newsfirstkannada.com

240 ಎಸೆತಗಳಲ್ಲಿ 78 ಬಾಲ್​ಗಳು ಡಾಟ್; ಆರ್​ಸಿಬಿ ಫೇಲ್ ಆಗ್ತಿರೋದು ಇಲ್ಲೇ.. ಹೇಗೆ ಅಂತೀರಾ..?

Share :

Published April 6, 2024 at 1:04pm

    ಇಂದು ಆರ್​​​ಸಿಬಿ-ರಾಜಸ್ಥಾನ್​ ರಾಯಲ್ಸ್​​ ಮುಖಾಮುಖಿ

    ಪಿಂಕ್​ ಸಿಟಿ ಜೈಪುರದಲ್ಲಿ RCBಗೆ ರಾಯಲ್​ ಸವಾಲ್​..!

    ಇಂದಾದ್ರೂ ಗೆಲುವಿನ ಹಳಿಗೆ ಮರಳುತ್ತಾ ನಮ್ಮ ಆರ್​​ಸಿಬಿ?

ಐಪಿಎಲ್​ ಸೀಸನ್​ 17ರಲ್ಲೂ ಆರ್​​ಸಿಬಿಯ ಹಳೆ ಸಂಪ್ರದಾಯ ಮುಂದುವರೆದಿದೆ. ಹೋಮ್​ಗ್ರೌಂಡ್​ನಲ್ಲಿ ಬ್ಯಾಕ್​ ಡು ಬ್ಯಾಕ್​ ಸೋಲುಂಡು ಅಪಮಾನಕ್ಕೊಳಗಾಗಿದೆ. ಅಷ್ಟಕ್ಕೂ ಆರ್​​​ಸಿಬಿ ಹೀನಾಯ ಪ್ರದರ್ಶನಕ್ಕೆ ಕಾರಣ ಏನು? ಸ್ಟಾರ್​​ ಕ್ರಿಕೆಟರ್ಸ್​​ ದಂಡೇ ಇರೋ ಆರ್​​ಸಿಬಿ ಎಡವುತ್ತಿರೋದೆಲ್ಲಿ? ಕಂಪ್ಲೀಟ್​​ ಡಿಟೇಲ್ಸ್​..

ಐಪಿಎಲ್​ ಟೂರ್ನಿಯ 19 ನೇ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಪಿಂಕ್​ ಸಿಟಿ ಜೈಪುರದಲ್ಲಿ ರಾಯಲ್​ ಚಾಂಲೆಜರ್ಸ್​ ಬೆಂಗಳೂರು-ರಾಜಸ್ಥಾನ್​ ರಾಯಲ್ಸ್​​ ಮುಖಾಮುಖಿಯಾಗ್ತಿವೆ. ಹ್ಯಾಟ್ರಿಕ್​ ಜಯ ಸಾಧಿಸಿರೋ ರಾಜಸ್ಥಾನ್​ ಹೋಮ್​​ಗ್ರೌಂಡ್​ನಲ್ಲಿ ಮತ್ತೊಂದು ದಿಗ್ವಿಜಯದ ನಿರೀಕ್ಷೆಯಲ್ಲಿದೆ. ಸತತ 2 ಸೋಲಿನಿಂದ ಕಂಗೆಟ್ಟಿರೋ ಆರ್​​​ಸಿಬಿ ಕಥೆ ಅಯೋಮಯವಾಗಿದೆ.

ಆರ್​​ಸಿಬಿ ಹೊಸ ಅಧ್ಯಾಯ ಅಂತಾ ಅಭಿಯಾನ ಆರಂಭಿಸಿದ ಆರ್​​ಸಿಬಿಯ ಅಸಲಿ ಆಟ ಮೊದಲ 4 ಪಂದ್ಯಗಳಲ್ಲೇ ಬಟಾಬಯಲಾಗಿದೆ. 1 ಪಂದ್ಯ ಗೆದ್ದು 3 ಪಂದ್ಯಗಳಲ್ಲಿ ಹೀನಾಯ ಸೋಲಿಗೆ ಶರಣಾಗಿದೆ. ಲಾಯಲ್​ ಫ್ಯಾನ್ಸ್​​​ ಆರ್​​​ಸಿಬಿ ಆಟಕ್ಕೆ ಉಗಿದು ಉಪ್ಪಿನಕಾಯಿ ಹಾಕ್ತಿದ್ದಾರೆ. ನೋಡೋಕೆ ಆರ್​​​ಸಿಬಿ ಬಲಿಷ್ಠವಾಗೇ ಇದೆ. ವರ್ಲ್ಡ್​​ ಕ್ಲಾಸ್​ ಪ್ಲೇಯರ್ಸ್​ ಇದ್ದಾರೆ. ಆದ್ರೂ, ಫಲಿತಾಂಶ ಸೋಲು.

ಪವರ್​​ ಪ್ಲೇ, ಡೆತ್​ ಓವರ್​​ ಓಕೆ.. ಮಿಡಲ್​ ಓವರ್​ನ​​ದ್ದೇ ಸಮಸ್ಯೆ..!
ಈ ಸೀಸನ್​ನಲ್ಲಿ ಪವರ್​​ ಪ್ಲೆ ಹಾಗೂ ಡೆತ್​ ಓವರ್​​ಗಳಲ್ಲಿ ಆರ್​​ಸಿಬಿ ಪರ್ಫಾಮೆನ್ಸ್ ಅಬ್ಬಬ್ಬಾ ಅನ್ನುವಂತಿಲ್ಲ. ಆದ್ರೂ, ಒಕೆ ಒಕೆ ಅನ್ಬೋದು. ತಂಡದ ಅಸಲಿ ಸಮಸ್ಯೆ ಇರೋದು ಮಿಡಲ್​ ಓವರ್​​ನಲ್ಲಿ. 7ರಿಂದ 16ರವರೆಗಿನ ಓವರ್​​ಗಳಲ್ಲಿ ಆಡ್ತಿರುವ ಸ್ಲೋ ಬ್ಯಾಟಿಂಗ್​ ತಂಡಕ್ಕೆ ಹಿನ್ನಡೆಯಾಗ್ತಿದೆ.

ಮಿಡಲ್​ ಓವರ್​​ಗಳಲ್ಲಿ ಆರ್​​ಸಿಬಿ ಬ್ಯಾಟಿಂಗ್​
4 ಪಂದ್ಯಗಳಿಂದ ಮಿಡಲ್​ ಓವರ್​​​ನಲ್ಲಿ ಆಡಿದ 40 ಓವರ್​​ಗಳಲ್ಲಿ ಆರ್​​ಸಿಬಿ ಬ್ಯಾಟರ್ಸ್​​ಗಳಿಸಿರೋದು ಕೇವಲ 309 ರನ್​.! ಇಲ್ಲೇ 10 ವಿಕೆಟ್​ ಕಳೆದುಕೊಂಡಿದ್ದು, 7.72ರ ರನ್​ರೇಟ್​ ಹೊಂದಿದೆ. ಮಿಡಲ್​ ಓವರ್​​ನಲ್ಲಿ 40 ಓವರ್​​ ಅಂದ್ರೆ, 240 ಎಸೆತಗಳನ್ನ ಆರ್​​ಸಿಬಿ ಬ್ಯಾಟರ್ಸ್​​ ಎದುರಿಸಿದ್ದಾರೆ. ಈ 240 ಎಸೆತಗಳ ಪೈಕಿ 13 ಓವರ್​ ಅಂದ್ರೆ, 78 ಎಸೆತಗಳು ಡಾಟ್​ ಬಾಲ್ಸ್​​. ಉಳಿದ ಎಸೆತಗಳಲ್ಲಿ ಸಿಂಗಲ್​ ತೆಗೆದುಕೊಳ್ತಾ ಸ್ಟ್ರೈಕ್​ ರೊಟೇಟ್​ ಮಾಡಿದ್ದು, ಬೌಂಡರಿ-ಸಿಕ್ಸರ್​​​ಗಳು ಅಪರೂಪಕ್ಕೊಂದು ಬಂದಿವೆ. ಹೀಗಾದ್ರೆ ಹೇಗ್​ ರನ್​ ಬರುತ್ತೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಫೀಲ್ಡಿಂಗ್​ಗೆ ಅಡ್ಡಿಪಡಿಸಿದ ಜಡೇಜಾ; ರನೌಟ್​​ಗೆ ಅಪೀಲ್ ಮಾಡದೇ ವಿವಾದಕ್ಕೆ ಸಿಲುಕಿಕೊಂಡ ಕಮ್ಮಿನ್ಸ್​..!

RCB ಮಿಡಲ್​ ಓವರ್​ ರನ್​ ಲೆಕ್ಕಾಚಾರ
ಮಿಡಲ್​ ಓವರ್​ನಲ್ಲಿ ಎದುರಿಸಿರೋ 240 ಎಸೆತಗಳ ಪೈಕಿ 78 ಎಸೆತಗಳು ಡಾಟ್​​ ಆಗಿವೆ. ಉಳಿದಂತೆ 107 ಸಿಂಗಲ್​​ಗಳು, 17 ಡಬಲ್ಸ್​, 17 ಬೌಂಡರಿ ಹಾಗೂ ಕೇವಲ 13 ಸಿಕ್ಸರ್​​ಗಳು ಬಂದಿವೆ. ಆರ್​​ಸಿಬಿಯ ಮಿಡಲ್​ ಓವರ್​​ ರನ್​ ಬರಕ್ಕೆ ತಂಡದ ಬ್ಯಾಟಿಂಗ್​ ಲೈನ್​ಅಪ್​ ಕಾರಣವಾಗಿದೆ. ಟಾಪ್​ ಆರ್ಡರ್​ನಲ್ಲಿ ಬ್ಯಾಟಿಂಗ್​ ಮಾಡ್ತಿರೋ ಅನುಭವಿಗಳು ಹಾಗೂ ಸ್ಟಾರ್​​ಗಳು ಬಹು ಬೇಗ ಪೆವಿಲಿಯನ್​ ಸೇರ್ತಿದ್ದಾರೆ. ಒತ್ತಡದಲ್ಲಿ ಕಣಕ್ಕಿಳಿಯೋ ಅನಾನುಭವಿಗಳು ರನ್​ಗಳಿಗೆ ಪರದಾಡ್ತಿದ್ದಾರೆ.

ನೀವು ನೋಡಬಹುದು ಒತ್ತಡದಲ್ಲಿ ಯಾರು ಬ್ಯಾಟಿಂಗ್​ ಮಾಡ್ತಿದ್ದಾರೆ. ಭಾರತದ ಯುವ ಆಟಗಾರರು ಮತ್ತು ದಿನೇಶ್​ ಕಾರ್ತಿಕ್​. ಒತ್ತಡದಲ್ಲಿ ಆಡಬೇಕಾದ ಇಂಟರ್​ನ್ಯಾಷನಲ್​ ಕ್ರಿಕೆಟರ್ಸ್​ ಎಲ್ಲಿದ್ದಾರೆ. ಎಲ್ರೂ ಡ್ರೆಸ್ಸಿಂಗ್​ ರೂಮ್​ನಲ್ಲಿದ್ದಾರೆ. ಇವತ್ತಲ್ಲ, ಹಲವು ವರ್ಷಗಳಿಂದ ಇದೇ ಕಥೆ. ಒತ್ತಡ ಇದ್ದಾಗ ದೊಡ್ಡ ಆಟಗಾರರು ಒಬ್ಬರೂ ಇರಲ್ಲ. ಯುವ ಆಟಗಾರರು ಕೆಳ ಕ್ರಮಾಂಕದಲ್ಲಿ ಆಡ್ತಿರ್ತಾರೆ. ದೊಡ್ಡ ಆಟಗಾರರು ಟಾಪ್​ ಆರ್ಡರ್​ನಲ್ಲಿ ಆಡಿ ಬರ್ತಾರೆ. ಇದಕ್ಕಾಗಿಯೇ ಆರ್​​ಸಿಬಿ ಇಷ್ಟು ವರ್ಷದಿಂದ ಐಪಿಎಲ್​ ಗೆದ್ದಿಲ್ಲ-ಅಂಬಟಿ ರಾಯುಡು, ಮಾಜಿ ಕ್ರಿಕೆಟಿಗ

ರಾಯುಡು ಹೇಳಿರೋ ಈ ಮಾತು 100ಕ್ಕೆ 100ರಷ್ಟು ಸತ್ಯ. ಟಾಪ್​ ಆರ್ಡರ್​​ ಸ್ಟಾರ್​​ಗಳೆಲ್ಲಾ ಆರಂಭಿಕ ಓವರ್​ಗಳಲ್ಲೇ ವಿಕೆಟ್​ ಒಪ್ಪಿಸ್ತಾರೆ. ಪ್ರೆಶರ್​ ಟೈಮ್​ನಲ್ಲಿ ಯಂಗ್​ಸ್ಟರ್ಸ್​​ನ ಬಿಟ್ಟು ಆಡಿ ಅಂತಾರೆ. ಒತ್ತಡದಲ್ಲಿ ಅವ್ರು ಹೇಗ್​​ ಆಡೋಕೆ ಸಾಧ್ಯ. ಮುಂದಾದ್ರೂ ಆರ್​​ಸಿಬಿಯ ಸ್ಟಾರ್​​ಗಳು ಎಚ್ಚೆತ್ತುಕೊಂಡು ಪರ್ಫಾಮ್​ ಮಾಡಿ ಮಿಡಲ್​ ಆರ್ಡರ್​​ ರನ್​ ಬರಕ್ಕೆ ಮದ್ದಾಗಬೇಕಿದೆ. ಮ್ಯಾನೇಜ್​ಮೆಂಟ್​ ಕೂಡ ಬ್ಯಾಟಿಂಗ್​ ಆರ್ಡರ್​ಗೆ ಸರ್ಜರಿ ಮಾಡಿ, ಮ್ಯಾಕ್ಸ್​​ವೆಲ್​ರಂಥ ಆಟಗಾರರನ್ನ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಕಳಿಸಿದ್ರೂ, ತಂಡದ ದೃಷ್ಟಿಯಿಂದ ಒಳ್ಳೆಯದೇ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

240 ಎಸೆತಗಳಲ್ಲಿ 78 ಬಾಲ್​ಗಳು ಡಾಟ್; ಆರ್​ಸಿಬಿ ಫೇಲ್ ಆಗ್ತಿರೋದು ಇಲ್ಲೇ.. ಹೇಗೆ ಅಂತೀರಾ..?

https://newsfirstlive.com/wp-content/uploads/2024/04/RCB-22.jpg

Load More