗಾಗಿ ಪ್ಲೇಯಿಂಗ್-11 ರಲ್ಲಿ ಭಾರೀ ಬದಲಾವಣೆ ಆಗಿದೆ.
ರಜತ್ ಪಾಟಿದಾರ್ ಅವರ ಕೈಗೆ ಗಾಯವಾಗಿದ್ದರಿಂದ ಅವರ ಬದಲಿಗೆ ಜಿತೇಶ್ ಶರ್ಮಾ ಅವರು ಆರ್ಸಿಬಿಯ ನಾಯಕ ಹಾಗೂ ವಿಕೆಟ್ ಕೀಪರ್ ಸ್ಥಾನದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಎಂದಿನಂತೆ ತಂಡದಲ್ಲಿ ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ ಅವರು ಓಪನರ್ ಆಗಿ ಕಣಕ್ಕೆ ಇಳಿಯಲಿದ್ದು ಬ್ಯಾಟಿಂಗ್ನಲ್ಲಿ ಆರ್ಭಟಿಸಲಿದ್ದಾರೆ. ಇನ್ನು 3ನೇ ಕ್ರಮಾಂಕದಲ್ಲಿ ಕನ್ನಡಿಗ ಮಯಾಂಕ್ ಅಗರವಾಲ್ ಬ್ಯಾಟಿಂಗ್ ಮಾಡಲಿದ್ದು ಮಧ್ಯಮ ಬ್ಯಾಟಿಂಗ್ನಲ್ಲಿ ರಜತ್ ಪಾಟಿದಾರ್ ಮಹತ್ತರ ಪಾತ್ರ ವಹಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ:IPL ಅಂತಿಮ ಲೀಗ್ ಪಂದ್ಯದಲ್ಲಿ ಈ 2 ಐಕಾನಿಕ್ ರೆಕಾರ್ಡ್ ಮಾಡ್ತಾರಾ ಕಿಂಗ್ ಕೊಹ್ಲಿ?
ಆಲ್ರೌಂಡರ್ಗಳಾಗಿ ಲಿಯಾಮ್ ಲಿವಿಂಗ್‌ಸ್ಟೋನ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ ತಂಡದಲ್ಲಿದ್ದು ಎದುರಾಳಿಗೆ ಸವಾಲು ಹಾಕಲಿದ್ದಾರೆ. ಆರ್ಸಿಬಿಯ ಬೌಲಿಂಗ್ ಪಡೆಯನ್ನು ಜೋಶ್ ಹೆಜಲ್ವುಡ್ ಬದಲಿಗೆ ಭುವನೇಶ್ವರ್ ಕುಮಾರ್ ಅವರು ಮುನ್ನಡೆಸಲಿದ್ದಾರೆ. ಭುವನೇಶ್ವರ್ಗೆ ಯಶ್ ದಯಾಲ್, ನುವಾನ್ ತುಷಾರ ಅವರು ಸಾಥ್ ಕೊಡಲಿದ್ದಾರೆ. ಇನ್ನು ಟಿಮ್ ಡೇವಿಡ್ ಅವರು ಈ ಪಂದ್ಯದಲ್ಲಿ ಆಡುತ್ತಿಲ್ಲ. ಹೀಗಾಗಿ ಆರ್ಸಿಬಿಯ ಪ್ಲೇಯಿಂಗ್- 11ರಲ್ಲಿ ದೊಡ್ಡ ಬದಲಾವಣೆ ಆಗಿದೆ ಎನ್ನಬಹುದು.
ಈ ಸೀಸನ್ನ ಕೊನೆ ಪಂದ್ಯ ಆಡುತ್ತಿರುವ ರಿಷಭ್ ಪಂತ್ ನೇತೃತ್ವದ ಲಕ್ನೋ ತಂಡ ಕೂಡ ಬಲಿಷ್ಠವಾಗಿದೆ. ಓಪನರ್ ಮಿಚೆಲ್ ಮಾರ್ಷ್ ಈಗಾಗಲೇ ಒಂದು ಶತಕ ಸಿಡಿಸಿ ದಾಖಲೆ ಮಾಡಿದ್ದಾರೆ. ಇದರ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡುವ ನಿಕೋಲಸ್ ಪೂರನ್ ರನ್ ವೇಗ ನೀಡಲಿದ್ದಾರೆ. ಆಯುಷ್ ಬದೋನಿ ಕೂಡ ಕೊನೆ ಹಂತದಲ್ಲಿ ಲಕ್ನೋಗೆ ನೆರವಾಗಲಿದ್ದಾರೆ. ಇದರ ಜೊತೆಗೆ ಬೌಲರ್ಗಳು ಬಿರುಸಿನ ದಾಳಿ ಮಾಡುವ ನಿರೀಕ್ಷೆ ಇದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್- 11
ಜಿತೇಶ್ ಶರ್ಮಾ (ನಾಯಕ, ವಿಕೆಟ್ ಕೀಪರ್), ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರವಾಲ್, ರಜತ್ ಪಾಟಿದಾರ್, ಲಿಯಾಮ್ ಲಿವಿಂಗ್‌ಸ್ಟೋನ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ನುವಾನ್ ತುಷಾರ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ