/newsfirstlive-kannada/media/post_attachments/wp-content/uploads/2024/07/Rahul-Dravid-1.jpg)
ಬರೋಬ್ಬರಿ 17 ವರ್ಷಗಳ ತಪಸ್ಸಿನ ಬಳಿಕ ಟೀಮ್​ ಇಂಡಿಯಾ ಟಿ20 ವಿಶ್ವಕಪ್​ ಗೆದ್ದಿದೆ. ವಿಶ್ವಕಪ್​ ಗೆದ್ದ ಬೆನ್ನಲ್ಲೇ ಕ್ಯಾಪ್ಟನ್​ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ಗುಡ್​​ ಬೈ ಹೇಳಿದ್ರು. ಜತೆಗೆ ಟೀಮ್​ ಇಂಡಿಯಾ ಮುಖ್ಯ ಕೋಚ್​ ಸ್ಥಾನದಿಂದ ರಾಹುಲ್​ ದ್ರಾವಿಡ್​ ಕೂಡ ಕೆಳಗಿಳಿದ್ರು.
ಇನ್ನು, ರಾಹುಲ್​ ದ್ರಾವಿಡ್​​​ ನಿರ್ಗಮನದ ಬಳಿಕ ಟೀಮ್​ ಇಂಡಿಯಾ ಮುಖ್ಯ ಕೋಚ್​ ಗೌತಮ್​ ಗಂಭೀರ್​ ಅನೌನ್ಸ್​ ಆಗಿದ್ದಾರೆ. ಹಾಗಾಗಿ ರಾಹುಲ್​ ದ್ರಾವಿಡ್​​ ಈಗ ರೆಸ್ಟ್​ನಲ್ಲಿದ್ದು, ವಿಶ್ವಕಪ್​​ ಗೆಲ್ಲಿಸಿಕೊಟ್ಟ ಕೋಚ್​​ಗೆ ಭಾರೀ ಡಿಮ್ಯಾಂಡ್​​​ ಶುರುವಾಗಿದೆ.
ಹೌದು, 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಈಗಿನಿಂದಲೇ ಎಲ್ಲಾ ಫ್ರಾಂಚೈಸಿಗಳು ತಯಾರಿ ನಡೆಸಿಕೊಂಡಿದೆ. ಈ ವರ್ಷದ ಕೊನೆ ಡಿಸೆಂಬರ್​​ ತಿಂಗಳಲ್ಲಿ 2025ರ ಐಪಿಎಲ್​​ನ ಮೆಗಾ ಆಕ್ಷನ್​ ನಡೆಯಲಿದೆ. ಈ ಮೆಗಾ ಆಕ್ಷನ್​​ನಲ್ಲಿ ಐಪಿಎಲ್​​ ಫ್ರಾಂಚೈಸಿಗಳು ಎಲ್ಲರನ್ನು ಬಿಟ್ಟು ತಮಗೆ ಬೇಕಾದ ಆಟಗಾರರನ್ನು ಮತ್ತೆ ಖರೀದಿ ಮಾಡಬೇಲೇಬೇಕಿದೆ. ಈ ಮುನ್ನವೇ ರಾಹುಲ್​ ದ್ರಾವಿಡ್​​ಗೆ ಹಲವು ಫ್ರಾಂಚೈಸಿಗಳು ಮಣೆ ಹಾಕಿವೆ ಎನ್ನಲಾಗುತ್ತಿದೆ.
ರಾಹುಲ್​ ದ್ರಾವಿಡ್​ಗೆ ರಾಜಸ್ಥಾನ್​ ರಾಯಲ್ಸ್​ ಮಣೆ!
ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಅಲ್ಲ ಬದಲಿಗೆ ರಾಜಸ್ಥಾನ್​​ ರಾಯಲ್ಸ್​​​​​​​​ ರಾಹುಲ್​ ದ್ರಾವಿಡ್​ ಅವರನ್ನು ಕೋಚ್​ ಆಗುವಂತೆ ಅಪ್ರೋಚ್​ ಮಾಡಿದೆ ಎಂದು ತಿಳಿದು ಬಂದಿದೆ. ರಾಜಸ್ಥಾನ್​ ರಾಯಲ್ಸ್​ ಮನವಿಗೆ ಒಪ್ಪಿಗೆ ನೀಡಿರೋ ರಾಹುಲ್​​ ದ್ರಾವಿಡ್​ 2025ರ ಐಪಿಎಲ್​​ಗಾಗಿ ತಂಡದ ಮುಖ್ಯ ಕೋಚ್​​ ಆಗಲಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us