ಆರ್​​ಸಿಬಿ ಮುಂದಿನ ಕ್ಯಾಪ್ಟನ್​​ ಯಾರು? ಎಂದು ಸ್ಫೋಟಕ ಸುಳಿವು ಕೊಟ್ಟ ಮುಖ್ಯ ಕೋಚ್​; ಕೊಹ್ಲಿ ಕಥೆಯೇನು?

author-image
Ganesh Nachikethu
Updated On
ಆರ್​​ಸಿಬಿ ಮುಂದಿನ ಕ್ಯಾಪ್ಟನ್​​ ಯಾರು? ಎಂದು ಸ್ಫೋಟಕ ಸುಳಿವು ಕೊಟ್ಟ ಮುಖ್ಯ ಕೋಚ್​; ಕೊಹ್ಲಿ ಕಥೆಯೇನು?
Advertisment
  • ಆರ್​ಸಿಬಿ ಕ್ಯಾಪ್ಟನ್ಸಿ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ಮುಖ್ಯ ಕೋಚ್​​
  • ಮುಂದಿನ ಸೀಸನ್​​ನಲ್ಲಿ ಹೊಸ ನಾಯಕನೊಂದಿಗೆ ಆರ್​ಸಿಬಿ ಕಣಕ್ಕೆ
  • ಕೊಹ್ಲಿ ಆರ್​​ಸಿಬಿ ಕ್ಯಾಪ್ಟನ್​ ಆಗ್ತಾರಾ? ಎಂಬುದಕ್ಕೆ ಇಲ್ಲಿದೆ ಉತ್ತರ!

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜು ಮುಗಿದಿದೆ. ಮುಂದಿನ ಸೀಸನ್​​ ಶುರುವಾಗಲು ಇನ್ನೇನು ಕೇವಲು ಒಂದೂವರೆ ತಿಂಗಳು ಬಾಕಿ ಇದ್ದು, ಬಹುತೇಕ ತಂಡಗಳು ಹೊಸ ನಾಯಕನೊಂದಿಗೆ ಕಣಕ್ಕಿಳಿಯಲಿವೆ. ಆರ್​​ಸಿಬಿ ಕೂಡ ಹೊಸ ಕ್ಯಾಪ್ಟನ್​ ಜತೆ ಕಣಕ್ಕಿಳಿಯೋ ಸಾಧ್ಯತೆ ಇದ್ದು, ಕೊಹ್ಲಿ ಹೆಸರು ಕೇಳಿ ಬಂದಿದೆ.

ಈ ಬಗ್ಗೆ ಆರ್​​ಸಿಬಿ ಮುಖ್ಯ ಕೋಚ್‌ ಆ್ಯಂಡಿ ಫ್ಲವರ್ ಮಾತಾಡಿದ್ದಾರೆ. ನಮ್ಮ ನಿರ್ಧಾರ ಮುಂದಿನ 3 ವರ್ಷಗಳು ಹೇಗೆ ಇರುತ್ತವೆ ಅನ್ನೋದರ ಮೇಲೆ ಅವಲಂಬಿಸಿರುತ್ತದೆ. ನಾಯಕತ್ವದ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ. ಅಲ್ಲಿಯವರೆಗೂ ಎಲ್ಲರೂ ಕಾಯಲೇಬೇಕು ಎಂದಿದ್ದಾರೆ.

publive-image

ಮ್ಯಾನೇಜ್‌ಮೆಂಟ್ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲು ಬಯಸಿದೆ. ಯುವ ಆಟಗಾರನಿಗೆ ನಾಯಕತ್ವ ನೀಡಬೇಕು ಎನ್ನುವ ಮಾತುಗಳು ಕೇಳಿ ಬಂದಿವೆ. ಕೊಹ್ಲಿ ಕ್ಯಾಪ್ಟನ್​ ಆದ್ರೆ ಮುಂದಿನ ಮೂರ್ನಾಲ್ಕು ವರ್ಷಗಳವರೆಗೆ ತಂಡ ಮುನ್ನಡೆಸಬಹುದು. ಕೊಹ್ಲಿ ಅಂತಾರಾಷ್ಟ್ರೀಯ ಟಿ20ಯಿಂದ ನಿವೃತ್ತಿಯಾಗಿದ್ದು, ಈಗ ಆರಾಮಾಗಿದ್ದಾರೆ. ಇವರು ಒಪ್ಪಿದರೆ ಅವರಿಗೆ ಕ್ಯಾಪ್ಸನ್ಸಿ ನೀಡುತ್ತೇವೆ ಎಂದಿದ್ದಾರೆ ಆ್ಯಂಡಿ ಫ್ಲವರ್​.

ಐಪಿಎಲ್-2025 ಹರಾಜಿನಲ್ಲಿ ಆರ್‌ಸಿಬಿ ಯಾವುದೇ ನಾಯಕನ ಖರೀದಿಸಲಿಲ್ಲ. ಹೀಗಾಗಿ ನಾಯಕತ್ವದ ಜವಾಬ್ದಾರಿಯನ್ನು ವಿರಾಟ್‌ಗೆ ಹಸ್ತಾಂತರಿಸುವ ಚರ್ಚೆ ಜೋರಾಗಿದೆ. ಕೆ.ಎಲ್.ರಾಹುಲ್ ಅವರನ್ನು ಖರೀದಿಸಿ ತಂಡದ ನಾಯಕತ್ವ ನೀಡಲಾಗುವುದು ಎಂದು ಹೇಳಲಾಗುತ್ತಿತ್ತು. ಆದರೆ ಹರಾಜಿನಲ್ಲಿ ಕೆ.ಎಲ್​ ರಾಹುಲ್​​ ಮೇಲೆ ಆರ್​​ಸಿಬಿ ಹಣ ಸುರಿಯಲಿಲ್ಲ. ಹೀಗಾಗಿ ಆರ್​ಸಿಬಿ ಕ್ಯಾಪ್ಟನ್ಸಿ ರೇಸ್​ನಲ್ಲಿ ಕೊಹ್ಲಿ ನಂತರ ರಜತ್​ ಪಾಟಿದಾರ್​ ಹೆಸರು ಕೇಳಿ ಬಂದಿದೆ.

ಇದನ್ನೂ ಓದಿ:ಗ್ರಾಹಕರಿಗೆ ಬಿಗ್​ ಶಾಕ್​​; ಮಾರುತಿ ಕಾರುಗಳ ಬೆಲೆಯಲ್ಲಿ ಬರೋಬ್ಬರಿ 32 ಸಾವಿರ ಏರಿಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment