/newsfirstlive-kannada/media/post_attachments/wp-content/uploads/2024/11/RCB.jpg)
ಇದೇ ತಿಂಗಳು 24 ಮತ್ತು 25 ರಂದು ದುಬೈನಲ್ಲಿ ಐಪಿಎಲ್-2025 ಮೆಗಾ ಅಕ್ಷನ್ ನಡೆಯಲಿದೆ. ದೊಡ್ಡ ದೊಡ್ಡ ಸ್ಟಾರ್ಗಳನ್ನು ಖರೀದಿಸಲು ಫ್ರಾಂಚೈಸಿಗಳು ತುದಿಗಾಲಲ್ಲಿ ಇವೆ. ಅದರಲ್ಲಿ ಆರ್ಸಿಬಿ ಕೂಡ ಹೊರತಾಗಿಲ್ಲ.
ಕೆಲವು ವರದಿಗಳ ಪ್ರಕಾರ ಟೀಂ ಇಂಡಿಯಾದ ಸ್ಟಾರ್ ವೇಗಿ ಅರ್ಷದೀಪ್ ಅವರನ್ನು ಖರೀದಿಸಲು ಆರ್ಸಿಬಿ ಪ್ಲಾನ್ ಮಾಡಿಕೊಂಡಿದ್ಯಂತೆ. ಎಲ್ಲವೂ ಅಂದುಕೊಂಡಂತೆ ಆದರೆ ಆದರೆ ಆರ್ಸಿಬಿ ಯುವ ವೇಗಿಯನ್ನು ಖರೀದಿಸಲಿದೆ. ಆದರೆ ಅರ್ಷದೀಪ್ರನ್ನು ಖರೀದಿಸಲು ಎಲ್ಎಸ್ಜಿ ಕೂಡ ಹೊಂಚು ಹಾಕಿದೆ ಎನ್ನಲಾಗಿದೆ.
ಒಂದು ವೇಳೆ ಹಾಗೇನಾದರು ಆದರೆ ಅರ್ಷದೀಪ್ ಸಿಂಗ್ ದಾಖಲೆಯ ಮೊತ್ತಕ್ಕೆ ಬಿಡ್ ಆಗಲಿದ್ದಾರೆ. ಅರ್ಷದೀಪ್ ಅವರು, 2024ರ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದರು. ಪಂಜಾಬ್ ಇಬ್ಬರನ್ನು ಮಾತ್ರ ಉಳಿಸಿಕೊಂಡಿದೆ. ಶಶಾಂಕ್ ಸಿಂಗ್, ಪ್ರಭ್ ಸಿಮ್ರಾನ್ ಸಿಂಗ್ರನ್ನು ರಿಟೈನ್ಡ್ ಮಾಡಿಕೊಂಡಿದೆ. ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್ರನ್ನೂ ಕೈಬಿಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ