RCBಗೆ ಟ್ರೋಫಿ ಗೆಲ್ಲಿಸಿಕೊಟ್ಟ ಖುಷಿಯಲ್ಲಿ ಮುಖ್ಯ ಕೋಚ್​ ಆ್ಯಂಡಿ ಫ್ಲವರ್ ಹೋಗಿದ್ದು ಎಲ್ಲಿಗೆ..?

author-image
Bheemappa
RCBಗೆ ಟ್ರೋಫಿ ಗೆಲ್ಲಿಸಿಕೊಟ್ಟ ಖುಷಿಯಲ್ಲಿ ಮುಖ್ಯ ಕೋಚ್​ ಆ್ಯಂಡಿ ಫ್ಲವರ್ ಹೋಗಿದ್ದು ಎಲ್ಲಿಗೆ..?
Advertisment
  • RCB ಮುಖ್ಯ ಕೋಚ್ ಭೇಟಿ ಕೊಟ್ಟಿದ್ದು ಯಾವ ಪುಣ್ಯಕ್ಷೇತ್ರಕ್ಕೆ?
  • 17 ಬಾರಿ ಟ್ರೋಫಿಗೆ ಮುತ್ತಿಡದ ಆರ್​ಸಿಬಿ, 18ನೇ ಬಾರಿ ಯಶಸ್ವಿ
  • ಯೋಗ ಕೇವಲ ಒಂದು ಗಂಟೆಯಲ್ಲಿ ಕಲಿತುಕೊಳ್ಳುವುದು ಅಲ್ಲ

ಮುಖ್ಯ ಕೋಚ್ ಆ್ಯಂಡಿ ಫ್ಲವರ್ ನೇತೃತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೇ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಕಳೆದ 17 ವರ್ಷಗಳಿಂದ ಆಗದಿದ್ದನ್ನ ಆ್ಯಂಡಿ ಫ್ಲವರ್ ಕೋಚ್ ಆಗುತ್ತಿದ್ದಂತೆ ಆರ್​ಸಿಬಿ ಟ್ರೋಫಿ ಎತ್ತಿ ಹಿಡಿದಿದೆ. ಇದೆಲ್ಲಾ ಈಗಿರುವಾಗಲೇ ಮುಖ್ಯ ಕೋಚ್​ ಆ್ಯಂಡಿ ಫ್ಲವರ್ ಅವರು ಇನ್ನು ಭಾರತದಲ್ಲಿದ್ದು ಉತ್ತರಾಖಂಡದ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.

ಜಿಂಬಾಬ್ವೆ ತಂಡದ ಮಾಜಿ ಕ್ಯಾಪ್ಟನ್​ ಹಾಗೂ ಆರ್​ಸಿಬಿ ತಂಡದ ಹೆಡ್ ಕೋಚ್ ಆ್ಯಂಡಿ ಫ್ಲವರ್, ಉತ್ತರಾಖಂಡದ ಪುಣ್ಯಕ್ಷೇತ್ರ ಋಷಿಕೇಶಕ್ಕೆ ಭೇಟಿ ನೀಡಿದ್ದಾರೆ. ಋಷಿಕೇಶದ ಪರ್ಮಾರ್ಥ ನಿಕೇತನ ಆಶ್ರಮದ ಆಧ್ಯಾತ್ಮಿಕ ಗುರುಗಳಾದ ಸ್ವಾಮಿ ಚಿದಾನಂದ ಸರಸ್ವತಿ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಗುರುಗಳಿಂದ ಆಧ್ಯಾತ್ಮ ಹಾಗೂ ಯೋಗದ ಉಪದೇಶಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ:Video; ಸಿಕ್ಸರ್​ ಸಿಡಿಸಿ ಸೆಂಚುರಿ ಬಾರಿಸಿದ ರಿಷಭ್ ಪಂತ್, ಫ್ರಂಟ್​ಫ್ಲಿಪ್​ ಮಾಡಿ ಸೆಲೆಬ್ರೆಷನ್.. ಕನ್ನಡಿಗ ಡಕೌಟ್​!

publive-image

ಋಷಿಕೇಶಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಆರ್​ಸಿಬಿ ತಂಡದ ಹೆಡ್ ಕೋಚ್ ಆ್ಯಂಡಿ ಫ್ಲವರ್ ಅವರು, ಕಳೆದ ಎರಡು ವಾರಗಳಿಂದ ನಾನು ಇಲ್ಲಿ ಇದ್ದೇನೆ. ಇಲ್ಲಿ ಯೋಗ ಕುರಿತು ಸಾಕಷ್ಟು ತಿಳಿದುಕೊಳ್ಳುತ್ತಿದ್ದೇನೆ. ಆದರೆ ಯೋಗ ಕೇವಲ ಒಂದು ಗಂಟೆಯಲ್ಲಿ ಕಲಿತುಕೊಳ್ಳುವುದು ಅಲ್ಲ. ಇದು ಲಕ್ಷಾಂತರ ಜನರ ಜೀವನದ ವಿಧಾನ ಆಗಿದೆ. ನಾನು ನಿಜವಾಗಲೂ ದೈಹಿಕವಾಗಿ ಮಾಡಿದ ಅಭ್ಯಾಸಗಳನ್ನು ಎಂಜಾಯ್ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಅಂತರಾಷ್ಟ್ರೀಯ ಯೋಗ ದಿನದಂದೇ ಗುರುಗಳಾದ ಸ್ವಾಮಿ ಚಿದಾನಂದ ಸರಸ್ವತಿ ಅವರನ್ನು ಭೇಟಿ ಮಾಡಿರುವುದು ನನ್ನ ಅದೃಷ್ಟ. ಇದೇ ದಿನದಂದೇ ಅವರನ್ನು ಮೀಟ್ ಮಾಡುವುದು ಆಕಸ್ಮಿಕ ಅಷ್ಟೇ. ಅವರಿಂದ ಹಲವಾರು ವಿಷಯಗಳನ್ನು ತಿಳಿದುಕೊಂಡಿದ್ದೇನೆ. ಮನಸಿಗೆ ಶಾಂತಿ, ಸಮೃದ್ಧಿ ಎಲ್ಲವೂ ಲಭಿಸುತ್ತವೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment