/newsfirstlive-kannada/media/post_attachments/wp-content/uploads/2025/03/RCB-3.jpg)
ಆರ್ಸಿಬಿ ಕೇವಲ ತಂಡವಲ್ಲ. ಅದೊಂದು ಎಮೋಷನ್. ಅಭಿಮಾನಿಗಳ ಪಾಲಿನ ಉಸಿರು, ಹೆಮ್ಮೆ. ಉದೇ ಕಾರಣಕ್ಕೆ 17 ವರ್ಷಗಳು ಕಪ್ ಗೆಲ್ಲದಿದ್ದರೂ, ಆರ್ಸಿಬಿಗೆ ಜೈಕಾರ ಹಾಕಿ, ಹಾಡು ಹಾಡಿ, ಡ್ಯಾನ್ಸ್ ಮಾಡಿ ಪ್ರತಿ ಸೀಸನ್ನಲ್ಲಿ ಜೋಶ್ ತುಂಬ್ತಾರೆ. ಸೀಸನ್ ಕೊನೆಯಲ್ಲಿ ಸೋತು ನಿರಾಸೆ ಮೂಡಿಸುತ್ತೆ. ಒಮ್ಮೆಯೂ ಚಾಂಪಿಯನ್ ಆಗದ ಆರ್ಸಿಬಿ ಹಣೆಬರಹ ಈ ಸಲ ಬದಲಾಗಲಿದೆ. ಇದಕ್ಕೆ ಕಾರಣ ಈ ಸ್ಟಾರ್ ಆಟಗಾರರು!
ಆರ್ಸಿಬಿ ಟೀಮ್ಗೆ ಒಬ್ಬ ದೈತ್ಯ ಓಪನರ್ ಎಂಟ್ರಿ ನೀಡಿದ್ದಾನೆ. ಆತನೇ ಇಂಗ್ಲೆಂಡ್ನ ಡೇಂಜರಸ್ ಓಪನರ್ ಫಿಲ್ ಸಾಲ್ಟ್. ಕ್ರಿಸ್ ಗೇಲ್ ನಂತರ ಡಿಸ್ಟ್ರಕ್ಟೀವ್ ಓಪನರ್ ಆರ್ಸಿಬಿಗೆ ಸಿಕ್ಕಿರಲಿಲ್ಲ. ಆದ್ರೀಗ ಈ ಬಾಹುಬಲಿ ಓಪನರ್ ಫಿಲ್ ಸಾಲ್ಟ್, ಕ್ರಿಸ್ ಕಚ್ಚಿ ನಿಂತರೆ ಆರ್ಭಟ ಯಾರಿಂದ್ಲೂ ತಡೆಯೋಕೆ ಆಗಲ್ಲ. ಹೀಗಾಗಿ ಫಿಲ್ ಸಾಲ್ಟ್ ಎಂಟ್ರಿಕೊಟ್ಟಿರೋದು ಆರ್ಸಿಬಿ ತಂಡದ ಬ್ಯಾಟಿಂಗ್ಗೆ ಆನೆ ಬಲ ಬಂದಾಂತಾಗಿದೆ. ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಜೊತೆಗೆ ಫಿಲ್ ಸಾಲ್ಟ್ ರನ್ ಸುನಾಮಿ ಎಬ್ಬಿಸೋದು ಗ್ಯಾರೆಂಟಿ..
ಇದನ್ನೂ ಓದಿ: ವಿದ್ಯಾವಾಚಸ್ಪತಿ, ಹಿರಿಯ ಸಾಹಿತಿ ಡಾ. ಪಂಚಾಕ್ಷರಿ ಹಿರೇಮಠ ನಿಧನ.. ಗಣ್ಯರಿಂದ ಸಂತಾಪ
ಆರ್ಸಿಬಿಯ ಬತ್ತಳಿಕೆಯಲ್ಲಿ ಸೂಪರ್ ಮಿಸೈಲ್ಗಳಿವೆ. ಕ್ಷಣಾರ್ದದಲ್ಲಿ ಎದುರಾಳಿಗಳನ್ನ ಮಟಾಶ್ ಮಾಡುವ ಸಾಮರ್ಥ್ಯ ಈ ಆಸಿಸ್ ಆ್ಯಂಡ್ ಇಂಗ್ಲೆಂಡ್ ಮಿಸೈಲ್ಗಳಿವೆ. ಆ ಮಿಸೈನ್ಗಳ ಹೆಸರೇ ಆಸ್ಟ್ರೇಲಿಯಾದ ಆಲ್ರೌಂಡರ್ ಟಿಮ್ ಡೇವಿಡ್, ಇಂಗ್ಲೆಂಡ್ನ ಲಿಯಾಮ್ ಲಿವಿಂಗ್ ಸ್ಟೋನ್.
ಇಂಗ್ಲೆಂಡ್, ಆಸಿಸ್ ಆಲ್ರೌಂಡರ್ ಜೊತೆಗಿರುವ ಮತೊಬ್ಬ ದೈತ್ಯ ಆಲ್ರೌಂಡರ್ ರೊಮಾರಿಯೋ ಶೆಫಾರ್ಡ್. ವಿಂಡೀಸ್ನ ದೈತ್ಯನಾಗಿರುವ ರೊಮಾರಿಯೋ ಶೆಫರ್ಡ್, ಅದ್ಭುತ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.
ಸಿಕ್ಸರ್ನ ಸಿಡಿಗುಂಡು ಶರ್ಮಾ
ಜಿತೇಶ್ ಶರ್ಮಾ, ನೋಡಲು ಸಣ್ಣ ಇದ್ದರೂ ಇವರು ಸಿಡಿಸೋ ಒಂದೊಂದು ಸಿಕ್ಸರ್ ವಾವ್ ಎನಿಸುತ್ತೆ. ಇಷ್ಟು ಸುಲಭಕ್ಕೆ ಸಿಕ್ಸರ್ ಸಿಡಿಸಬಹುದಾ ಅನ್ನೋ ಭಾವನೆ ಉಂಟಾಗುತ್ತೆ. ಹೇಳಿ ಕೇಳಿ ಆರ್ಸಿಬಿ ಹೋಮ್ಗ್ರೌಂಡ್ ಚಿನ್ನಸ್ವಾಮಿ ಚಿಕ್ಕ ಗ್ರೌಂಡ್. ಬ್ಯಾಟ್ಸ್ಮನ್ಗಳ ಪಾಲಿನ ಸ್ವರ್ಗ. ಇದೇ ಕಾರಣಕ್ಕೆ ಬೌಲಿಂಗ್ ಆರ್ಸಿಬಿ ತನ್ನ ಬತ್ತಳಿಕೆಗೆ ಮೂರು ಮಿಷನ್ ಗನ್ಸ್ ತಂದಿಟ್ಟಿದೆ. ಈ ಪೈಕಿ ಒಬ್ಬರು ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್. ಪವರ್ ಪ್ಲೇ, ಡೆತ್ ಓವರ್ಗಳಲ್ಲಿ ಬ್ಯಾಟ್ಸ್ಮನ್ಗಳಿಗೆ ಚಳ್ಳೆ ಹಣ್ಣು ತಿನ್ನಿಸುವ ಭುವಿಯ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ.
ಇದನ್ನೂ ಓದಿ: 9 ತಿಂಗಳ ಬಳಿಕ ಭೂಮಿಗೆ ಬರ್ತಿದ್ದಂತೆ ಏನೆಲ್ಲ ಸಂಭವಿಸ್ತದೆ.. NASA ರೆಸ್ಕ್ಯೂ ಆಪರೇಷನ್ ಹೇಗಿತ್ತು..?
ಭುವನೇಶ್ವರ್ ಜೊತೆ ಆರ್ಸಿಬಿ ಶಕ್ತಿಯಾಗಿ ಕಾಣ್ತಿರುವುದು ಆಸ್ಟ್ರೇಲಿಯಾದ ಪೇಸ್ ಗನ್ ಜೋಶ್ ಹೇಜಲ್ವುಡ್. ಎಂಥ ಕಂಡೀಷನ್ಸ್ನಲ್ಲೂ ಸ್ಟಾರ್ ಬ್ಯಾಟ್ಸ್ಮನ್ಗಳನ್ನೇ ನಡುಗಿಸಬಲ್ಲ ಈತನ ಜೊತೆ ಥೇಟ್ ಲಸಿತ್ ಮಲಿಂಗರಂತೆ ಬೌಲಿಂಗ್ ಮಾಡೋ ಲಂಕಾದ ನುವಾನ್ ತುಷಾರ, ಕರಾರುವಕ್ ಯಾರ್ಕರ್ ಹಾಕೋದ್ರಲ್ಲಿ ಪಂಟರ್. ಈ ಮೂವರ ಕಾಂಬಿನೇಷನ್ ವರ್ಕ್ ಆಗಿಬಿಟ್ರೆ, ಆರ್ಸಿಬಿ ಕಪ್ ಗೆಲ್ಲೋದನ್ನ ಆ ಬ್ರಹ್ಮನಿಂದಲೂ ತಡಿಯೋಕೆ ಸಾಧ್ಯವಿಲ್ಲ.
ಕೃನಾಲ್ ಪಾಂಡ್ಯ, ಮನೋಜ್ ಬಾಂಡೆಗೆ, ಸುಯಾಶ್ ಶರ್ಮಾ ಸಹ ಆರ್ಸಿಬಿಯ ನಯಾ ಮ್ಯಾಚ್ ವಿನ್ನರ್ಗಳು ಅನ್ನೋದನ್ನ ಮರೆಯುವಂತಿಲ್ಲ.
ಇದನ್ನೂ ಓದಿ: ನ್ಯೂ RCB ಟೀಮ್ ಹೇಗಿದೆ.. ಬಲಿಷ್ಠ ತಂಡದ ಸ್ಟ್ರೆಂಥ್- ವೀಕ್ನೆಸ್ ಏನೇನು ಇವೆ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್