/newsfirstlive-kannada/media/post_attachments/wp-content/uploads/2025/06/SMG-RCB-FAN.jpg)
‘ಈ ಸಲ ಕಪ್ ನಮ್ದೇ ಆಗಿದೆ’. ಐಪಿಎಲ್ ಟ್ರೋಫಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುತ್ತಿಡುತ್ತಿದ್ದಂತೆಯೇ ಅಭಿಮಾನಿಗಳ ಸಂಭ್ರಮ ಸಖತ್ ಜೋರಾಗಿದೆ. ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗ್ತಿದೆ.
ಸಂಭ್ರಮಾಚರಣೆಯ ಖುಷಿಯಲ್ಲಿ ಶಿವಮೊಗ್ಗದಲ್ಲಿ ಅಭಿಮಾನಿಯೊಬ್ಬನ ಜೀವ ಹೋಗಿದೆ. ಆರ್ಸಿಬಿ ಕಪ್ ಗೆದ್ದ ಖುಷಿಯಲ್ಲಿ ಅಭಿಮಾನಿಗಳು ಬೈಕ್ ಱಲಿ ಮಾಡುತ್ತಿದ್ದರು. ಸವಳಂಗ ರಸ್ತೆಯ ಉಷಾ ನರ್ಸಿಂಗ್ ಹೋಂ ಸರ್ಕಲ್ ಬಳಿ ಭೀಕರ ಅಪಘಾತ ನಡೆದು, ಓರ್ವ ಯುವಕ ಪ್ರಾಣ ಬಿಟ್ಟಿದ್ದಾನೆ.
ಇದನ್ನೂ ಓದಿ: ಪಂಜಾಬ್ ಕಿಂಗ್ಸ್ಗೆ 13 ಕೋಟಿ ಹಣ.. ಚಾಂಪಿಯನ್ ಆರ್ಸಿಬಿಗೆ ಕೋಟಿ ಕೋಟಿ ದುಡ್ಡು..!
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಮ್ಯಾಚ್ ನಡೆಯಿತು. ಟಾಸ್ ಸೋತು ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಿತ್ತು. ಕೊಹ್ಲಿ ಅವರ 43 ರನ್‌ಗಳ ನೆರವಿನಿಂದ ಆರ್ಸಿಬಿ 190 ರನ್‌ಗಳ ಬೃಹತ್ ಸ್ಕೋರ್ ಗಳಿಸಿತ್ತು. 191 ರನ್‌ಗಳ ಗುರಿ ಬೆನ್ನು ಹತ್ತಿದ್ದ ಪಂಜಾಬ್ ಕಿಂಗ್ಸ್, 20 ಓವರ್‌ಗಳಲ್ಲಿ ಕೇವಲ 184 ರನ್‌ಗಳಿಸಿ ಸೋಲಿಗೆ ಶರಣಾಯ್ತು. ಆ ಮೂಲಕ ಆರ್ಸಿಬಿ ಟ್ರೋಫಿಗೆ ಮುತ್ತಿಟ್ಟು 18 ವರ್ಷಗಳ ಕನಸನ್ನು ನನಸು ಮಾಡಿಕೊಂಡಿತು.
ಇದನ್ನೂ ಓದಿ: ಟ್ರೋಫಿ ಗೆದ್ದ ಬೆನ್ನಲ್ಲೇ ವಿಜಯ್ ಮಲ್ಯ ಖುಷ್.. ಏನು ಹೇಳಿದ್ದಾರೆ ಗೊತ್ತಾ..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ