/newsfirstlive-kannada/media/post_attachments/wp-content/uploads/2024/11/RCB_News1.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಭಾರೀ ಕುತೂಹಲ ಮೂಡಿಸಿದೆ. ಮುಂದಿನ ಸೀಸನ್​​ಗೆ ಮುನ್ನ ನಡೆಯಲಿರೋ ಐಪಿಎಲ್​ ಮೆಗಾ ಹರಾಜಿಗಾಗಿ ಎಲ್ಲರೂ ಬಹಳ ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಎಲ್ಲಾ ಐಪಿಎಲ್​​ ತಂಡಗಳು ಅಕ್ಟೋಬರ್​​ 31ನೇ ತಾರೀಕು ರೀಟೈನ್​​ ಲಿಸ್ಟ್​​ ಸಲ್ಲಿಸಿವೆ.
ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಐವರನ್ನು ರೀಟೈನ್​ ಮಾಡಿಕೊಂಡು ಸ್ಟಾರ್​ ಆಟಗಾರರಿಗೆ ಕೊಕ್​​ ನೀಡಿದೆ. ಅದರಲ್ಲೂ ಕೆಕೆಆರ್ ಐಪಿಎಲ್​​ ವಿನ್ನಿಂಗ್​ ಕ್ಯಾಪ್ಟನ್​ ಶ್ರೇಯಸ್​​ ಅಯ್ಯರ್​ ಅವರನ್ನೇ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಜತೆಗೆ ಕಳೆದ ಸೀಸನ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಸ್ಟಾರ್​​ ಬ್ಯಾಟರ್​ ಫಿಲಿಪ್ ಸಾಲ್ಟ್ ಅವರನ್ನೇ ಕೈ ಬಿಡಲಾಗಿದೆ.
ಕೆಕೆಆರ್​​ಗೆ ಬಿಗ್​ ಶಾಕ್​​
ಕೆಕೆಆರ್​​ ತಂಡದಿಂದ ಕೈ ಬಿಟ್ಟ ಬೆನ್ನಲ್ಲೇ ಫಿಲಿಪ್ ಸಾಲ್ಟ್ ಸ್ಫೋಟಕ ಬ್ಯಾಟಿಂಗ್​​ ಮಾಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಬಿರುಸಿನ ಶತಕ ಬಾರಿಸಿದ್ರು. ಈ ಮೂಲಕ ತನ್ನ ಶಕ್ತಿ ತೋರಿಸಿದ್ರು. ಇದರ ಪರಿಣಾಮ ಬಾರ್ಬಡೋಸ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ 8 ವಿಕೆಟ್‌ಗಳಿಂದ ಜಯ ದಾಖಲಿಸಿದೆ.
ಫಿಲಿಪ್ ಸಾಲ್ಟ್ ಭರ್ಜರಿ ಶತಕ
ಇನ್ನು, ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್​​ ಮಾಡಿದ ಫಿಲಿಪ್ ಸಾಲ್ಟ್ ಶತಕ ಸಿಡಿಸಿದ್ರು. ಇವರು ಕೇವಲ 54 ಎಸೆತಗಳಲ್ಲಿ 9 ಬೌಂಡರಿ ಮತ್ತು 6 ಸಿಕ್ಸರ್‌ಗಳ ನೆರವಿನಿಂದ 103 ರನ್ ಚಚ್ಚಿ ಗೆಲುವು ಸಾಧಿಸಿದ್ರು.
ಆರ್‌ಸಿಬಿಗೆ ಬಂಪರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಪೋಟಕ ಆರಂಭಿಕ ಬ್ಯಾಟರ್ ಹುಡುಕಾಟದಲ್ಲಿದೆ. ಈ ಹೊತ್ತಲ್ಲೇ ಫಿಲಿಪ್​ ಅದ್ಭುತ ಶತಕ ಬಾರಿಸಿ ಆರ್​​ಸಿಬಿ ಗಮನ ಸೆಳೆದಿದ್ದಾರೆ. ಫಿಲಿಪ್ ಸಾಲ್ಟ್ ಆರ್‌ಸಿಬಿಗೆ ಬಂದ್ರೆ ಬ್ಯಾಟಿಂಗ್​​ ಬಲ ಹೆಚ್ಚಾಗಲಿದೆ. ಹೀಗಾಗಿ ಫಿಲಿಪ್ ಸಾಲ್ಟ್ ಆರ್‌ಸಿಬಿಗೆ ಉತ್ತಮ ಆಯ್ಕೆಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us