‘ಈ ಸಲ ಕಪ್ ನಮ್ದೇ ಆಗಿದೆ..’ ಅಭಿಮಾನಿಗಳ ಸಂಭ್ರಮ ಹೇಗಿದೆ..? Photos

author-image
Ganesh
Updated On
‘ಈ ಸಲ ಕಪ್ ನಮ್ದೇ ಆಗಿದೆ..’ ಅಭಿಮಾನಿಗಳ ಸಂಭ್ರಮ ಹೇಗಿದೆ..? Photos
Advertisment
  • ಐಪಿಎಲ್-2025 ಟ್ರೋಫಿ ಗೆದ್ದು ಸಂಭ್ರಮಿಸಿದ ಆರ್​ಸಿಬಿ
  • ಬೆಂಗಳೂರಲ್ಲಿ ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದ ಫ್ಯಾನ್ಸ್
  • ನಗರದ ಪ್ರಮುಖ ರಸ್ತೆಗಳಲ್ಲಿ ಫ್ಯಾನ್ಸ್ ಮಸ್ತ್ ಡ್ಯಾನ್ಸ್

‘ಈ ಸಲ ಕಪ್ ನಮ್ದೇ ಆಗಿದೆ’. ಐಪಿಎಲ್ ಟ್ರೋಫಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುತ್ತಿಡುತ್ತಿದ್ದಂತೆಯೇ ಅಭಿಮಾನಿಗಳ ಸಂಭ್ರಮ ಸಖತ್ ಜೋರಾಗಿದೆ. ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗ್ತಿದೆ.

ಇದನ್ನೂ ಓದಿ: RCB vs PBKS: ಕಾರಿನಲ್ಲೇ ಫೈನಲ್ ಮ್ಯಾಚ್ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ

publive-image

ರಸ್ತೆಗಳಲ್ಲಿ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ. ಬರೋಬ್ಬರಿ 18 ವರ್ಷಗಳ ಬಳಿಕ ಟ್ರೋಫಿಯ ಬರ ನೀಗಿದೆ. ಕೊಹ್ಲಿ ಕಂಡ ಕನಸು ನನಸಾಗಿದೆ. ಅಂದ್ಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್​​ನಲ್ಲಿ ಪಂಜಾಬ್ ಕಿಂಗ್ಸ್​ ಎದುರಿಸಿತ್ತು.
ಟಾಸ್ ಸೋತ ಆರ್​ಸಿಬಿ ಮೊದಲು ಬ್ಯಾಟಿಂಗ್​ಗೆ ಬಂದಿತ್ತು. ಆರಂಭದಲ್ಲೇ ಕೈಲ್ ಜೇಮಿಸನ್ ಅವರು ಆರ್​ಸಿಬಿಗೆ ಆಘಾತ ನೀಡಿದರು. ಆರ್​ಸಿಬಿ 18 ರನ್​ಗಳಿಸಿ ಆಡ್ತಿದ್ದಾಗ 1.4ನೇ ಓವರ್​ನಲ್ಲಿ ಫಿಲ್ ಸಾಲ್ಟ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಸಾಲ್ಟ್ 9 ಬಾಲ್​ನಲ್ಲಿ 16 ರನ್​ಗಳಿಸಿ ಕ್ರೀಸ್​ನಿಂದ ನಿರ್ಗಮಿಸಿದರು. ​

ಇದನ್ನೂ ಓದಿ: ಕೊನೆಗೂ ಐಪಿಎಲ್ ಟ್ರೋಫಿಗೆ ಮುತ್ತಿಟ್ಟ ಆರ್​ಸಿಬಿ.. 18 ವರ್ಷಗಳ ಕನಸು ಅಂತೂ ನನಸು..!

publive-image

ಟಾಸ್ ಸೋತ ಆರ್​ಸಿಬಿ ಮೊದಲು ಬ್ಯಾಟಿಂಗ್​ಗೆ ಬಂದಿತ್ತು. ಆರಂಭದಲ್ಲೇ ಕೈಲ್ ಜೇಮಿಸನ್ ಅವರು ಆರ್​ಸಿಬಿಗೆ ಆಘಾತ ನೀಡಿದರು. ಆರ್​ಸಿಬಿ 18 ರನ್​ಗಳಿಸಿ ಆಡ್ತಿದ್ದಾಗ 1.4ನೇ ಓವರ್​ನಲ್ಲಿ ಫಿಲ್ ಸಾಲ್ಟ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಸಾಲ್ಟ್ 9 ಬಾಲ್​ನಲ್ಲಿ 16 ರನ್​ಗಳಿಸಿ ಕ್ರೀಸ್​ನಿಂದ ನಿರ್ಗಮಿಸಿದರು.

publive-image

ಕೊಹ್ಲಿ ಜವಾಬ್ದಾರಿಯುತ ಆಟ..

16 ಬಾಲ್​ನಲ್ಲಿ 26 ರನ್​ಗಳಿಸಿ ಹೊರನಡೆದರು. ವಿಕೆಟ್ ಮೇಲೆ ವಿಕೆಟ್ ಬೀಳುತ್ತಿದ್ದರೂ ವಿರಾಟ್ ಕೊಹ್ಲಿ ಕ್ರೀಸ್ ಕಚ್ಚಿ ನಿಂತಿದ್ದರು. 35 ಬಾಲ್ ಎದುರಿಸಿದ ವಿರಾಟ್ 43 ರನ್​ಗಳಿಸಿ ಒಮರ್ ಜಾಯ್​​ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಲಿಯಾಮ್ ಲಿವಿಂಗ್​ಸ್ಟೋನ್ 2 ಸಿಕ್ಸರ್​ನೊಂದಿಗೆ 25 ರನ್​ಗಳ ಕಾಣಿಕೆ ನೀಡಿದರು. ಉಪನಾಯಕ 240 ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟ್ ಬಿಸಿ 10 ಬಾಲ್​ನಲ್ಲಿ 24 ರನ್​ಗಳ ಕಾಣಿಕೆ ನೀಡಿದರು. ಶೆಫಾರ್ಡ್​ 17 ರನ್​ಗಳಿಸಿ ಔಟ್ ಆದರೆ, ಕೃನಾಲ್ ಪಾಂಡ್ಯ 4 ರನ್​ಗಳಿಸಿ ಔಟ್ ಆದರು. ಕೊನೆಯದಾಗಿ ಆರ್​​​ಸಿಬಿ 190 ರನ್​ಗಳಿಸಿತ್ತು.

ಇದನ್ನೂ ಓದಿ: ಆರ್​ಸಿಬಿ ಜರ್ಸಿ, ಪಂಜಾಬ್ ಪೇಟ.. ಗೇಲ್​ ಕಂಡು ಗಾಬರಿಯಾದ ಕ್ರಿಕೆಟ್ ಸ್ಟೇಡಿಯಂ..!

publive-image

ಆ ಮೂಲಕ ಪಂಜಾಬ್ ಕಿಂಗ್ಸ್ ಗೆಲುವಿಗೆ 191 ರನ್​ಗಳು ಬೇಕಾಗಿತ್ತು. ಆದರೆ ಆರ್​ಸಿಬಿ ಬೌಲರ್​ಗಳ ಮುಂದೆ ಪಂಜಾಬ್ ಕಿಂಗ್ಸ್​ ಬ್ಯಾಟರ್​​ಗಳ ಆಟ ನಡೆಯಲಿಲ್ಲ. ಕೊನೆಯದಾಗಿ 20 ಓವರ್​ಗೆ 7 ವಿಕೆಟ್ ಕಳೆದುಕೊಂಡು 184 ರನ್​ಗಳಿಸಿ ಶ್ರೇಯಸ್ ಅಯ್ಯರ್ ಪಡೆ ಸೋಲಿಗೆ ಶರಣಾಯ್ತು. ಕಿಂಗ್ ವಿರಾಟ್ ಕೊಹ್ಲಿ ಬಳಗ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿತು.

ಇದನ್ನೂ ಓದಿ: 18 ವರ್ಷದ ಕನಸು ಕೊನೆಗೂ ನನಸು.. ಟ್ರೋಫಿ ಗೆಲ್ತಿದ್ದಂತೆಯೇ ಕೊಹ್ಲಿ ಕಣ್ಣೀರು.. VIDEO

publive-image

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment