RCBಗೆ ಮತ್ತೊಮ್ಮೆ ಕೈ ಹಿಡಿದ ಅದೃಷ್ಟ; ಟಾಸ್ ಗೆದ್ದ ರಜತ್.. ಪ್ಲೇಯಿಂಗ್​- 11ರಲ್ಲಿ ಸಣ್ಣ ಬದಲಾವಣೆ​!

author-image
Bheemappa
Updated On
RCBಗೆ ಮತ್ತೊಮ್ಮೆ ಕೈ ಹಿಡಿದ ಅದೃಷ್ಟ; ಟಾಸ್ ಗೆದ್ದ ರಜತ್.. ಪ್ಲೇಯಿಂಗ್​- 11ರಲ್ಲಿ ಸಣ್ಣ ಬದಲಾವಣೆ​!
Advertisment
  • RCBಗೆ ದೊಡ್ಡ ಅವಕಾಶ, ಅಭಿಮಾನಿಗಳ ಆಸೆನ ಈಡೇರಿಸುತ್ತಾ.?
  • ಕ್ಲಾಲಿಫೈಯರ್​- 1ರಲ್ಲಿ ಜಯ ಸಾಧಿಸಿದ ತಂಡಕ್ಕೆ ಫೈನಲ್​ ಟಿಕೆಟ್​ ಫಿಕ್ಸ್​
  • ನಾಯಕ ಸೇರಿ ಬಲಿಷ್ಠ ಆಟಗಾರರನ್ನ ಹೊಂದಿದ ಪಂಜಾಬ್​ ಕಿಂಗ್ಸ್​

ಕ್ಲಾಲಿಫೈಯರ್​- 1 ಪಂದ್ಯದಲ್ಲಿ ಬಲಿಷ್ಠ ಪಂಜಾಬ್ ಕಿಂಗ್ಸ್​ ಜೊತೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಅಖಾಡಕ್ಕೆ ಧುಮುಕಿದ್ದು ಕ್ಯಾಪ್ಟನ್​ ರಜತ್​ ಪಾಟಿದಾರ್ ಅವರು​ ಟಾಸ್ ಗೆದ್ದು ಮೊದಲು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.​

ಚಂಡೀಗಢ ಮುಲ್ಲನಪುರದ ನ್ಯೂ ಪಿಸಿಎ ಸ್ಟೇಡಿಯಂನ ಕ್ವಾಲಿಫೈಯರ್​- 1 ಪಂದ್ಯದಲ್ಲಿ ಆರ್​ಸಿಬಿ ನಾಯಕ ರಜತ್ ಪಾಟಿದಾರ್ ಅವರು​ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ್ದಾರೆ. ಹೀಗಾಗಿ ಎದುರಾಳಿ ಪಂಜಾಬ್ ಕಿಂಗ್ಸ್​ ಮೊದಲ ಬ್ಯಾಟಿಂಗ್ ಮಾಡಲಿದೆ.​ ಯುವ ಓಪನರ್​ ಜಾಕೋಬ್​ ಬೆಥೆಲ್, ವೇಗದ ಬೌಲರ್​ ಲುಂಗಿ ಎನ್​​ಗಿಡಿ ಅವರು ಈಗಾಗಲೇ ಕಳೆದ ಪಂದ್ಯದಿಂದ ಆರ್​ಸಿಬಿ ತಂಡದಲ್ಲಿ ಇಲ್ಲ. ಕನ್ನಡಿಗ ಪಡಿಕ್ಕಲ್ ಬದಲಿಗೆ ತಂಡಕ್ಕೆ ಮಯಾಂಕ್ ಅಗರ್ವಾಲ್ ಬಂದಿದ್ದು ಕಳೆದ ಪಂದ್ಯದಲ್ಲಿ ಯಶಸ್ವಿ ಬ್ಯಾಟಿಂಗ್ ಮಾಡಿದ್ದಾರೆ.

ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ತಂಡದ ಪ್ಲೇಯಿಂಗ್​-11 ರಲ್ಲಿ ಬದಲಾವಣೆ ಆಗಿದೆ. ನುವಾನ್ ತುಷಾರ ಬದಲಿಗೆ ಅನುಭವಿ ಬೌಲರ್​ ಜೋಶ್​ ಹ್ಯಾಜಲ್ವುಡ್​ ಮರಳಿರುವುದು ಆನೆ ಬಲ ಬಂದಂತೆ ಆಗಿದೆ. ಬ್ಯಾಟಿಂಗ್​ನಲ್ಲಿ ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್ ಅವರು ಪಂದ್ಯದಲ್ಲಿ ಓಪನರ್ ಆಗಿ ಕಣಕ್ಕೆ ಇಳಿಯಲಿದ್ದು ಎಂದಿನಂತೆ ಬ್ಯಾಟಿಂಗ್​ನಲ್ಲಿ ಆರ್ಭಟ ಮಾಡಲಿದ್ದಾರೆ. ಇನ್ನು 3ನೇ ಕ್ರಮಾಂಕದಲ್ಲಿ ಕನ್ನಡಿಗ ಮಯಾಂಕ್ ಅಗರವಾಲ್ ಬ್ಯಾಟಿಂಗ್ ಮಾಡಲಿದ್ದು ಬ್ಯಾಟರ್​ಗೆ ಉತ್ತಮ ಸಾಥ್ ಕೊಡುವ ಜೊತೆಗೆ ತಂಡಕ್ಕೆ ರನ್​ಗಳನ್ನು ತಂದುಕೊಡಲಿದ್ದಾರೆ. ಮಧ್ಯಮ ಬ್ಯಾಟಿಂಗ್​ನಲ್ಲಿ ನಾಯಕ ರಜತ್ ಪಾಟಿದಾರ್ ಮಹತ್ತರ ಪಾತ್ರ ವಹಿಸುವ ನಿರೀಕ್ಷೆ ಇದೆ. ರಜತ್ ಪಾಟಿದಾರ್ ಚೇತರಿಕೆ ಕಂಡಿದ್ದರಿಂದ ಜಿತೇಶ್ ಶರ್ಮಾ ಕೇವಲ ವಿಕೆಟ್​ ಕೀಪರ್ ಸ್ಥಾನದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ:IPL ಟ್ರೋಫಿ ಗೆಲ್ಲೋ ಹಾಟ್ ಫೇವರಿಟ್ ತಂಡ ಇದು.. ಈ ಬಾರಿ​ ಚೊಚ್ಚಲ ಕಪ್​ಗೆ ಮುತ್ತಿಕ್ಕುತ್ತಾ..?​

publive-image

ಆಲ್​ರೌಂಡರ್​ಗಳಾಗಿ ಲಿಯಾಮ್ ಲಿವಿಂಗ್‌ಸ್ಟೋನ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ ತಂಡದಲ್ಲಿದ್ದು ಎದುರಾಳಿಗೆ ಸವಾಲು ಹಾಕಲಿದ್ದಾರೆ. ಆರ್​ಸಿಬಿಯ ಬೌಲಿಂಗ್​ ಪಡೆಯನ್ನು ಜೋಶ್ ಹ್ಯಾಜಲ್ವುಡ್​, ಭುವನೇಶ್ವರ್ ಕುಮಾರ್ ಅವರು ಮುನ್ನಡೆಸಲಿದ್ದಾರೆ. ಜೊತೆಗೆ ಯಶ್ ದಯಾಲ್ ಸಾಥ್ ಕೊಡಲಿದ್ದಾರೆ. ಇನ್ನು ಟಿಮ್ ಡೇವಿಡ್ ಅವರು ಈ ಪಂದ್ಯದಲ್ಲಿ ಆಡುತ್ತಿಲ್ಲ.

ಎದುರಾಳಿ ಪಂಜಾಬ್​ ಕಿಂಗ್ಸ್​ ಕೂಡ ಬಲಿಷ್ಠವಾಗಿದೆ. ಐಪಿಎಲ್ ಟೂರ್ನಿಯಲ್ಲಿ ಎಲ್ಲ ತಂಡಗಳಿಗೂ ಸೋಲಿನ ರುಚಿ ಸೋಲಿಸಿ ಈ ವರೆಗೆ ಪಂಜಾಬ್​ ಬಂದಿದೆ. ಓಪನರ್ಸ್​, ಮಿಡಲ್ ಬ್ಯಾಟರ್ಸ್​, ಫಿನಿಷರ್​ಗಳು ಸೇರಿದಂತೆ ಶಕ್ತಿಯುತವಾದ ಬೌಲಿಂಗ್​ ಪಡೆಯನ್ನು ಹೊಂದಿದೆ. ಕ್ಯಾಪ್ಟನ್​ ಶ್ರೇಯಸ್​ ಅಯ್ಯರ್​ ಪಂದ್ಯದಲ್ಲಿ ಚಾಣಕ್ಷತೆ ತೋರುವ ಆಟಗಾರ. ಹೀಗಾಗಿ ಆರ್​ಸಿಬಿ ಎದುರಾಳಿಯ ತಂತ್ರಗಳನ್ನು ಅರಿತು ಪಂದ್ಯ ಗೆಲ್ಲುವ ಕಡೆಗೆ ಮುನ್ನಗ್ಗಬೇಕು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್- 11

ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ಜೋಶ್ ಹ್ಯಾಜಲ್‌ವುಡ್, ಸುಯಶ್ ಶರ್ಮಾ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment