ಬಿ.ವೈ ರಾಘವೇಂದ್ರ ಎದುರು ಅಖಾಡದಲ್ಲಿ RCB ಅಭಿಮಾನಿ; ಕೊಹ್ಲಿ ಫ್ಯಾನ್​ಗೆ ಸಿಕ್ಕಿದ್ದು ಎಷ್ಟು ವೋಟ್​?

author-image
Ganesh Nachikethu
Updated On
ಬಿ.ವೈ ರಾಘವೇಂದ್ರ ಎದುರು ಅಖಾಡದಲ್ಲಿ RCB ಅಭಿಮಾನಿ; ಕೊಹ್ಲಿ ಫ್ಯಾನ್​ಗೆ ಸಿಕ್ಕಿದ್ದು ಎಷ್ಟು ವೋಟ್​?
Advertisment
  • ಬಹುನಿರೀಕ್ಷಿತ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ!
  • ಶಿವಮೊಗ್ಗ ಕ್ಷೇತ್ರದ ಚುನಾವಣಾ ಅಂತಿಮ ಫಲಿತಾಂಶಕ್ಕೆ ಕ್ಷಣಗಣನೆ
  • ರಾಘವೇಂದ್ರ ಎದುರು ಕಣಕ್ಕಿಳಿದಿದ್ದ ಆರ್​​ಸಿಬಿ ಅಭಿಮಾನಿ!

ಶಿವಮೊಗ್ಗ: ಬಹುನಿರೀಕ್ಷಿತ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಅಂತಿಮ ಫಲಿತಾಂಶ ಹೊರಬೀಳಬೇಕಿದೆ. ಮೇ 7ನೇ ತಾರೀಕಿನಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಶೇ 78.33ರಷ್ಟು ಮತದಾನವಾಗಿತ್ತು. ಅಲ್ಲದೇ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಗೆಲುವು ಯಾರಿಗೆ? ಅನ್ನೋ ಕುತೂಹಲ ಇದೆ.

ಹಾಲಿ ಸಂಸದ ಬಿ. ವೈ. ರಾಘವೇಂದ್ರ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಗೀತಾ ಶಿವರಾಜ್ ಕುಮಾರ್ ಎದುರಾಳಿ ಆಗಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಸ್ ಈಶ್ವರಪ್ಪ ಕಣಕ್ಕಿಳಿದಿದ್ದು, ಆರ್​​​ಸಿಬಿ ಅಭಿಮಾನಿ ಬಂಡಿ ಎಂಬಾತ ಅಖಾಡದಲ್ಲಿ ಇದ್ದಾರೆ.

publive-image

ಸದ್ಯ ಸಿಕ್ಕಿರೋ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ 11ನೇ ಸುತ್ತಿನ ಮತ ಎಣಿಕೆ ಆರಂಭವಾಗಿದೆ. ಬಿ. ವೈ. ರಾಘವೇಂದ್ರ 414618, ಗೀತಾ ಶಿವರಾಜ್ ಕುಮಾರ್ 285391 ಮತಗಳು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ 15284 ಮತಗಳನ್ನು ಪಡೆದಿದ್ದಾರೆ. ಹಾಗೆಯೇ ಬಂಡಿ ಎಂಬ ಆರ್​​ಸಿಬಿ ಅಭಿಮಾನಿ 3983 ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ಕೊಹ್ಲಿ, ರೋಹಿತ್​ ಶರ್ಮಾ ಮಧ್ಯೆ ಜಗಳ ತಂದಿಟ್ಟ ಕ್ರಿಕೆಟರ್​.. ಅಸಲಿಗೆ ಆಗಿದ್ದೇನು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment