/newsfirstlive-kannada/media/post_attachments/wp-content/uploads/2023/08/CHAHAL_1.jpg)
ಐಪಿಎಲ್ ಆಕ್ಷನ್ಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಆರ್ಸಿಬಿಯ ಮಾಜಿ ಸ್ಟಾರ್ ಯಜುವೇಂದ್ರ ಚಹಾಲ್ ಮತ್ತೆ ಸುದ್ದಿಯಾಗುತ್ತಿದ್ದಾರೆ. ರಾಜಸ್ಥಾನ್ ರಾಯಲ್ಸ್ ಅವರನ್ನು ತಂಡದಿಂದ ಕೈಬಿಟ್ಟಿದ್ದು, ಚಹಾಲ್ ನೇರವಾಗಿ ಆಕ್ಷನ್ಗೆ ಎಂಟ್ರಿಯಾಗಿದ್ದಾರೆ.
ಬೆನ್ನಲ್ಲೇ ಚಹಾಲ್ ಅವರನ್ನು ಖರೀದಿಸಲು ಹಲವು ಫ್ರಾಂಚೈಸಿಗಳು ತುದಿಗಾಲಲ್ಲಿ ನಿಂತಿವೆ. ಅದರಲ್ಲಿ ಆರ್ಸಿಬಿ ಕೂಡ ಸೇರಿದೆ. ಆರ್ಸಿಬಿ ಚಹಾಲ್ರನ್ನು ಮತ್ತೆ ಖರೀದಿಸಲು ಲೆಕ್ಕಾಚಾರ ಹಾಕ್ತಿದೆ ಎಂದು ವರದಿಯಾಗಿದೆ. ಅದರ ಜೊತೆ ಅನೇಕ ತಂಡಗಳು ಚಹಾಲ್ ಮೇಲೆ ನಿಗಾ ಇಟ್ಟಿದ್ದು, ಹರಾಜಿನ ವೇಳೆ ಕೋಟಿ ಕೋಟಿ ಹಣವನ್ನು ಬಿಡ್ ಆಗುವ ನಿರೀಕ್ಷೆ ಇದೆ. ಪಂಜಾಬ್ ಕಿಂಕ್ಸ್, ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್, ಸನ್ರೈಸರ್ಸ್ ಹೈದ್ರಾಬಾದ್ ತಂಡ ಕೂಡ ಚಹಾಲ್ರನ್ನು ಬುಟ್ಟಿಗೆ ಹಾಕಿಕೊಳ್ಳಲು ಪ್ಲಾನ್ ಮಾಡಿವೆ ಎನ್ನಲಾಗಿದೆ.
ಇದನ್ನೂ ಓದಿ:13 ಭರ್ಜರಿ ಸಿಕ್ಸರ್.. 25 ಫೋರ್.. ಆಕ್ಷನ್ಗೆ ಮುನ್ನ ಅಬ್ಬರಿಸಿದ ಆರ್ಸಿಬಿ ಸ್ಟಾರ್ ಬ್ಯಾಟರ್
ಚಹಾಲ್ ಬಯಸೋದು ಯಾಕೆ..?
ಆರ್ಸಿಬಿ ಚಹಾಲ್ರನ್ನು ಬಯೋಸುತ್ತಿರೋದ್ರಲ್ಲಿ ಯಾವುದೇ ಅಚ್ಚರಿ ಇಲ್ಲ. 2025 ಐಪಿಎಲ್ ಹರಾಜಿಗೂ ಮೊದಲೇ ಅವರನ್ನು ಖರೀದಿಸುವ ಪ್ಲಾನ್ ಮಾಡಿತ್ತು ಆರ್ಸಿಬಿ. ಆದರೆ ಅದು ಸಾಧ್ಯವಾಗಿರಲಿಲ್ಲ. ಲೆಗ್ ಸ್ಪಿನ್ನರ್ ಆಗಿರುವ ಚಹಾಲ್, 2014 ರಿಂದ 2021ರವರೆಗೆ ಆರ್ಸಿಬಿ ಭಾಗವಾಗಿದ್ದರು. ಈ ಅವಧಿಯಲ್ಲಿ ಅವರು 114 ಪಂದ್ಯಗಳನ್ನು ಆಡಿ 177 ವಿಕೆಟ್ ಪಡೆದುಕೊಂಡಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅವರು ನೀಡುವ ಪ್ರದರ್ಶನ ಅದ್ಭುತ. ಅಂದು ಬೆಂಗಳೂರು ತಂಡದ ಗೆಲುವಿಗೆ ಚಹಾಲ್ ಮಾಡಿರುವ ಕೈಚಳಕವನ್ನು ಅಭಿಮಾನಿಗಳು ಇನ್ನೂ ಮರೆತಿಲ್ಲ.
ಇದನ್ನೂ ಓದಿ:ಸಂಜು ಸಿಡಿಸಿದ ಪವರ್ ಫುಲ್ ಸಿಕ್ಸರ್.. ಮಹಿಳಾ ಅಭಿಮಾನಿಗೆ ಬಡಿದ ಚೆಂಡು, ನೋವಿನಿಂದ ಕಣ್ಣೀರು
ಆರ್ಸಿಬಿ ಜೇಬಿನಲ್ಲಿ 83 ಕೋಟಿ ರೂಪಾಯಿ ಹಣ ಇದೆ. ಅದರಲ್ಲಿ ಚಹಾಲ್ರನ್ನು ಖರೀದಿಸಲು ಕೋಟಿ ಕೋಟಿ ಹಣ ನೀಡಲು ಸಿದ್ಧವಿದೆ. ಆರ್ಸಿಬಿ ದಂತಕತೆ ಎಬಿ ಡಿ ವಿಲಿಯರ್ಸ್ ಕೂಡ ಚಹಾಲ್ರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಲಕ್ಷಾಂತರ ಅಭಿಮಾನಿಗಳ ಆಸೆ ಕೂಡ ಇದೆ ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್