/newsfirstlive-kannada/media/post_attachments/wp-content/uploads/2024/11/RCB-5.jpg)
ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಯಲ್ ತಂಡವನ್ನ ಕಟ್ಟಿದೆ. ಈಗಾಗಲೇ ಸೀಸನ್-18ರ ಸಿದ್ದತೆಯನ್ನು ಆರಂಭಿಸಿರುವ ಆರ್ಸಿಬಿ ಕ್ಯಾಪ್ಟನ್ ಯಾರ್ ಆಗ್ತಾರೆ ಅನ್ನೋ ಗುಟ್ಟು ಮಾತ್ರ ಬಿಟ್ಟು ಕೊಡ್ತಿಲ್ಲ. ಇದು ಸಹಜವಾಗೇ ಫ್ಯಾನ್ಸ್ ವಲಯದಲ್ಲಿ ಮತ್ತಷ್ಟು ಕುತೂಹಲ ಹುಟ್ಟಿಹಾಕಿದೆ.
ಬಲಿಷ್ಠ ತಂಡ ಕಟ್ಟಿದ್ದಾಯ್ತು. ಸೀಸನ್-18ರ ಐಪಿಎಲ್ ಟೂರ್ನಿಗೆ ಆರ್ಸಿಬಿ ರಣಕಹಳೆ ಮೊಳಗಿಸಿದ್ದಾಯ್ತು. ಆರ್ಸಿಬಿಯ ಮುಂದಿನ ಕ್ಯಾಪ್ಟನ್ ಯಾರ್ ಆಗ್ತಾರೆ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆ ಮಾತ್ರ, ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಆರ್ಸಿಬಿಯ ನಾಯಕತ್ವದ ಪಟ್ಟಕ್ಕೇರಲು ತಂಡದಲ್ಲಿ ಭಾರೀ ಪೈಪೋಟಿಯೇ ನಡೆಯುತ್ತಿದ್ದು, ಕ್ಯಾಪ್ಟನ್ಸಿ ರೇಸ್ನಲ್ಲಿ ಯಾರಿಗೆ ಅಧಿಕಾರ ಸಿಗುತ್ತೆಂಬ ಕುತೂಹಲ ಫ್ಯಾನ್ಸ್ನಲ್ಲೂ ಮನೆ ಮಾಡಿದೆ.
ಇದನ್ನೂ ಓದಿ:ಆಸ್ಟ್ರೇಲಿಯಾದ ವಿರುದ್ಧ ಮಹತ್ವದ ಟೆಸ್ಟ್; ಭಾರತ ತಂಡದ ಮಾನ ಕಾಪಾಡಿದ ಕೆ.ಎಲ್ ರಾಹುಲ್
ವಿರಾಟ್ ಕೊಹ್ಲಿ
ಆರ್ಸಿಬಿಯ ಫಸ್ಟ್ ಚಾಯ್ಸ್ ಕ್ಯಾಪ್ಟನ್. ಇದಕ್ಕೆ ಕಾರಣ ಆರ್ಸಿಬಿಯ ಯಶಸ್ವಿ ನಾಯಕ ಎಂಬ ಟ್ಯಾಗ್ ಲೈನ್ ಮಾತ್ರವಲ್ಲ. ಮುನ್ನುಗ್ಗಿ ಹೊಡೆಯುವ ಡೇರ್ ಡೆವಿಲ್ ಕ್ಯಾಪ್ಟನ್ಸಿಯ ಗುಣವೂ ಒಂದಾಗಿದೆ. ಲೀಡರ್ಶಿಪ್ ಕ್ವಾಲಿಟಿ ಹೊಂದಿರುವ ಕೊಹ್ಲಿ, ಇತರೆ ಆಟಗಾರರಿಗೂ ರೋಲ್ ಮಾಡೆಲ್ ಮತ್ತು ಮೋಟಿವೇಟರ್. ಹೀಗಾಗಿ ಮತ್ತೆ ವಿರಾಟ್ ನಾಯಕತ್ವದ ಪಟ್ಟಕ್ಕೇರಿದ್ರೆ, ಪ್ರತಿ ಆಟಗಾರ ವಿರಾಟ್ಗಾಗಿ ಕಪ್ ಗೆಲ್ಲಬೇಕೆಂಬ ಎಫರ್ಟ್ ಹಾಕೋದ್ರಲ್ಲಿ ಡೌಟೇ ಇಲ್ಲ. ನಾಯಕತ್ವದಿಂದ ಕೆಳಗಿಳಿದಿರುವ ಕೊಹ್ಲಿ, ಮತ್ತೆ ನಾಯಕತ್ವದ ಪಟ್ಟಕ್ಕೇರ್ತಾರಾ ಅನ್ನೋದೇ ಸದ್ಯದ ಪ್ರಶ್ನೆ.
ಭುವನೇಶ್ವರ್ ಕುಮಾರ್
ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್, ಕೂಲ್ ಆ್ಯಂಡ್ ಕಾಮ್ ಕ್ಯಾಪ್ಟನ್ ಆಗೋದ್ರಲ್ಲಿ ಡೌಟೇ ಇಲ್ಲ. ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಅನುಭವ ಹೊಂದಿರುವ ಈತ, ಟಿ20 ಫಾರ್ಮೆಟ್ಗೆ ಹೇಳಿ ಮಾಡಿಸಿರುವ ಬೌಲರ್. ಎದುರಾಳಿ ಬೌಟರ್ಗಳನ್ನು ಅದ್ಬುತವಾಗಿ ರೀಡ್ ಮಾಡಬಲ್ಲರು. ದೇಶಿ ಕ್ರಿಕೆಟ್ನಲ್ಲಿ ಉತ್ತರ ಪ್ರದೇಶ ತಂಡವನ್ನು ಮುನ್ನಡೆಸುವ ಕಲೆಗಾರಿಕೆ ಹೊಂದಿರುವ ಭುವಿ, ಓತ್ತಡದ ಸಂದರ್ಭಗಳನ್ನು ಅದ್ಬುತವಾಗಿ ನಿಭಾಯಿಸಬಲ್ಲರು. ಹೀಗಾಗಿ ಭುವಿ, 2ನೇ ಕ್ಯಾಪ್ಟನ್ ಆಯ್ಕೆ ಆಗೋದ್ರಲ್ಲಿ ಅನುಮಾನ ಇಲ್ಲ. ಆದ್ರೆ, ವಯಸ್ಸಿನ ಕಾರಣಕ್ಕೆ ಹಿಂದೇಟು ಹಾಕಿದರು ಅಚ್ಚರಿ ಇಲ್ಲ.
ಇದನ್ನೂ ಓದಿ:ಕನ್ನಡಿಗನಿಗೆ ಸುವರ್ಣಾವಕಾಶ: RCB ಸೇರಿದ ಬೆನ್ನಲ್ಲೇ ದೇವದತ್ ಪಡಿಕ್ಕಲ್ಗೆ ಜಾಕ್ಪಾಟ್
ರಜತ್ ಪಾಟಿದಾರ್
ರಜತ್ ಪಾಟಿದಾರ್, ಆರ್ಸಿಬಿಯ ನ್ಯೂ ಲೀಡರ್ ಆಗೋ ಚಾನ್ಸ್ ದಟ್ಟವಾಗಿದೆ. ಆರ್ಸಿಬಿ ಪರ ಪ್ರಾಮೀಸಿಂಗ್ ಪರ್ಫಾಮೆನ್ಸ್ ನೀಡಿರುವ ರಜತ್, ಸೈಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲಿ ನಾಯಕನಾಗಿ ಗಮನ ಸೆಳೆದಿದ್ದಾರೆ. ತಂಡವನ್ನು ಫೈನಲ್ಗೆ ಕೊಂಡೊಯ್ಯುದಿರುವ ಪಾಟಿದಾರ್, ಅದ್ಬುತ ನಾಯಕತ್ವದ ಗುಣಗಳನ್ನು ಹೊರಹಾಕಿದ್ದಾರೆ. ಲಾಂಗ್ ಟರ್ಮ್ ಲೀಡರ್ಶಿಪ್ಗಾಗಿ ರಜತ್ ಪಾಟಿದಾರ್ ಬೆಸ್ಟ್ ಚಾಯ್ಸ್ ಅನ್ನೋದ್ರಲ್ಲಿ ನೋ ಡೌಟ್.
ಕೃನಾಲ್ ಪಾಂಡ್ಯ
ಕೃನಾಲ್ ಪಾಂಡ್ಯ, ದೇಶಿ ಕ್ರಿಕೆಟ್ನಲ್ಲಿ ಬರೋಡ ತಂಡದ ನಾಯಕ. ಐಪಿಎಲ್ನಲ್ಲಿ ಲಕ್ನೋ ತಂಡದ ಉಪ ನಾಯಕನೂ ಆಗಿರುವ ಕೃನಾಲ್, ಗೇಮ್ ಚೇಂಜರ್ ಆ್ಯಂಡ್ ಮ್ಯಾಚ್ ವಿನ್ನರ್ ಪ್ಲೇಯರ್. ದೇಶಿ ಕ್ರಿಕೆಟ್ನಲ್ಲಿ ತಂಡವನ್ನು ಮುನ್ನಡೆಸಿರುವ ಅನುಭವವನ್ನು ಹೊಂದಿರುವ ಈತ, ವಿರಾಟ್ ಕೊಹ್ಲಿಯಷ್ಟೇ ಅಗ್ರೆಸ್ಸಿವ್.
ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಕ್ಯಾಪ್ಟನ್ಸಿ ರೇಸ್ನಲ್ಲಿ ನಾಲ್ವರ ಹೆಸರು ಕೇಳಿಸ್ತಿದೆ. ಮ್ಯಾನೇಜ್ಮೆಂಟ್ನ ಒಲವು ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟಿದಾರ್ ಮೇಲಿದ್ದಂತೆ ಕಾಣಿಸ್ತಿದೆ. ಅಂತಿಮವಾಗಿ ಯಾರಿಗೆ ಪಟ್ಟ ಕಟ್ಟುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ಇದನ್ನೂ ಓದಿ:ಹಾರ್ದಿಕ್ ಪಾಂಡ್ಯ ಸೆಕೆಂಡ್ ಮ್ಯಾರೇಜ್.. ಮಾಡೆಲ್ ಕೈಲಿ ಜೆನ್ನರ್ ಯಾರು, 2 ಮಕ್ಕಳ ತಾಯಿನಾ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್