/newsfirstlive-kannada/media/post_attachments/wp-content/uploads/2025/05/RCB-8.jpg)
ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್​ ನಡುವಿನ ಪಂದ್ಯ ಮಳೆಯಿಂದ ನಡೆಯಲಿಲ್ಲ. ಇದರಿಂದ ಆರ್​ಸಿಬಿ 12 ಪಂದ್ಯಗಳಿಂದ 17 ಅಂಕ ಪಡೆದು ಟೇಬಲ್​ ಟಾಪರ್ ಆಗಿದೆ.
ಆದರೆ ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ದರ್ಬಾರ್ ನೋಡಬೇಕು ಅಂತಾ ಬಂದಿದ್ದ ಅಭಿಮಾನಿಗಳಿಗೆ ಭಾರೀ ನಿರಾಸೆ ಆಗಿದೆ. ಸಾವಿರಾರು ರೂಪಾಯಿ ಕೊಟ್ಟ ಮ್ಯಾಚ್ ವೀಕ್ಷಿಸಲು ಬಂದರೆ ಮಳೆರಾಯ ಅಡ್ಡಿಮಾಡಿದ. ಸುಮ್ಮನೆ ಹಣ ಕೊಟ್ಟು ಬಂದ್ವಿ ಅಂತಾ ತಲೆ ಕೆಡಿಸಿಕೊಳ್ತೀರೋರಿಗೆ ಆರ್​ಸಿಬಿ ಗುಡ್​ನ್ಯೂಸ್ ನೀಡಿದೆ.
ಇದನ್ನೂ ಓದಿ: ‘ನನ್ನ ಸ್ಟ್ರೆಂತ್, ವೀಕ್ನೆಸ್, ಬೆಸ್ಟ್​ ಫ್ರೆಂಡ್ ಎಲ್ಲಾನೂ’.. ವೇದಿಕೆ ಮೇಲೆ ಗಳಗಳನೇ ಕಣ್ಣೀರಿಟ್ಟ ಗಗನಾ
ನಿನ್ನೆ ಮ್ಯಾಚ್ ಕ್ಯಾನ್ಸಲ್ ಆದ ಕಾರಣವನ್ನು, ವೀಕ್ಷಕರು ನೀಡಿದ ಹಣವನ್ನು ಮರುಪಾವತಿ ಮಾಡಲಾಗುವುದು ಎಂದು ತಿಳಿಸಿದೆ. ಅಂತೆಯೇ ಯಾರೆಲ್ಲ ಮ್ಯಾಚ್ ವೀಕ್ಷಿಸಲು ಎಷ್ಟೆಲ್ಲ ಹಣ ಕೊಟ್ಟು ಹೋಗಿದ್ದರೋ, ಅವರಿಗೆ ಅಷ್ಟೂ ಹಣ ಪಾವತಿ ಆಗಲಿದೆ. ಇಲ್ಲಿಯವರೆಗೆ 12 ಪಂದ್ಯಗಳನ್ನು ಆಡಿರುವ ಆರ್​ಸಿಬಿ, 8 ಮ್ಯಾಚ್​​ನಲ್ಲಿ ಗೆದ್ದು, 3 ಪಂದ್ಯಗಳನ್ನು ಮಾತ್ರ ಸೋತಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಆರ್​ಸಿಬಿ ಕೋಟಾದಲ್ಲಿ ಇನ್ನೂ ಎರಡು ಪಂದ್ಯಗಳಿದ್ದು, ಪ್ಲೇ-ಆಫ್​​ ಪ್ರವೇಶ ಮಾಡಬೇಕು ಅಂದರೆ ಒಂದು ಮ್ಯಾಚ್​ ಗೆಲ್ಲಲೇಬೇಕಿದೆ.
RCB confirms refund for the RCB Vs KKR match last night. pic.twitter.com/GBHL6yb4le
— Mufaddal Vohra (@mufaddal_vohra) May 18, 2025
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್