/newsfirstlive-kannada/media/post_attachments/wp-content/uploads/2025/06/KOHLI-3.jpg)
ಐಪಿಎಲ್ ಟ್ರೋಫಿಗಾಗಿ 18 ವರ್ಷಗಳ ಕಾಯುವಿಕೆ ಕೊನೆಗೂ ಮುಗಿದಿದೆ. ಪಂಜಾಬ್ ಕಿಂಗ್ಸ್ ಸೋಲಿಸಿ ಕಪ್ಗೆ ಮುತ್ತಿಡುವ ಮೂಲಕ ಆರ್ಸಿಬಿ ಚಾಂಪಿಯನ್ ಆಗಿದೆ.
ಗುಜರಾತ್ನ ಶ್ರೀ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಆರ್ಸಿಬಿ ಪಂಜಾಬ್ ಕಿಂಗ್ಸ್ ಸೋಲಿಸುವ ಮೂಲಕ ಟ್ರೋಫಿಗೆ ಮುತ್ತಿಟ್ಟಿತು. ನಂತರ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಆರ್ಸಿಬಿ ಆಟಗಾರರು ಟ್ರೋಫಿ ಸ್ವೀಕರಿಸಿದ ಸಂಭ್ರಮಿಸಿದರು.
ಆರ್ಸಿಬಿ ಸಂಭ್ರಮದ ಝಲಕ್ ಇಲ್ಲಿದೆ.
LEGACY. ✨
pic.twitter.com/c6izUeAZNE— Royal Challengers Bengaluru (@RCBTweets) June 3, 2025
ಟಾಸ್ ಸೋತ ಆರ್ಸಿಬಿ ಮೊದಲು ಬ್ಯಾಟಿಂಗ್ಗೆ ಬಂದಿತ್ತು. ಆರಂಭದಲ್ಲೇ ಕೈಲ್ ಜೇಮಿಸನ್ ಅವರು ಆರ್ಸಿಬಿಗೆ ಆಘಾತ ನೀಡಿದರು. ಆರ್ಸಿಬಿ 18 ರನ್ಗಳಿಸಿ ಆಡ್ತಿದ್ದಾಗ 1.4ನೇ ಓವರ್ನಲ್ಲಿ ಫಿಲ್ ಸಾಲ್ಟ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಸಾಲ್ಟ್ 9 ಬಾಲ್ನಲ್ಲಿ 16 ರನ್ಗಳಿಸಿ ಕ್ರೀಸ್ನಿಂದ ನಿರ್ಗಮಿಸಿದರು.
ಟಾಸ್ ಸೋತ ಆರ್ಸಿಬಿ ಮೊದಲು ಬ್ಯಾಟಿಂಗ್ಗೆ ಬಂದಿತ್ತು. ಆರಂಭದಲ್ಲೇ ಕೈಲ್ ಜೇಮಿಸನ್ ಅವರು ಆರ್ಸಿಬಿಗೆ ಆಘಾತ ನೀಡಿದರು. ಆರ್ಸಿಬಿ 18 ರನ್ಗಳಿಸಿ ಆಡ್ತಿದ್ದಾಗ 1.4ನೇ ಓವರ್ನಲ್ಲಿ ಫಿಲ್ ಸಾಲ್ಟ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಸಾಲ್ಟ್ 9 ಬಾಲ್ನಲ್ಲಿ 16 ರನ್ಗಳಿಸಿ ಕ್ರೀಸ್ನಿಂದ ನಿರ್ಗಮಿಸಿದರು.
ಇದನ್ನೂ ಓದಿ: 18 ವರ್ಷದ ಕನಸು ಕೊನೆಗೂ ನನಸು.. ಟ್ರೋಫಿ ಗೆಲ್ತಿದ್ದಂತೆಯೇ ಕೊಹ್ಲಿ ಕಣ್ಣೀರು.. VIDEO
ಕೊಹ್ಲಿ ಜವಾಬ್ದಾರಿಯುತ ಆಟ..
16 ಬಾಲ್ನಲ್ಲಿ 26 ರನ್ಗಳಿಸಿ ಹೊರನಡೆದರು. ವಿಕೆಟ್ ಮೇಲೆ ವಿಕೆಟ್ ಬೀಳುತ್ತಿದ್ದರೂ ವಿರಾಟ್ ಕೊಹ್ಲಿ ಕ್ರೀಸ್ ಕಚ್ಚಿ ನಿಂತಿದ್ದರು. 35 ಬಾಲ್ ಎದುರಿಸಿದ ವಿರಾಟ್ 43 ರನ್ಗಳಿಸಿ ಒಮರ್ ಜಾಯ್ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಲಿಯಾಮ್ ಲಿವಿಂಗ್ಸ್ಟೋನ್ 2 ಸಿಕ್ಸರ್ನೊಂದಿಗೆ 25 ರನ್ಗಳ ಕಾಣಿಕೆ ನೀಡಿದರು. ಉಪನಾಯಕ 240 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬಿಸಿ 10 ಬಾಲ್ನಲ್ಲಿ 24 ರನ್ಗಳ ಕಾಣಿಕೆ ನೀಡಿದರು. ಶೆಫಾರ್ಡ್ 17 ರನ್ಗಳಿಸಿ ಔಟ್ ಆದರೆ, ಕೃನಾಲ್ ಪಾಂಡ್ಯ 4 ರನ್ಗಳಿಸಿ ಔಟ್ ಆದರು. ಕೊನೆಯದಾಗಿ ಆರ್ಸಿಬಿ 190 ರನ್ಗಳಿಸಿತ್ತು.
ಆ ಮೂಲಕ ಪಂಜಾಬ್ ಕಿಂಗ್ಸ್ ಗೆಲುವಿಗೆ 191 ರನ್ಗಳು ಬೇಕಾಗಿತ್ತು. ಆದರೆ ಆರ್ಸಿಬಿ ಬೌಲರ್ಗಳ ಮುಂದೆ ಪಂಜಾಬ್ ಕಿಂಗ್ಸ್ ಬ್ಯಾಟರ್ಗಳ ಆಟ ನಡೆಯಲಿಲ್ಲ. ಕೊನೆಯದಾಗಿ 20 ಓವರ್ಗೆ 7 ವಿಕೆಟ್ ಕಳೆದುಕೊಂಡು 184 ರನ್ಗಳಿಸಿ ಶ್ರೇಯಸ್ ಅಯ್ಯರ್ ಪಡೆ ಸೋಲಿಗೆ ಶರಣಾಯ್ತು. ಕಿಂಗ್ ವಿರಾಟ್ ಕೊಹ್ಲಿ ಬಳಗ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿತು.
ಇದನ್ನೂ ಓದಿ: ಇಂದು ರಾತ್ರಿ ನಾನು ಮಗುವಿನಂತೆ ಮಲಗುತ್ತೇನೆ.. ಕಪ್ ಗೆದ್ದ ಬಳಿಕ ಕೊಹ್ಲಿ ಏನಂದ್ರು..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ